Tech Tips: ನಿಮ್ಮ ವಾಟ್ಸ್​ಆ್ಯಪ್​ನಲ್ಲಿ ಟೈಮ್ ತಪ್ಪಾಗಿ ತೋರಿಸ್ತಿದೆಯಾ?: ಸರಿಪಡಿಸಲು ಇಲ್ಲಿದೆ ನೋಡಿ ಟ್ರಿಕ್

ನೀವು ಯಾವುದಾದರು ಬಹುಮುಖ್ಯ ಮೆಸೇಜ್​ನ ನಿಖರವಾದ ಸಮಯವನ್ನು ತಿಳಿದುಕೊಳ್ಳಬೇಕಾದಾಗ ವಾಟ್ಸ್​ಆ್ಯಪ್​ನಲ್ಲಿ ಟೈಮ್ ತಪ್ಪಾಗಿ ತೋರಿಸುತ್ತಿದ್ದರೆ ಆಗ ತೊಂದರೆಗೆ ಸಿಲುಕಿ ಹಾಕಿಕೊಳ್ಳುತ್ತೀರಿ. ನೀವು ಕೂಡ ಈ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ಇದನ್ನು ನೀವೇ ಸುಲಭವಾಗಿ ಸರಿಪಡಿಸಬಹುದು.

Tech Tips: ನಿಮ್ಮ ವಾಟ್ಸ್​ಆ್ಯಪ್​ನಲ್ಲಿ ಟೈಮ್ ತಪ್ಪಾಗಿ ತೋರಿಸ್ತಿದೆಯಾ?: ಸರಿಪಡಿಸಲು ಇಲ್ಲಿದೆ ನೋಡಿ ಟ್ರಿಕ್
Tech Tips
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on: Dec 08, 2024 | 3:53 PM

ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ ಅನ್ನು ಇಂದು ವಿಶ್ವದಲ್ಲಿ ಕೋಟ್ಯಾಂತರ ಜನರು ಉಪಯೋಗಿಸುತ್ತಿದ್ದಾರೆ. ಇದನ್ನು ಬಳಸುವಾಗ ಯಾವುದೋ ಒಂದು ಹಂತದಲ್ಲಿ ಮೆಸೇಜ್​ಗಳ ಸಮಯ ತಪ್ಪಾಗಿರುವುದನ್ನು ನೀವು ನೋಡಿರಬೇಕು. ಮೆಸೇಜ್ ಅನ್ನು ನೀವು ಈಗಷ್ಟೆ ಕಳುಹಿಸಿರುತ್ತೀರಿ, ಆದರೆ ಇದು ಬಹಳ ಹಿಂದೆಯೇ ಕಳುಹಿಸಲಾಗಿದೆ ಎಂದು ತೋರುತ್ತದೆ. ಈ ಸಮಸ್ಯೆಯು ಕೆಲವೊಮ್ಮೆ ತೊಂದರೆಗೆ ಕಾರಣವಾಗಬಹುದು.

ನೀವು ಯಾವುದಾದರು ಬಹುಮುಖ್ಯ ಮೆಸೇಜ್​ನ ನಿಖರವಾದ ಸಮಯವನ್ನು ತಿಳಿದುಕೊಳ್ಳಬೇಕಾದಾಗ ಈರೀತಿ ಆಗಿದ್ದರೆ ಅದು ತೊಂದರೆಗೆ ಸಿಲುಕಿ ಹಾಕಿಕೊಳ್ಳುತ್ತೀರಿ. ನೀವು ಕೂಡ ಈ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ಇದನ್ನು ನೀವೇ ಸುಲಭವಾಗಿ ಸರಿಪಡಿಸಬಹುದು.

ವಾಟ್ಸ್​ಆ್ಯಪ್​ ನಲ್ಲಿ ಮೆಸೇಜ್​ಗಳ ಸಮಯ ತಪ್ಪಾಗಿ ಕಾಣಿಸಿಕೊಳ್ಳುವುದರ ಹಿಂದಿನ ದೊಡ್ಡ ಕಾರಣವೆಂದರೆ ನಿಮ್ಮ ಫೋನ್‌ನ ಟೈಮ್​ ಸೆಟ್ಟಿಂಗ್‌ಗಳಲ್ಲಿನ ದೋಷ. ವಾಟ್ಸ್​ಆ್ಯಪ್ ನಿಮ್ಮ ಫೋನ್‌ನ ಸಿಸ್ಟಂ ಗಡಿಯಾರದಿಂದ ಸಮಯವನ್ನು ತೆಗೆದುಕೊಳ್ಳುತ್ತದೆ. ನಿಮ್ಮ ಫೋನ್‌ನ ಗಡಿಯಾರದಲ್ಲಿ ನಿಖರವಾದ ಸಮಯ ಮತ್ತು ದಿನಾಂಕವನ್ನು ಹೊಂದಿಸದಿದ್ದರೆ, ಮೆಸೇಜ್​ನ ಸಮಯವು ವಾಟ್ಸ್​ಆ್ಯಪ್ ನಲ್ಲಿಯೂ ತಪ್ಪಾಗಿ ಕಾಣಿಸುತ್ತದೆ. ಇದಲ್ಲದೆ, ಕೆಲವೊಮ್ಮೆ ವಾಟ್ಸ್​ಆ್ಯಪ್ ಅಪ್ಲಿಕೇಶನ್‌ನಲ್ಲಿನ ತಾಂತ್ರಿಕ ದೋಷದಿಂದಲೂ ಈ ಸಮಸ್ಯೆ ಉಂಟಾಗಬಹುದು.

ಈ ಸಮಸ್ಯೆಯನ್ನು ಹೇಗೆ ಸರಿಪಡಿಸಬಹುದು ಎಂದು ನಾವು ಹೇಳುತ್ತೇವೆ:

1. ನಿಮ್ಮ ಫೋನ್‌ನ ಟೈಮ್ ಸೆಟ್ಟಿಂಗ್‌ಗಳನ್ನು ಸರಿಪಡಿಸಿ:

  • ನಿಮ್ಮ ಫೋನ್‌ನಲ್ಲಿ ಸರಿಯಾದ ಸಮಯ ಮತ್ತು ದಿನಾಂಕವನ್ನು ಹೊಂದಿಸಲಾಗಿದೆಯೇ ಎಂದು ಮೊದಲು ನೀವು ನೋಡಬೇಕು. ಇದಕ್ಕಾಗಿ ನೀವು ಈ ಹಂತಗಳನ್ನು ಅನುಸರಿಸಬಹುದು.
  • ನಿಮ್ಮ ಫೋನ್‌ನ ಸೆಟ್ಟಿಂಗ್ಸ್​ಗೆ ಹೋಗಿ.
  • “ದಿನಾಂಕ ಮತ್ತು ಸಮಯ” ಆಯ್ಕೆಯನ್ನು ಆರಿಸಿ.
  • “ಸಮಯವನ್ನು ಅಟೊಮೆಟಿಕ್ ಆಗಿ ಹೊಂದಿಸಿ” ಆಯ್ಕೆಯನ್ನು ಆನ್ ಮಾಡಿ.
  • ಇದರೊಂದಿಗೆ ನಿಮ್ಮ ಫೋನ್ ಸ್ವಯಂಚಾಲಿತವಾಗಿ ಇಂಟರ್ನೆಟ್‌ನಿಂದ ಸಮಯವನ್ನು ತೆಗೆದುಕೊಳ್ಳುತ್ತದೆ ಮತ್ತು ಸರಿಯಾದ ಸಮಯವನ್ನು ತೋರಿಸುತ್ತದೆ.

2. ವಾಟ್ಸ್​ಆ್ಯಪ್ ಅನ್ನು ಅಪ್ಡೇಟ್ ಮಾಡಿ:

ಕೆಲವೊಮ್ಮೆ ವಾಟ್ಸ್​ಆ್ಯಪ್ ಆ್ಯಪ್‌ನಲ್ಲಿನ ಕೆಲವು ತಾಂತ್ರಿಕ ದೋಷದಿಂದ ಈ ಸಮಸ್ಯೆ ಉಂಟಾಗಬಹುದು. ಆದ್ದರಿಂದ ನೀವು ನಿಮ್ಮ ವಾಟ್ಸ್​ಆ್ಯಪ್ ಅಪ್ಲಿಕೇಶನ್ ಅನ್ನು ನವೀಕರಿಸಬೇಕು. ಇದಕ್ಕಾಗಿ ನೀವು ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಆ್ಯಪ್ ಸ್ಟೋರ್ ಗೆ ಹೋಗಿ W ವಾಟ್ಸ್​ಆ್ಯಪ್ ಅನ್ನು ಅಪ್ಡೇಟ್ ಮಾಡಬಹುದು.

ಇದನ್ನೂ ಓದಿ: ಸ್ಮಾರ್ಟ್ ಟಿವಿಯನ್ನು ಸ್ವಚ್ಛವಾಗಿಡಲು ಏನೆಲ್ಲ ಮಾಡಬೇಕು?: ಈ 8 ಹಂತಗಳನ್ನು ಅನುಸರಿಸಿ

3. ವಾಟ್ಸ್​ಆ್ಯಪ್ ಅನ್ನು ರೀ-ಇನ್​ಸ್ಟಾಲ್ ಮಾಡಿ:

ಅಪ್‌ಡೇಟ್ ಮಾಡಿದ ನಂತರವೂ ಸಮಸ್ಯೆ ಬಗೆಹರಿಯದಿದ್ದರೆ, ನೀವು ವಾಟ್ಸ್​ಆ್ಯಪ್ ಅನ್ನು ಒಮ್ಮೆ ಡಿಲೀಟ್ ಮಾಡಿ ಮತ್ತು ಅದನ್ನು ಮರುಸ್ಥಾಪಿಸಬಹುದು. ಈ ಸಂದರ್ಭ ನಿಮ್ಮ ಡೇಟಾ ಡಿಲೀಟ್ ಆಗುವುದಿಲ್ಲ. ಬೇಕಾದರೆ ಯಾವುದಕ್ಕೂ ಡಿಲೀಟ್ ಮಾಡುವ ಮುನ್ನ ಬ್ಯಾಕಪ್ ಮಾಡಿಟ್ಟುಕೊಳ್ಳಿ.

4. ನಿಮ್ಮ ಫೋನ್‌ನ ಆಪರೇಟಿಂಗ್ ಸಿಸ್ಟಮ್ ಅನ್ನು ನವೀಕರಿಸಿ:

ಕೆಲವೊಮ್ಮೆ, ಫೋನ್‌ನ ಆಪರೇಟಿಂಗ್ ಸಿಸ್ಟಂನಲ್ಲಿನ ಕೆಲವು ದೋಷದಿಂದಾಗಿ, ವಾಟ್ಸ್​ಆ್ಯಪ್ ನಲ್ಲಿ ಅಂತಹ ಗ್ಲಿಚ್ ಸಂಭವಿಸಬಹುದು. ಆದ್ದರಿಂದ, ನಿಮ್ಮ ಫೋನ್‌ನ ಆಪರೇಟಿಂಗ್ ಸಿಸ್ಟಮ್ ನಲ್ಲಿ ಅಪ್ಡೇಟ್ ಇದೆಯೇ ಎಂದು ಪರಿಶೀಲಿಸಿ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನನ್ನನ್ನು ಹುದ್ದೆಯಿಂದ ಸರಿಸಬೇಕೆನ್ನುವವರಿಗೆ ಒಳ್ಳೆಯದಾಗಲಿ: ವಿಜಯೇಂದ್ರ
ನನ್ನನ್ನು ಹುದ್ದೆಯಿಂದ ಸರಿಸಬೇಕೆನ್ನುವವರಿಗೆ ಒಳ್ಳೆಯದಾಗಲಿ: ವಿಜಯೇಂದ್ರ
ಜೈಪುರ ಸಾಹಿತ್ಯ ಉತ್ಸವ; ಕಲ್ ಪೆನ್ ಜೊತೆ ಟಿವಿ9 ಸಿಇಒ ಬರುಣ್ ದಾಸ್ ಸಂವಾದ
ಜೈಪುರ ಸಾಹಿತ್ಯ ಉತ್ಸವ; ಕಲ್ ಪೆನ್ ಜೊತೆ ಟಿವಿ9 ಸಿಇಒ ಬರುಣ್ ದಾಸ್ ಸಂವಾದ
ಪಕ್ಷದ ವಿದ್ಯಮಾನಗಳು ಶಿವಕುಮಾರ್​ರನ್ನು ದೆಹಲಿಗೆ ಹೋಗುವಂತೆ ಮಾಡಿದವೇ?
ಪಕ್ಷದ ವಿದ್ಯಮಾನಗಳು ಶಿವಕುಮಾರ್​ರನ್ನು ದೆಹಲಿಗೆ ಹೋಗುವಂತೆ ಮಾಡಿದವೇ?
ಬೆಳ್ಳಿ ಪರದೆ ಮೇಲೆ ‘ತ್ರಿವ್ಯ’ ಜೋಡಿ, ಭವ್ಯಾ ಗೌಡ ಹೇಳಿದ್ದೇನು?
ಬೆಳ್ಳಿ ಪರದೆ ಮೇಲೆ ‘ತ್ರಿವ್ಯ’ ಜೋಡಿ, ಭವ್ಯಾ ಗೌಡ ಹೇಳಿದ್ದೇನು?
ಸಂಪಾದನೆ ಎಷ್ಟೇ ಇರಲಿ ಉಳಿತಾಯ ಮಾಡಲೇಬೇಕು: ಭವ್ಯಾ ಗೌಡ
ಸಂಪಾದನೆ ಎಷ್ಟೇ ಇರಲಿ ಉಳಿತಾಯ ಮಾಡಲೇಬೇಕು: ಭವ್ಯಾ ಗೌಡ
ತ್ರಿವಿಕ್ರಮ ಜೊತೆ ಗೆಳೆತನ ಅಷ್ಟೇ, ಪೊಸ್ಸೆಸ್ಸಿವ್​ನೆಸ್ ಇರಲಿಲ್ಲ: ಭವ್ಯಾ
ತ್ರಿವಿಕ್ರಮ ಜೊತೆ ಗೆಳೆತನ ಅಷ್ಟೇ, ಪೊಸ್ಸೆಸ್ಸಿವ್​ನೆಸ್ ಇರಲಿಲ್ಲ: ಭವ್ಯಾ
‘ನನ್ನ, ತ್ರಿವಿಕ್ರಮ್ ನಡುವೆ ಏನೂ ಇಲ್ಲ, ಪದೇ ಪದೇ ಇದೇ ಹೇಳೋಕಾಗಲ್ಲ’: ಭವ್ಯಾ
‘ನನ್ನ, ತ್ರಿವಿಕ್ರಮ್ ನಡುವೆ ಏನೂ ಇಲ್ಲ, ಪದೇ ಪದೇ ಇದೇ ಹೇಳೋಕಾಗಲ್ಲ’: ಭವ್ಯಾ
ವಿಜಯೇಂದ್ರ ವಿರುದ್ಧ ನಡ್ಡಾ ಜೀಗೆ ಪತ್ರ ಬರೆದಿರುವುದು ನಿಜ: ಯತ್ನಾಳ್
ವಿಜಯೇಂದ್ರ ವಿರುದ್ಧ ನಡ್ಡಾ ಜೀಗೆ ಪತ್ರ ಬರೆದಿರುವುದು ನಿಜ: ಯತ್ನಾಳ್
ಹೊಸ ಗೆಟಪ್ ನಲ್ಲಿ ಸಭೆಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್!
ಹೊಸ ಗೆಟಪ್ ನಲ್ಲಿ ಸಭೆಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್!
ರೈಲ್ವೆ ಟಿಕೆಟ್ ಕಲೆಕ್ಟರ್ ವೇಗಕ್ಕೆ ಶರಣಾದ ಕ್ರಿಕೆಟ್ ಸಾಮ್ರಾಟ..!
ರೈಲ್ವೆ ಟಿಕೆಟ್ ಕಲೆಕ್ಟರ್ ವೇಗಕ್ಕೆ ಶರಣಾದ ಕ್ರಿಕೆಟ್ ಸಾಮ್ರಾಟ..!