ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ ಟಾಟಾ ಪಂಚ್: ಅತಿ ಹೆಚ್ಚು ಸೇಲ್ ಆದ ಟಾಪ್ 10 ಕಾರುಗಳು ಇಲ್ಲಿದೆ

ಮಾರುತಿ ಸುಜುಕಿ ಬ್ರೆಝಾವನ್ನು ಟಾಟಾ ಪಂಚ್ ಮತ್ತು ನೆಕ್ಸಾನ್ ಹಿಂದಿಕ್ಕಿದೆ. ಮಾರುತಿ ಸುಜುಕಿ ಸುಜುಕಿ ಸಿಯಾಜ್ ಮಾರಾಟವು ವರ್ಷದಿಂದ ವರ್ಷಕ್ಕೆ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ಎಸ್​ಯುವಿಗಳಾದ ಕಿಯೋ ಸೊನೆಟ್ ಮತ್ತು ಮಹೀಂದ್ರಾ ಥಾರ್-XUV 3XO ಗಳ ಮಾರಾಟದಲ್ಲಿ ಕೂಡ ಭಾರಿ ಏರಿಕೆ ಕಂಡಿವೆ.

ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ ಟಾಟಾ ಪಂಚ್: ಅತಿ ಹೆಚ್ಚು ಸೇಲ್ ಆದ ಟಾಪ್ 10 ಕಾರುಗಳು ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 09, 2024 | 12:12 PM

ಭಾರತದ ಅತ್ಯುತ್ತಮ ಮಾರಾಟವಾದ ಟಾಪ್ 10 ಕಾಂಪ್ಯಾಕ್ಟ್ ಎಸ್‌ಯುವಿ: ಕಳೆದ ನವೆಂಬರ್‌ನಲ್ಲಿ ಮಾರಾಟವಾದ ಕಾರು ಮತ್ತು ಎಸ್‌ಯುವಿಗಳ ವರದಿ ಹೊರಬಿದ್ದಿದ್ದು, ಮಾಡೆಲ್‌ವಾರು ಮಾರಾಟದ ಅಂಕಿಅಂಶಗಳು ಕೂಡ ಬಂದಿವೆ. ಕಳೆದ ತಿಂಗಳು ಕಾಂಪ್ಯಾಕ್ಟ್ ಎಸ್‌ಯುವಿಗಳ ಮಾರಾಟದಲ್ಲಿ ಸಾಕಷ್ಟು ಏರಿಳಿತಗಳು ಕಂಡುಬಂದವು. ಮಾರುತಿ ಸುಜುಕಿ ಬ್ರೆಝಾವನ್ನು ಟಾಟಾ ಪಂಚ್ ಮತ್ತು ನೆಕ್ಸಾನ್ ಹಿಂದಿಕ್ಕಿದೆ. ಮಾರುತಿ ಸುಜುಕಿ ಸುಜುಕಿ ಸಿಯಾಜ್ ಮಾರಾಟವು ವರ್ಷದಿಂದ ವರ್ಷಕ್ಕೆ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ.

ಎಸ್​ಯುವಿಗಳಾದ ಕಿಯೋ ಸೊನೆಟ್ ಮತ್ತು ಮಹೀಂದ್ರಾ ಥಾರ್-XUV 3XO ಗಳ ಮಾರಾಟದಲ್ಲಿ ಕೂಡ ಭಾರಿ ಏರಿಕೆ ಕಂಡಿವೆ. ಹುಂಡೈನ SUVಗಳಾದ ವೆನ್ಯೂ ಮತ್ತು ಎಕ್ಸೆಟರ್ ಮಾರಾಟದಲ್ಲಿ ವಾರ್ಷಿಕ ಕುಸಿತ ಕಂಡಿದೆ. ಹಾಗಾದರೆ, ಕಳೆದ ನವೆಂಬರ್‌ನಲ್ಲಿ ಸೇಲ್ ಆದ ಟಾಪ್ 10 ಕಾಂಪ್ಯಾಕ್ಟ್ ಎಸ್​ಯುವಿಗಳು ಯಾವುವು ಎಂಬುದನ್ನು ನೋಡೋಣ.

1. ಟಾಟಾ ಪಂಚ್

ದೇಶದ ನಂಬರ್ 1 ಕಾಂಪ್ಯಾಕ್ಟ್ ಎಸ್‌ಯುವಿ ಟಾಟಾ ಪಂಚ್ ಅನ್ನು ನವೆಂಬರ್‌ನಲ್ಲಿ 15,435 ಗ್ರಾಹಕರು ಖರೀದಿಸಿದ್ದಾರೆ ಮತ್ತು ಈ ಸಂಖ್ಯೆಯು ವಾರ್ಷಿಕ ಶೇಕಡಾ 7 ರಷ್ಟು ಹೆಚ್ಚಳವಾಗಿದೆ.

2. ಟಾಟಾ ನೆಕ್ಸನ್

ಟಾಟಾ ನೆಕ್ಸಾನ್ ಕಳೆದ ನವೆಂಬರ್ ನಲ್ಲಿ ಭಾರಿ ಪುನರಾಗಮನವನ್ನು ಮಾಡಿತು ಮತ್ತು ಎರಡನೇ ಅತಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ SUV ಆಗಿದೆ. ನೆಕ್ಸಾನ್ ಅನ್ನು ಕಳೆದ ತಿಂಗಳು 3 ಪ್ರತಿಶತದಷ್ಟು ವಾರ್ಷಿಕ ಹೆಚ್ಚಳದೊಂದಿಗೆ 15,329 ಗ್ರಾಹಕರು ಖರೀದಿಸಿದ್ದಾರೆ.

3. ಮಾರುತಿ ಸುಜುಕಿ ಬ್ರೆಝಾ

ಮಾರುತಿ ಸುಜುಕಿಯ ಹೆಚ್ಚು ಮಾರಾಟವಾಗುವ ಬ್ರೆಝಾ ನವೆಂಬರ್‌ನಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ ಮತ್ತು ಈ ಕಾಂಪ್ಯಾಕ್ಟ್ SUV ಯ 14,918 ಯುನಿಟ್‌ಗಳು ಮಾರಾಟವಾಗಿವೆ, ಇದು ವಾರ್ಷಿಕ 11 ಪ್ರತಿಶತದಷ್ಟು ಹೆಚ್ಚಳವಾಗಿದೆ.

4. ಮಾರುತಿ ಸುಜುಕಿ ಫ್ರಾಂಕ್ಸ್

ಮಾರುತಿ ಸುಜುಕಿಯ ಸೊಗಸಾದ ಎಸ್​ಯುವಿ ಫ್ರಾಂಕ್ಸ್ ನವೆಂಬರ್‌ನಲ್ಲಿ ನಾಲ್ಕನೇ ಅತಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ SUV ಆಗಿದೆ. ಇದು ವಾರ್ಷಿಕ ಶೇ. 51 ರಷ್ಟು ಹೆಚ್ಚಳದೊಂದಿಗೆ 14,882 ಗ್ರಾಹಕರು ಖರೀದಿಸಿದ್ದಾರೆ.

5. ಹುಂಡೈ ವೆನ್ಯೂ

ಹುಂಡೈ ಮೋಟಾರ್ ಇಂಡಿಯಾದ ಜನಪ್ರಿಯ ಕಾಂಪ್ಯಾಕ್ಟ್ ಎಸ್‌ಯುವಿ ವೆನ್ಯೂ ಕಳೆದ ನವೆಂಬರ್‌ನಲ್ಲಿ 9754 ಯುನಿಟ್‌ಗಳನ್ನು ಮಾರಾಟ ಮಾಡಿತು ಮತ್ತು ಇದು ವಾರ್ಷಿಕ 13 ಪ್ರತಿಶತದಷ್ಟು ಕುಸಿತವಾಗಿದೆ.

6. ಕಿಯಾ ಸೋನೆಟ್

ಕಾಂಪ್ಯಾಕ್ಟ್ ಎಸ್​ಯುವಿ ವಿಭಾಗದಲ್ಲಿ ಅತ್ಯಂತ ಜನಪ್ರಿಯ ವಾಹನವಾದ ಕಿಯಾ ಸೋನೆಟ್ ಅನ್ನು ನವೆಂಬರ್‌ನಲ್ಲಿ 9255 ಗ್ರಾಹಕರು ಖರೀದಿಸಿದ್ದಾರೆ ಮತ್ತು ಇದು ವಾರ್ಷಿಕ 44 ಶೇಕಡಾ ಹೆಚ್ಚಳವಾಗಿದೆ.

ಇದನ್ನೂ ಓದಿ: ರೋಲ್ಸ್ ರಾಯ್ಸ್ ಕಾರುಗಳನ್ನು ಏಕೆ ಕ್ರ್ಯಾಶ್ ಟೆಸ್ಟ್ ಮಾಡಲ್ಲ ಗೊತ್ತೇ?: ಇಲ್ಲಿದೆ ಸೀಕ್ರೆಟ್

7. ಮಹೀಂದ್ರ ಥಾರ್

ಮಹೀಂದ್ರಾ & ಮಹೀಂದ್ರಾದ ಕಾಂಪ್ಯಾಕ್ಟ್ ಎಸ್​ಯುವು ಥಾರ್ ಕಳೆದ ತಿಂಗಳು 8708 ಯುನಿಟ್‌ಗಳನ್ನು ಮಾರಾಟ ಮಾಡಿದೆ ಮತ್ತು ಇದು ವಾರ್ಷಿಕ 50 ಶೇಕಡಾ ಹೆಚ್ಚಳವಾಗಿದೆ.

8. ಮಹೀಂದ್ರ XUV 3XO

ಈ ವರ್ಷ ಬಿಡುಗಡೆಯಾದ ಮಹೀಂದ್ರ ಆಂಡ್ ಮಹೀಂದ್ರಾ XUV 3XO ಪ್ರತಿ ತಿಂಗಳು ಉತ್ತಮ ಮಾರಾಟವನ್ನು ಪಡೆಯುತ್ತಿದೆ. ಕಳೆದ ನವೆಂಬರ್‌ನಲ್ಲಿ ಇದನ್ನು 7656 ಗ್ರಾಹಕರು ಖರೀದಿಸಿದ್ದಾರೆ ಮತ್ತು ಇದು ವಾರ್ಷಿಕ 64% ಹೆಚ್ಚಳವಾಗಿದೆ.

9. ಹುಂಡೈ ಎಕ್ಸೆಟರ್

ಹುಂಡೈ ಮೋಟಾರ್ ಇಂಡಿಯಾದ ಅಗ್ಗದ ಕಾಂಪ್ಯಾಕ್ಟ್ ಎಸ್‌ಯುವಿ ಎಕ್ಸೆಟರ್ ಕಳೆದ ತಿಂಗಳು 5747 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಎಕ್ಸೆಟರ್‌ನ ಮಾರಾಟವು ವರ್ಷದಿಂದ ವರ್ಷಕ್ಕೆ 31 ಪ್ರತಿಶತದಷ್ಟು ಕಡಿಮೆಯಾಗಿದೆ.

10. ಟೊಯೋಟಾ ಅರ್ಬನ್ ಕ್ರೂಸರ್ ಟೈಗರ್

ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಕ್ರಾಸ್ಒವರ್ ಯುವಿ ಟೈಸರ್‌ನ 3620 ಯುನಿಟ್‌ಗಳನ್ನು ಕಳೆದ ತಿಂಗಳು ಮಾರಾಟ ಮಾಡಲಾಗಿದೆ.

ಆಟೋಮೊಬೈಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ