College Life: ಕ್ಲಾಸ್ ರೂಮ್​​​​ನಲ್ಲಿ ಮೂಡಿ ಬಂದ ನನ್ನ ಸಿನಿಮಾ, ಖಳನಾಯಕ ಯಾರು ಗೊತ್ತಾ? ಅವನು ಬಂದಾಗೆಲ್ಲ ಹೀಗೆ ಆಗುವುದು

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 04, 2023 | 8:37 AM

ಜೀವನದ ಅನ್ನೋದು ಅನೇಕ ಅನುಭವಗಳ ಹಾದಿ, ಇಲ್ಲಿ ಎಲ್ಲವನ್ನೂ ಕಲಿಯಬೇಕು, ಕಲಿಸಬೇಕು. ನಾನು ಕೂಡ ಹಾಗೆ ನನ್ನ ಜೀವನದ ಒಂದು ಅದ್ಭುತ ಕ್ಷಣ ಮತ್ತು ದೊಡ್ಡ ತಲೆನೋವು ನನ್ನ ಕಾಲೇಜು, ಇದು ಎಲ್ಲರ ಜೀವನದಲ್ಲಿ ಸಹಜ. ನಾನು ಕ್ಲಾಸ್ ಕೇಳೋಕೆ ಬೇಜಾರಾಗಿ ಈ ಲೇಖನ ಬರೆದಿರುವೆ.

College Life: ಕ್ಲಾಸ್ ರೂಮ್​​​​ನಲ್ಲಿ ಮೂಡಿ ಬಂದ ನನ್ನ ಸಿನಿಮಾ, ಖಳನಾಯಕ ಯಾರು ಗೊತ್ತಾ? ಅವನು ಬಂದಾಗೆಲ್ಲ ಹೀಗೆ ಆಗುವುದು
ಸಾಂದರ್ಭಿಕ ಚಿತ್ರ
Follow us on

ಜೀವನದ ಅನ್ನೋದು ಅನೇಕ ಅನುಭವಗಳ ಹಾದಿ, ಇಲ್ಲಿ ಎಲ್ಲವನ್ನೂ ಕಲಿಯಬೇಕು, ಕಲಿಸಬೇಕು. ನಾನು ಕೂಡ ಹಾಗೆ ನನ್ನ ಜೀವನದ ಒಂದು ಅದ್ಭುತ ಕ್ಷಣ ಮತ್ತು ದೊಡ್ಡ ತಲೆನೋವು ನನ್ನ ಕಾಲೇಜು, ಇದು ಎಲ್ಲರ ಜೀವನದಲ್ಲಿ ಸಹಜ. ನಾನು ಕ್ಲಾಸ್ ಕೇಳೋಕೆ ಬೇಜಾರಾಗಿ ಈ ಲೇಖನ ಬರೆದಿರುವೆ. ಹಾಗೆ ಕ್ಲಾಸಲ್ಲಿ ಕೂತಿದ್ದಾಗ ನಿನ್ನೆ ರಾತ್ರಿ ನೋಡಿದ ಸಿನಿಮಾ ನೆನಪಿಗೆ ಬಂತು ಅದನ್ನೇ ನೆನಪು ಮಾಡಿಕೊಳ್ತಿದ್ದೆ , ಇದ್ದಕ್ಕಿದ್ದ ಹಾಗೆ ನಾನೇ ನಾಯಕಿ ಆಗ್ಬಿಟ್ಟಿದೆ ಅದರಲ್ಲಿರುವ ನಾಯಕ ನಟ ಮಾತ್ರ ತುಂಬಾ ಚೆನ್ನಾಗಿದ್ದ ಆ ಸಿನಿಮಾ ಅಷ್ಟು ಚೆನ್ನಾಗಿರಲಿಲ್ಲ ಆದರೆ ನಾನು ನಾಯಕಿ ಆದಾಗ ತುಂಬಾ ಚಂದ ಅನ್ನಿಸುತ್ತಿತ್ತು, ಆ ಕಥೆಯನ್ನು ನನಗೆ ಬಂದ ಹಾಗೆ ನಾನೇ ಬರೆದುಕೊಳ್ಳುತ್ತಿದ್ದೆ.

ನಾನು ಆ ಕಥೆಯಲ್ಲಿ ಒಬ್ಬ ವರದಿಗಾರಿಕೆ ಆಗಿದ್ದೆ ನಾಯಕನಾದವನು ಒಂದು ಚಾನೆಲ್​ನ ಮುಖ್ಯಸ್ಥನಾಗಿದ್ದ, ನನ್ನ ಕಥೆಯ ಖಳ ನಟ ಚಿದಾನಂದ, ಇವನು ನಮ್ಮ ಕ್ಲಾಸ್​​ನಲ್ಲಿ ವಿಚಿತ್ರವಾಗಿರುತ್ತಿದ್ದ ಅದಕ್ಕೆ ಅವನಿಗೆ ಈ ಪಾತ್ರ. ಕಥೆ ಏನಪ್ಪಾ ಅಂದ್ರೆ ನಾನು ಒಂದು ಕಾರ್ಯಕ್ರಮದ ವರದಿ ಮಾಡುತ್ತಿರುವಾಗ ನಾಯಕನು ಆ ಕಾರ್ಯಕ್ರಮದ ಅಧ್ಯಕ್ಷನಾಗಿ ಬರುತ್ತಾನೆ ನಾನು ವರದಿ ಮಾಡುವುದನ್ನು ಬಿಟ್ಟು ಅವನನ್ನೇ ನೋಡುತ್ತಾ ಕುಳಿತಿದ್ದೆ. ನಂತರ ಕಾರ್ಯಕ್ರಮ ಮುಗೀತು ಅವನು ಹೊರಟ ನನ್ನ ವರದಿ ಮಾತ್ರ ಸಿದ್ಧಗೊಳ್ಳಲಿಲ್ಲ ಅದನ್ನು, ಅಲ್ಲಿಗೆ ಬಿಟ್ಟು ಅವನನ್ನು ಮಾತಾಡಿಸಲು ಹೋಗುತ್ತೇನೆ. ಅಷ್ಟರಲ್ಲಿ ಕಾರು ಹೊರಟೆ ಬಿಟ್ಟಿತ್ತು. ಅದೇ ಹೊತ್ತಿಗೆ ಸುಮೀದ್ ಸರ್ ಇವಾಗ ತಾನೆ ಹೊರಟರೆಂದು ಅಲ್ಲೇ ಎಲ್ಲೋ ಮಾತಾಡಿಕೊಳ್ಳುತ್ತಿದ್ದರು. ಆಗ ನನಗೆ ತಿಳಿಯಿತು ಇದು ಇವನ ಹೆಸರು ಸುಮೀದೆಂದು. ಈ ಕಡೆ ವರದಿನೂ ತಯಾರಾಗಿಲ್ಲ ಆ ಕಡೆ ಅವನು ಸಿಗಲಿಲ್ಲ ಅಂದುಕೊಂಡು, ನನ್ನ ಕಚೇರಿಗೆ ಹೋಗಿ ಕುಳಿತೆ. ಅಲ್ಲಿ ನಮ್ಮ ಮುಖ್ಯಸ್ಥ ಬಂದು ಬಾಯಿಗೆ ಬಂದ ಹಾಗೆ ಬೈದು ಮುಖಕ್ಕೆ ಮಂಗಳಾರತಿ ಮಾಡಿ ಹೋದರು. ನಾನು ಬಂದಿದ್ದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ, ನನಗೆ ಅವನದೇ ಚಿಂತೆ ಅಷ್ಟರಲ್ಲಿ ನಮ್ಮ ಮನೆಯ ಮಾಲೀಕ ಚಿದಾನಂದ ಬಂದು ಬಾಡಿಗೆ ಕೇಳೋಕೆ ಶುರು ಮಾಡುತ್ತಾನೆ.

ಇದನ್ನೂ ಓದಿ:Yakshagana: ಯಕ್ಷಗಾನದ ಯುವಪ್ರತಿಭಾ ಕಲಶ ಪೂಜಾ ಆಚಾರ್ಯ

ಇವನ ಕಾಟ ತಡೆಯಲಾಗದೇ ನಾನು ಬಾಗಿಲು ತೆಗೆಯುವುದೇ ಇಲ್ಲ, ಅಷ್ಟರಲ್ಲಿ ಬಾಗಿಲು ಎರಡು ಭಾಗ ಆಗುವ ರೀತಿಯಲ್ಲಿ ಬಡಿಯುತ್ತಾನೆ. ಭಯಪಟ್ಟು ಹೋಗಿ ಬಾಗಿಲು ತೆಗೆದೆ ನಾಳೆ ಅಷ್ಟರಲ್ಲಿ ಬಾಡಿಗೆ ಬೇಕೆಂದು ಗದರಿ ಹೋಗ್ತಾನೆ, ಆದರೆ ನನ್ನಲ್ಲಿ ಹಣ ಇರಬೇಕೇ, ನಾಳೆ ನಾನು ಬಾಡಿಗೆ ಹಾಕದಿದ್ದಾರೆ ಮತ್ತೆ ಬಂದು ಬಾಗಿಲು ತಟ್ಟುತ್ತಾನೆ ಎಂದು ಭಯಪಡುತ್ತಾ ನಿಂತಿದ್ದೆ. ಅಷ್ಟರಲ್ಲಿ ಸರ್ ಎದ್ದು ನಿಲ್ಲಿಸಿ ಪ್ರಶ್ನೆ ಕೇಳಬೇಕಾ, ಅಷ್ಟರಲ್ಲಿ ಬಾಡಿಗೆ ಕೊಡುವುದೇ ಉತ್ತಮ ಅನ್ಸುತ್ತು. ಪಕ್ಕದಲ್ಲಿ ಕೂತ ಅಶ್ವಿನಿಗೆ ಕೇಳಿದೆ, ನಾನು ಸಿನಿಮಾ ಲೋಕದಲ್ಲಿದ್ದರೆ ಅವಳು ಸ್ವರ್ಗ ಲೋಕದಲ್ಲಿ ತೇಲಾಡ್ತಿದ್ಲು ಪ್ರಶ್ನೆಗೆ ಉತ್ತರ ಹೇಳದೆ ಒಂದು ಗಂಟೆ ನಿಂತೆ. ಈ ಚಿದಾನಂದ ಬಂದಾಗೆಲ್ಲ ಹೀಗೆ ಆಗ್ತದೆ ಅಲ್ಲ.

ನೇಹಾ. ಎನ್