Father’s Day 2022: ಅಪ್ಪ ಎಂದರೆ ಅಪರಿಮಿತ ಶಕ್ತಿ

ವಿದ್ಯಾಲಯದ ಮೆಟ್ಟಿಲನ್ನು ಹತ್ತವನು ಸರಸ್ವತಿಯನ್ನು ಆರಾಧಿಸಲು ಹಾದಿ ಮಾಡಿಕೊಟ್ಟು ಕನಸುಗಾರನಾದ. ಹದಿಹರೆಯದ ವಯಸ್ಸಿನಲ್ಲಿ ಸ್ನೇಹಿತನಂತೆ ಜೊತೆಗ ನಿಂತ. ಸ್ವಾತಂತ್ರ್ಯ ಎನ್ನುವುದು ನಿನ್ನೊಳಗೆ ಇದೆ, ಅದನ್ನು ನೀನೇ ಹುಡುಕಬೇಕು ಎಂದು ದೀಪವಾದ.

Father’s Day 2022: ಅಪ್ಪ ಎಂದರೆ ಅಪರಿಮಿತ ಶಕ್ತಿ
ಸಾಂದರ್ಭಿಕ ಚಿತ್ರ
Edited By:

Updated on: Jun 19, 2022 | 8:56 AM

ತಾಯಿ ಗರ್ಭದಲ್ಲಿ  ಬೆಚ್ಚಗೆ ಇದೆ ಏನೋ ನಿಜ, ಆದರೆ ತಂದೆಯ ತೋಳಲಿ ಅದ್ಭುತ ಶಕ್ತಿ ಇದೆ. ಈ ಜಗತ್ತಿಗೆ ಪರಿಚಯಿಸಿದವಳು ಅಮ್ಮ ಆದರೆ ಈ ಜಗತ್ತು ಪರಿಚಯಿಸಿದವನು ಅಪ್ಪ. ಅವನ ಕೈ ಹಿಡಿದು ಮೊದಲ ಹೆಜ್ಜೆ ಹಾಕಿದ ನೆನಪು, ತೊದಲು ಮಾತಿನಲ್ಲಿ ಅಪ್ಪ ಎಂದು ಮೊದಲ ಬಾರಿ ಕರೆದಾಗ ಊರಿಗೆ ಸಿಹಿ ಹಂಚಿದವನು ಅಪ್ಪ. ಅವನ ಹೆಗಲೆ ನನಗೆ ತೇರು, ಈ ಜಗತ್ತನ್ನು ನೋಡಲು ಶುರು ಮಾಡಿದ್ದು ಅಲ್ಲಿಂದಲೇ… ಮಂಥನ ಮಾಡಿದರೆ ಅಮೃತದೊಂದಿಗೆ ವಿಷವೂ ಬರುವುದು, ನಿನಗೆ ಬೇಕಾಗಿರುವುದನ್ನು ಆಯ್ಕೆ  ನಿನ್ನ ಕೈಯಲ್ಲಿದೆ ಎಂದು ತಿಳಿಸಿದವನು. ಪ್ರತಿ ಹೆಣ್ಣಿಗೆ  ಅಪ್ಪ ಎಂದರೆ ಮೊದಲ ಹೀರೋ ಅದರಲ್ಲಿ ಎರಡು ಮಾತಿಲ್ಲ… ಅವನ ಬೆವರಿನ ಹನಿಗಳು ಹಸಿವನ್ನು ತಣ್ಣಿಸಿದೆ, ಕುಟುಂಬಕ್ಕೆ ತನ್ನ ಜೀವವನ್ನು ಶ್ರಮಿಸಿದ ಶ್ರಮಿಕ ಅಪ್ಪ, ಎಲ್ಲ ನೋವುಗಳನ್ನು ತನ್ನಲ್ಲಿ ಇಟ್ಟುಕೊಂಡು ನಮ್ಮ ಮುಂದೆ ನಗುವ ಮುಗ್ಧ ಜೀವ ಅಪ್ಪ.

ಶಾಲೆಗೆ ಹೋಗಲು ಮೊದಲು ಆತ್ಮ ವಿಶ್ವಾಸವಾಗಿ ನಿಂತ ಮತ್ತು ನನ್ನ ಶಾಲ ದಿನಗಳ ಕನಸುಗಳನ್ನು ನನಸು ಮಾಡಿದ ಕನಸುಗಾರ ಅಪ್ಪ. ಹದಿಹರೆಯದ ವಯಸ್ಸಿನಲ್ಲಿ ಸ್ನೇಹಿತನಂತೆ ಜೊತೆಗೆ ನಿಂತ ವ್ಯಕ್ತಿ. ಸ್ವಾತಂತ್ರ್ಯ ಎನ್ನುವುದು ನಿನ್ನೊಳಗೆ ಇದೆ, ಅದನ್ನು ನೀನೇ ಹುಡುಕಬೇಕು ಎಂದು ದೀಪವಾದ ಮಾರ್ಗದರ್ಶಿ. ಸೋತು, ಹಿಂದೇಟು ಹಾಕಿದಾಗೆಲ್ಲಾ ಬೆಂಕಿಯಲ್ಲಿ ಅರಳಿದ ಹೂವಿನ ಕತೆಗಳನ್ನು ಹೇಳಿ ಹುರಿದುಂಬಿಸಿದವನು ಅಪ್ಪ. ಬೇಸರದಲ್ಲಿ ಮೂಲೆ ಸೇರಿದಾಗ ಮುಖಕ್ಕೆ ಬಣ್ಣ ಹಚ್ಚಿ ಕುಣಿದು ನಗಿಸಿದವನು ಅಪ್ಪ.

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಅಪ್ಪ ಬರೆದ ಪ್ರೀತಿಯ ಪತ್ರ…ಅಪ್ಪ… ಐ ಲವ್ ಯು

ಇದನ್ನೂ ಓದಿ
Health Tips: ದೇಹದ ಚಯಾಪಚಯ ಹೆಚ್ಚಿಸಲು ಇಲ್ಲಿದೆ ಸಲಹೆ
Health Tips: ಕೂದಲಿನ ಬೆಳವಣಿಗೆ ಈ ಆಹಾರಗಳಿಂದ ಸಾಧ್ಯ
International Yoga Day 2022 : ನೀವು ಸರಿಯಾದ ಕ್ರಮದಲ್ಲಿ ಉಸಿರಾಡುತ್ತಿದ್ದೀರಾ?

ಅಪ್ಪ ಎಂದರೆ ನೆನಪಾಗುವುದು ಒಂದೇ “ಧೈರ್ಯ” ಆಸೆಗಳನ್ನು ಅವನ ಮುಂದೆ ಇಟ್ಟಾಗ’ ನಿನಗೆ ವರ್ಕ್ ಔಟ್ ಆಗುತ್ತದೆ ಅಂತ ನಂಬಿಕೆ ಇದ್ದೆ ಮಾಡು..ಯಾರು ಏನು ಹೇಳಿದರು ಯೋಚನೆ ಮಾಡಬೇಡ.. ನಾನು ಇದ್ದೇನೆ’ ಎನ್ನುವ ಮಾತು. ಹೆಣ್ಮಕ್ಕಳಿಗೆ ಅವರದ್ದೇ ಆಗಿರುವ ಕೆಲವು ಸೋ ಕಾಲ್ಡ್ ಲಿಮಿಟೇಷನ್ಸ್ ಇದೆ ಎನ್ನುವ ಭ್ರಮೆಯಲ್ಲಿ ಇದ್ದರೆ, ಅಪ್ಪ ಮಾತ್ರ ಎಲ್ಲರೂ ಸಮಾನ ಎಂದು ಹೇಳುವ ಗುಣ. ಅವರಿಗೆ ಗಂಡಾದರೂ ಸರಿ, ಹೆಣ್ಣಾದರೂ ಸರಿ.. ಎಲ್ಲರೂ ಒಂದೇ ಎನ್ನುವ ಸಿದ್ಧಾಂತ. ಇಬ್ಬರಿಗೂ ಒಂದೇ ನ್ಯಾಯವನ್ನು ನೀಡುವ ನ್ಯಾಯಮೂರ್ತಿ. ಅವನ ಋಣ ನನ್ನ ಮೇಲಿದೆ.

ಆ ಋಣವೇ ನನ್ನ ಕೆಲಸಕ್ಕೆ ಒಂದು ಶಕ್ತಿಯಾಗಿದ. ಅಪ್ಪನ ಬಗ್ಗೆ  ಎಷ್ಟು ಬರೆದರೂ ಕಡಿಮೆ‌ ಅನ್ನಿಸುವ ಈ ಸಾಲುಗಳಿಗೆ, ಯಾವುದನ್ನು ಸೇರಿಸುವುದು? ಯಾವುದನ್ನು ಬಿಡುವುದು ಎಂದು ಗೊತ್ತಾಗುವುದಿಲ್ಲ.. ಮಗಳ ಶಿಕ್ಷಣಕ್ಕಾಗಿ ಹೋರಾಡಿ, ಅವಳ ಕನಸಿನ ರೆಕ್ಕೆಗೆ ಶಕ್ತಿಯನ್ನು ತುಂಬಿ, ಬಾನೆತ್ತರಕ್ಕೆ ಹಾರಲು ಪ್ರೇರಣೆಯಾದ ಎಲ್ಲಾ ಅಪ್ಪಂದಿರಿಗೂ ಅಪ್ಪಂದಿರ ದಿನದ ಶುಭಾಶಯಗಳು

ಅನಘಾ ಶಿವರಾಮ್
ಮಲ್ಲ

ಟಿವಿ9 ಬ್ಲಾಗ್ ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 6:15 am, Sun, 19 June 22