Yakshagana: ಯಕ್ಷಗಾನದ ಯುವಪ್ರತಿಭಾ ಕಲಶ ಪೂಜಾ ಆಚಾರ್ಯ

ಯಕ್ಷಗಾನವು ತುಳುನಾಡಿನ ಆರಾಧನಾ ಕಲೆಯಾಗಿದೆ. ಪೌರಾಣಿಕ ಪ್ರಸಂಗಗಳನ್ನು ಶ್ರದ್ಧಾ ಭಕ್ತಿಯಿಂದ ಕಲಾವಿದರು ಪ್ರದರ್ಶಿಸುತ್ತಾರೆ. ಗಂಡು ಕಲೆ ಎನಿಸಿಕೊಂಡಿರುವ ಯಕ್ಷಗಾನ ಕ್ಷೇತ್ರದಲ್ಲಿ ಇಂದು ಸ್ತ್ರೀಯರು ಅನೇಕ ಸಾಧನೆ ಮಾಡಿರುವುದು ಗಮನಾರ್ಹ ಸಂಗತಿ. ಅಂತಹ ಪೂಜನೀಯ ಕಲೆಯಲ್ಲಿ ಸದ್ದಿಲ್ಲದೆ ಸಾಧನೆ ಮಾಡುತ್ತಿದ್ದಾರೆ ಪೂಜಾ.ಯು.ಆಚಾರ್ಯ.

Yakshagana: ಯಕ್ಷಗಾನದ ಯುವಪ್ರತಿಭಾ ಕಲಶ ಪೂಜಾ ಆಚಾರ್ಯ
Pooja AcharyaImage Credit source: TV9 kannada
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 15, 2023 | 8:08 AM

ಯಕ್ಷಗಾನ (Yakshagana) ಒಂದು ಅದ್ಭುತ ಕಲೆ, ಕರ್ನಾಟಕಕ್ಕೆ ಇದೊಂದು ಹೆಮ್ಮೆಯ ಸಂಸ್ಕೃತಿ, ಈ ಕಲಾ ಕ್ಷೇತ್ರವು ಗಂಡು ಮೆಟ್ಟಿದ ಕಲೆ ಎಂದೇ ಪ್ರಸಿದ್ದಿಯನ್ನು ಪಡೆದಿದೆ. ಈ ಕಾರಣಕ್ಕೆ ಯಕ್ಷಗಾನ ಎಲ್ಲರೂ, ಎಲ್ಲವನ್ನು ಒಪ್ಪಿಕೊಂಡಿದೆ. ಇದು ಇಂದು ಅಗಾಧ ಸಂಸ್ಕೃತಿಯಾಗಿ ಬೆಳೆದು ನಿಂತಿದೆ.  ಈ ಕಲೆಯಲ್ಲಿ ಬೆಳೆದ ಅದೆಷ್ಟೋ ಪ್ರತಿಭೆಗಳು ಹಲವು ಸಾಧನೆಯ ಹಂತವನ್ನು ತಲುಪಿದ್ದಾರೆ. ಒಂದು ಕಾಲದಲ್ಲಿ ಯಕ್ಷಗಾನದಲ್ಲಿ ಪುರುಷರಿಗೆ ಮಾತ್ರ ಅವಕಾಶ ಇತ್ತು,  ಆ ಕಾಲದಲ್ಲಿ ಯಕ್ಷಗಾನಗಳು ರಾತ್ರಿ  ಹೊತ್ತಿನಲ್ಲಿ  ನಡೆಯುತ್ತಿದ್ದ ಕಾರಣ ಮಹಿಳೆಯರಿಗೆ ಕಷ್ಟವಾಗಬಹುದು ಎಂದು, ಜೊತೆಗೆ ಈ ಕ್ಷೇತ್ರದತ್ತ ಮಹಿಳೆಯರಿಗೆ ಅಥವಾ ಯುವಶಕ್ತಿಗಳಿಗೆ ಅಷ್ಟೊಂದು ಒಲವು ಇರಲಿಲ್ಲ. ಆದರೆ ಇದೀಗ ಅದೆಷ್ಟೋ ಪ್ರತಿಭಾವಂತ ಮಹಿಳೆಯರು, ಅದರಲ್ಲೂ ಯುವಮನಸ್ಸುಗಳು ಈ ಕ್ಷೇತ್ರದತ್ತ ಮುಖ ಮಾಡುತ್ತಿದ್ದಾರೆ. ಇದೀಗ ಇದಕ್ಕೆ ಸಾಕ್ಷಿಯಾಗಿ ನಿಂತಿರುವವರಲ್ಲಿ ಕಲಾವಿದೆ ಪೂಜಾ.ಯು.ಆಚಾರ್ಯರೊಬ್ಬರು, (Pooja Acharya) ಯಕ್ಷಗಾನ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಬೇಕು ಎಂದು ಪಣತೊಟ್ಟ  ಗಟ್ಟಿಗಿತ್ತಿ ಇವರು.

ಯಕ್ಷಗಾನವು ತುಳುನಾಡಿನ ಆರಾಧನಾ ಕಲೆಯಾಗಿದೆ. ಪೌರಾಣಿಕ ಪ್ರಸಂಗಗಳನ್ನು ಶ್ರದ್ಧಾ ಭಕ್ತಿಯಿಂದ ಕಲಾವಿದರು ಪ್ರದರ್ಶಿಸುತ್ತಾರೆ. ಗಂಡು ಕಲೆ ಎನಿಸಿಕೊಂಡಿರುವ ಯಕ್ಷಗಾನ ಕ್ಷೇತ್ರದಲ್ಲಿ ಇಂದು ಸ್ತ್ರೀಯರು ಅನೇಕ ಸಾಧನೆ ಮಾಡಿರುವುದು ಗಮನಾರ್ಹ ಸಂಗತಿ. ಅಂತಹ ಪೂಜನೀಯ ಕಲೆಯಲ್ಲಿ ಸದ್ದಿಲ್ಲದೆ ಸಾಧನೆ ಮಾಡುತ್ತಿದ್ದಾರೆ ಪೂಜಾ.ಯು.ಆಚಾರ್ಯ.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಕೆರೆಕಾಡು ನಿವಾಸಿ ಉಮೇಶ್ .ಜೆ ಆಚಾರ್ಯ ಹಾಗೂ ಸಂಧ್ಯಾ.ಯು.ಆಚಾರ್ಯ ರವರ ಸುಪುತ್ರಿ ಪೂಜಾ. ತಮ್ಮ ಹೆತ್ತವರ ಪ್ರೋತ್ಸಾಹದೊಂದಿಗೆ 8ನೇ ವಯಸ್ಸಿನಲ್ಲೇ ಯಕ್ಷಗಾನ ನಾಟ್ಯಭ್ಯಾಸವನ್ನು ಪ್ರಾರಂಭಿಸಿದರು. ಇದಕ್ಕೆ ಪೂರಕವಾಗಿ ಅವರ ಮನೆಯಲ್ಲಿಯೇ ಯಕ್ಷಗಾನ ತರಬೇತಿ ಪ್ರಾರಂಭವಾಯಿತು. ಗುರುಗಳಾದ ದಿ| ಸತೀಶ್ ಆಚಾರ್ಯ ಹಾಗು ಅಜಿತ್ ಕೆರೆಕಾಡುರವರ ಮಾರ್ಗದರ್ಶನದೊಂದಿಗೆ ಯಕ್ಷಗಾನದ ಪಾಠಗಳನ್ನು ಕಲಿತುಕೊಂಡರು.

ಎಂ.ಕಾಮ್ ಪದವೀಧರೆಯಾದ ಇವರು, ಇದುವರೆಗೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿರುತ್ತಾರೆ. ಮುಂಬೈ, ಚೆನ್ನೈ, ಮೈಸೂರು, ಬೆಂಗಳೂರು ದೇಶದ ಹಲವು ಭಾಗಗಳಲ್ಲಿ ತಾವು ಕಲಿತ ಯಕ್ಷ ವಿದ್ಯೆಯನ್ನು ಪ್ರದರ್ಶನ ನೀಡಿದ್ದಾರೆ. ಅಲ್ಲಿಯು ಇವರಿಗೆ ಅನೇಕ ಸನ್ಮಾನಗಳನ್ನು ಮಾಡಿದ್ದಾರೆ.

ಇದನ್ನು ಓದಿ:Yakshagana: ಭಾಗವತ ಶಿರೋಮಣಿ ಭೀಷ್ಮ; ಮೊಮ್ಮಕ್ಕಳನ್ನು ನಿಯಂತ್ರಿಸದೆ ಒಂದು ಘೋರಯುದ್ದ ನಡೆದೇ ಹೋಯಿತು!

ಬಾಲ್ಯದಿಂದಲೇ ಯಕ್ಷಗಾನದ ಬಗ್ಗೆ ಒಂದು ಒಲವಿತ್ತು, ಈ ಪರಿಣಾಮದಿಂದ ಅನೇಕ ದೊಡ್ಡ ದೊಡ್ಡ ವೇದಿಕೆಯುಲ್ಲಿ ಯಕ್ಷಗಾನದಲ್ಲಿ ಭಾಗವಹಿಸಿದ್ದಾರೆ. ಪೂಜಾ ತಮ್ಮ ಶಿಕ್ಷಣದ ಜೊತೆಗೆ ಪ್ರತಿಭೆಗೂ ಅಷ್ಟೇ ಬೆಲೆಯನ್ನು ನೀಡುತ್ತಿದ್ದಾರೆ. ಅವರು ಯಕ್ಷಗಾನದಲ್ಲಿ ವಿಷ್ಣು, ವಿದ್ಯುನ್ಮಾಲಿ, ಸುಗ್ರೀವ, ದೂಮ್ರಾಕ್ಷ, ಜಾಂಬವಂತ, ರಾಮ, ದಾಕ್ಷಾಯಿಣಿ, ಸುಧನ್ವ, ಜಾಬಾಲಿ, ನಂದಿನಿ, ಕೃಷ್ಣ, ಕಂಸ, ಲಕ್ಷ್ಮಣ, ಅರ್ಜುನ ಹಾಗು ಇನ್ನಿತರ ಅನೇಕ ಮಹತ್ವದ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಯಕ್ಷಗಾನದ ಹೊರತಾಗಿ ನೃತ್ಯ, ಚಿತ್ರಕಲೆ, ಅಡುಗೆ, ಪ್ರವಾಸ ಮುಂತಾದ ಹವ್ಯಾಸಗಳನ್ನು ಹೊಂದಿದ್ದಾರೆ.

ಗಂಡು ಕಲೆಯನ್ನು ಕರಗತ ಮಾಡಿಕೊಂಡು ಸಾಧನೆಯ ಪಥದಲ್ಲಿರುವ ಪೂಜಾ, ಅನೇಕ ಪ್ರಶಸ್ತಿ ಗೌರವಗಳು ಅವರ ಮುಡಿಗೇರಿದೆ. ಅಂತರ್ ಕಾಲೇಜು ಯಕ್ಷೋತ್ಸವ ಸ್ಪರ್ಧೆಯಲ್ಲಿ ಪುಂಡು ವೇಷದ ವಿಭಾಗದಲ್ಲಿ ಎರಡು ಬಾರಿ ಪ್ರಥಮ ಸ್ಥಾನ , ಗೋವಿಂದದಾಸ ಕಾಲೇಜಿನ Best outgoing Yakshagana Artist 2020ರ ಸಾಲಿನ ಪ್ರಶಸ್ತಿ, ಶ್ರೀ ವಿನಾಯಕ ಕಲಾ ತಂಡದ 2015ರ ಯಕ್ಷ ಕೌಮುದಿ ಕಾರ್ಯಕ್ರಮದಲ್ಲಿ “ರಸರಾಜ್ಞೆ” ಎಂಬ ಬಿರುದಿನೊಂದಿಗೆ ಸನ್ಮಾನ ಹಾಗೂ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ. ಈ ಕ್ಷೇತ್ರದಲ್ಲಿ ಇನ್ನುಷ್ಟು ಸಾಧನೆಯನ್ನು ಮಾಡುವ ಹಂಬಲಿಕೆಯನ್ನು ಹೊಂದಿದೆ.

ಯಕ್ಷಗಾನ ಒಂದು ದೈವಿಕ ಕಲೆ. ಈ ಕ್ಷೇತ್ರದಲ್ಲಿ ಪ್ರಸಿದ್ಧಿ ಪ್ರತಿಷ್ಠೆಗಾಗಿ ತೋಡಗಿಕೊಳ್ಳದೆ, ಶ್ರದ್ಧಾ ಭಕ್ತಿಯಿಂದ ಒಲವನ್ನು ತೋರಿದಲ್ಲಿ ಕಲಾ ಸರಸ್ವತಿಯು ತಾನಾಗಿಯೇ ಒಲಿಯುತ್ತಾಳೆ.- ಪೂಜಾ, ಯಕ್ಷಗಾನ ಕಲಾವಿದೆ

ವೈಷ್ಣವೀ.ಜೆ.ರಾವ್

ಎಸ್.ಡಿ.ಎಮ್ ಕಾಲೇಜು

ಬ್ಲಾಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ