ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲೂ ಮಹೋನ್ನತ ಸ್ಥಾನವನ್ನು ನಿರ್ವಹಿಸುವ, ಪ್ರೀತಿಯನ್ನು ಅವ್ಯಕ್ತವಾಗಿಯೇ ಉಳಿಸಿಕೊಳ್ಳುವ ಅಪ್ಪ, ಭಾಷೆಗೆ ನಿಲುಕದ, ಮಾತಿಗೆ ಮೀರಿದ, ಪ್ರಶ್ನಾತೀತ ವ್ಯಕ್ತಿತ್ವದ ಬಗ್ಗೆ ಎಷ್ಟು ಬರೆದರೂ ಮುಗಿಯದು.
ಸಾಂದರ್ಭಿಕ ಚಿತ್ರ
Follow us on
ಅಪ್ಪ ನಾವು ಚಿಕ್ಕವರಿದ್ದಾಗಿನಿಂದಲೂ ನಮ್ಮ ಕಣ್ಣಲ್ಲಿ ಹೀರೋ ಆಗಿಯೇ ಉಳಿದು ಬಿಟ್ಟಿದ್ದಾನೆ! ನಮ್ಮ ಬದುಕಿನ ಪಯಣದಲ್ಲಿ ಲೆಕ್ಕವಿಲ್ಲದಷ್ಟು ತಿರುವಿನಲ್ಲಿ ಸಿಕ್ಕ ಸಾವಿರಾರು ಜನರೂ ಅಪ್ಪನ ಸಮಕ್ಕೆ ನಿಲ್ಲುವುದಕ್ಕೆ ಸಾಧ್ಯವೇ ಇಲ್ಲದಷ್ಟು ನಮ್ಮ ಬದುಕನ್ನು ಅಪ್ಪ ಆವರಿಸಿಬಿಟ್ಟ. ಅಪ್ಪ ಜೊತೆಯಲ್ಲಿದ್ದರೆ ಅದೇನೋ ಹೇಳ ತೀರದ ಧೈರ್ಯ. ಹೌದು, ಈ ಅಪ್ಪ ಎಂಬ ಮುತ್ತು. ನೂರಾರು ಕಷ್ಟಗಳನ್ನೂ ಎದೆಯಲ್ಲೇ ಬಚ್ಚಿಟ್ಟುಕೊಂಡು ನಗುತ್ತಲೇ ಇರುವವನು ಅಪ್ಪ. ಮನೆಯ ಎಲ್ಲಾ ಜವಾಬ್ದಾರಿಗಳನ್ನು ಹೊತ್ತರೂ, ತಾನು ಸಂತೋಷವಾಗಿಯೇ ಇದ್ದೀನೆಂದು ಮನೆ ಜನರನ್ನು ಸಂತೋಷದಲ್ಲಿ ಇಡುವ ವ್ಯಕ್ತಿ ಅಪ್ಪ.
ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲೂ ಮಹೋನ್ನತ ಸ್ಥಾನವನ್ನು ನಿರ್ವಹಿಸುವ, ಪ್ರೀತಿಯನ್ನು ಅವ್ಯಕ್ತವಾಗಿಯೇ ಉಳಿಸಿಕೊಳ್ಳುವ ಅಪ್ಪ, ಭಾಷೆಗೆ ನಿಲುಕದ, ಮಾತಿಗೆ ಮೀರಿದ, ಪ್ರಶ್ನಾತೀತ ವ್ಯಕ್ತಿತ್ವದ ಬಗ್ಗೆ ಎಷ್ಟು ಬರೆದರೂ ಮುಗಿಯದು. ಎಲ್ಲವನ್ನೂ ಹೇಳಿದ ಮೇಲೂ ಏನೋ ಉಳಿದು ಬಿಡುವಂಥ ವ್ಯಕ್ತಿತ್ವ ಅಪ್ಪನದು. ಅಪ್ಪ ಅಂದ್ರೆ ಆಕಾಶವೇ ಅಲ್ಲ, ಆಕಾಶವನ್ನು ಮೀರಿದ ವ್ಯಕ್ತಿತ್ವ ಅಪ್ಪನದು. ಅಂಥ ಅಪ್ಪನನ್ನು ಪಡೆದ ನಾವೆಲ್ಲರೂ ಧನ್ಯರು. ನಮ್ಮೆಲ್ಲರ ಬದುಕಿಗೊಂದು ಅರ್ಥ ನೀಡಿದ ಅಪ್ಪನಿಗೆ ಕೋಟಿ ನಮನ. ಎಲ್ಲಾ ಅಪ್ಪಂದಿರಿಗೂ ಅಪ್ಪಂದಿರ ದಿನದ ಶುಭಾಶಯಗಳು