Haveri: ಶಾಲೆಯಲ್ಲೇ ಬ್ಯಾಂಕ್​ ಆರಂಭಿಸಿ 50 ಸಾವಿರ ರೂಪಾಯಿವರೆಗೆ ವ್ಯವಹಾರ ಮಾಡಿದ ವಿದ್ಯಾರ್ಥಿಗಳು

ಬ್ಯಾಂಕ್ ಎಂಬುವುದರ ಬಗ್ಗೆ ತಿಳಿಯುವ ವಯಸ್ಸಿನಲ್ಲಿಯೇ ವಿದ್ಯಾರ್ಥಿಗಳು ಶಾಲೆಯಲ್ಲಿ ಬ್ಯಾಂಕ್​ನ್ನು ಆರಂಭಿಸಿದ್ದು, 50 ಸಾವಿರ ರೂಪಾಯಿವರೆಗೆ ವ್ಯವಹಾರ ಕೂಡ ಮಾಡಿದ್ದಾರೆ.

Haveri: ಶಾಲೆಯಲ್ಲೇ ಬ್ಯಾಂಕ್​ ಆರಂಭಿಸಿ 50 ಸಾವಿರ ರೂಪಾಯಿವರೆಗೆ ವ್ಯವಹಾರ ಮಾಡಿದ ವಿದ್ಯಾರ್ಥಿಗಳು
ಶಾಲೆಯಲ್ಲಿ ಬ್ಯಾಂಕ್​ ಆರಂಭಿಸಿದ ವಿದ್ಯಾರ್ಥಿಗಳು
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on:Jan 12, 2023 | 12:34 PM

ಹಾವೇರಿ: ಜಿಲ್ಲೆಯ ಬಮ್ಮನಕಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ಸೇರಿ ಬ್ಯಾಂಕ್​ನ್ನ ಆರಂಭ ಮಾಡಿದ್ದಾರೆ. ಕಳೆದ ಐದು ತಿಂಗಳ ಹಿಂದೆ ಆರಂಭ ಮಾಡಿರುವ ಈ ಬ್ಯಾಂಕ್ . ವಾರದಲ್ಲಿ ಸೋಮವಾರ ಹಾಗೂ ಗುರುವಾರ ಎರಡು ದಿನ ಮಾತ್ರ ಕಾರ್ಯ ನಿರ್ವಹಿಸುತ್ತದೆ, ವಾರಕ್ಕೆ ಒಂದು ಸಾವಿರದಿಂದ ಒಂದೂವರೆ ಸಾವಿರ ರೂಪಾಯಿವರೆಗೆ ವ್ಯವಹಾರ ನಡೆಯುತ್ತದೆ. ಇನ್ನು ಇದಕ್ಕೆ ಮ್ಯಾನೇಜರ್​,ಕ್ಯಾಶಿಯರ್​ ಸೇರಿದಂತೆ ವಿವಿಧ ಅಧಿಕಾರಿಗಳು ಕೂಡ ಇದ್ದಾರೆ.

8 ನೇ ತರಗತಿ ವಿದ್ಯಾರ್ಥಿನಿ ಪವಿತ್ರಾ ಬಡಿಗೇರ್ ಮ್ಯಾನೇಜರ್  ಹಾಗೂ 7 ನೇ ತರಗತಿಯ ಯಶವಂತ ಕರಿಯಮ್ಮನವರ್​  ಕ್ಯಾಶಿಯರ್ ಅಗಿ ಬ್ಯಾಂಕ್ ನಡೆಸುತ್ತಾರೆ. ಇನ್ನು ನೂಡಲ್ ಅಧಿಕಾರಿಯಾಗಿ ಶಾಲೆಯ ಸಹ ಶಿಕ್ಷಕಿ ಆಗಿರುವ ಶೋಭಾ ಬಡಿಗೇರ್ ನಿರ್ವಹಣೆ ಮಾಡುವ ಈ ಬ್ಯಾಂಕ್​ನಲ್ಲಿ ಕಳೆದ ಐದು ತಿಂಗಳಿನಿಂದ 50 ಸಾವಿರ ರೂಪಾಯಿವರೆಗೆ ವ್ಯವಹಾರ ಮಾಡಲಾಗಿದ್ದು, 8 ಸಾವಿರ ರೂಪಾಯಿ ಹಣ ಉಳಿತಾಯವಿದೆ.

ಇದನ್ನೂ ಓದಿ: Devadristi App: ಕಣ್ಣಿಲ್ಲದವರಿಗೆ “ದೇವದೃಷ್ಟಿ ಆ್ಯಪ್” ದಾರಿದೀಪ, ದಿವ್ಯಾಂಗರ ಬಾಳಿಗೆ ಬೆಳಕಾದ ವಿದ್ಯಾರ್ಥಿಗಳು

ಬ್ಯಾಂಕ್ ಎಂದರೆ ಎನು ಎಂಬುದರ ಬಗ್ಗೆ ಬಾಯಿ ಮಾತಿನಲ್ಲಿ ಪ್ರತಿ ಶಾಲೆಯಲ್ಲಿ ವಿವರಣೆ ನೀಡುತ್ತಾರೆ, ಆದರೆ ಈ ಶಾಲೆಯಲ್ಲಿ ಸ್ವತಃ ವಿದ್ಯಾರ್ಥಿಗಳೆ, ವಿದ್ಯಾರ್ಥಿಗಳಿಗಾಯೇ ಬ್ಯಾಂಕ್ ನಡೆಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಮಾದರಿ ವಿಷಯವಾಗಿದೆ. ಅಲ್ಲದೆ ಕಳೆದ ತಿಂಗಳು ಇದೆ ಬ್ಯಾಂಕಿನಲ್ಲಿ ಪ್ರತಿ ವಾರ ಹಣ ಉಳಿತಾಯ ಮಾಡಿ ಪ್ರವಾಸಕ್ಕೂ ಹೋಗಿ ಬಂದಿದ್ದಾರೆ.

ವರದಿ: ಸೂರಜ್ ಉತ್ತೂರೆ ಟಿವಿ9 ಬೆಂಗಳೂರು

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ ಮಾಡಿ

Published On - 12:32 pm, Thu, 12 January 23