ಅಣ್ಣ ತಂಗಿ ಸಂಬಂಧ ಎಂದರೆ ಅದು ಏಳೇಳು ಜನ್ಮದಲ್ಲಿಯೂ ಬಿಡಿಸಲಾಗದ ಅನುಬಂಧ. ಮನೆಯ ಒಳಗೆ ಎಷ್ಟೇ ಜಗಳವಾಡಿದರೂ ಅಣ್ಣ ತಂಗಿಯ ಸಂಬಂಧವನ್ನು ವ್ಯಾಖ್ಯಾನಿಸಲು ಅಸಾಧ್ಯ. ಒಬ್ಬ ಚ ತನ್ನ ತಂಗಿಗೆ ಎಲ್ಲ ರೀತಿಯಲ್ಲೂ ಸಹಕಾರಿಯಾಗಿ ಇದ್ದೇ ಇರುತ್ತಾನೆ ಅಂತಹ ಪವಿತ್ರವಾದ ಬಂಧದಿಂದ ಕೂಡಿರುತ್ತದೆ ಅಣ್ಣ ತಂಗಿಯ ವಾತ್ಸಲ್ಯ.
ಅಣ್ಣ-ತಂಗಿಯ ಬಾಳಿನಲ್ಲಿ ಶ್ರೀರಕ್ಷೆಯಾಗಿ ಸದಾ ಅವಳ ರಕ್ಷಣೆಗೆ ಇದ್ದೇ ಇರುತ್ತಾನೆ ಅಂತಹ ರಕ್ಷಣೆಯ ಪ್ರತೀಕವಾಗಿ ಆಚರಿಸುವ ಹಬ್ಬವೇ ರಕ್ಷಾ ಬಂಧನ. ಶ್ರಾವಣ ಮಾಸದ ಆಗಸ್ಟ್ ತಿಂಗಳು 11 ಅಥವಾ 12ರಂದು ರಕ್ಷಾ ಬಂಧನ ಎಂದು ದೇಶದಾದ್ಯಂತ ಆಚರಿಸಲಾಗುತ್ತದೆ.
ರಕ್ಷಾ ಬಂಧನಕ್ಕೆ ಭಾರತದಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ರಕ್ಷಾ ಬಂಧನ ಸಮೀಪಿಸುತ್ತಿದ್ದಂತೆ ಎಲ್ಲಿಲ್ಲದ ಸಂಭ್ರಮ ರಕ್ಷಾಬಂಧನ ಹಿಂದೂಗಳ ಹಬ್ಬಗಳಲ್ಲಿ ಒಂದು. ಸಹೋದರ ಸಹೋದರಿಯರ ಪ್ರೀತಿ ವಾತ್ಸಲ್ಯ ಹಾಗೂ ರಕ್ಷಣೆಯ ಸಂಕೇತವಾಗಿ ದೇಶದಾದ್ಯಂತ ಈ ಹಬ್ಬವನನ್ನು ಆಚರಿಸಲಾಗುತ್ತದೆ. ರಕ್ಷಾ ಬಂಧನ ವನ್ನು ರಾಖಿ ಎಂದು ಕರೆಯುತ್ತಾರೆ. ಅಣ್ಣ ತಂಗಿಯ ಕೈಗೆ ರಾಖಿಯನ್ನು ಕಟ್ಟಿ ಸದಾ ನಿನ್ನ ರಕ್ಷಣೆಗೆ ನಾನಿರುವೆ ಎಂದು ಸಾರುವುದು ರಕ್ಷಾಬಂಧನ ಹಬ್ಬದ ವಿಶೇಷ, ಹಾಗೆಯೇ ತಂಗಿಯು ಅಣ್ಣನ ಕೈಗೆ ರಕ್ಷಾಬಂಧನವನ್ನು ಕಟ್ಟಿ ಅಣ್ಣನಿಂದ ಆಶೀರ್ವಾದವನ್ನು ಪಡೆಯುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಹಾಗೆಯೇ ಇಬ್ಬರು ಪರಸ್ಪರ ಉಡುಗೊರೆಯನ್ನು ನೀಡುತ್ತಾರೆ. ರಕ್ಷಾ ಬಂಧನ ಎಂದರೆ ರಕ್ಷೆ ಎಂದರೆ ರಕ್ಷಣೆ ಹಾಗೂ ಬಂಧನ ಎಂದರೆ ಸಂಬಂಧ ಎಂಬ ಅರ್ಥವನ್ನು ನೀಡುತ್ತದೆ.
ರಕ್ಷಾ ಬಂಧನವನ್ನು ರೇಷ್ಮೆ ದಾರದಿಂದ ಮಾಡಲಾಗುತ್ತದೆ, ರಕ್ಷಾ ಬಂಧನ ಬಂತೆಂದರೆ ಸಾಕು, ಎಲ್ಲಾ ಅಂಗಡಿಗಳಲ್ಲಿ ರಕ್ಷೆಗಳದ್ದೆ ಹಬ್ಬ ತರತರಹದ ರಕ್ಷೆಯನ್ನು ನೋಡುವುದೇ ಒಂದು ಚೆಂದ. ಈ ಸಮಯದಲ್ಲಂತೂ ರಕ್ಷಾಬಂಧನಕ್ಕೆ ಎಲ್ಲಿಲ್ಲದ ಬೇಡಿಕೆ. ರಕ್ಷಾ ಬಂಧನ ಮುಗಿದ ನಂತರವೂ ರಕ್ಷೆ ಕಟ್ಟಿಕೊಳ್ಳುವುದು ಮುಗಿಯುವುದಿಲ್ಲ. ಎಲ್ಲರ ಕೈಯಲ್ಲೂ ರಕ್ಷಾಬಂಧನ ರಾರಾಜಿಸುತ್ತದೆ. ಈ ರಕ್ಷಾಬಂಧನಕ್ಕೆ ಅದರದ್ದೇ ಆದ ಇತಿಹಾಸವು ಇದೆ. ಪುರಾಣದ ಪ್ರಕಾರ ಮಹಾಭಾರತದ ಸಂದರ್ಭದಲ್ಲಿ ಶ್ರೀ ಕೃಷ್ಣನಿಗೆ ಆಕಸ್ಮಿಕವಾಗಿ ತನ್ನ ಬೆರಳು ಸುದರ್ಶನ ಚಕ್ರದಿಂದ ಕತ್ತರಿಸಿದಾಗ ಪಾಂಡವರ ಪತ್ನಿ ದ್ರೌಪದಿ ಶ್ರೀ ಕೃಷ್ಣನ ನೋಡಿ ತಕ್ಷಣ ತನ್ನ ವಸ್ತ್ರದ ಒಂದು ತುಂಡನ್ನು ಕತ್ತರಿಸಿ ಆ ಬೆರಳಿಗೆ ಕಟ್ಟುತ್ತಾಳೆ ಇದನ್ನೇ ರಕ್ಷೆ ಎಂದು ಹೇಳಲಾಗುತ್ತದೆ ಅಂತಹ ಸಂದರ್ಭದಲ್ಲಿ ಶ್ರೀ ಕೃಷ್ಣನು ದುಷ್ಟರಿಂದ ನಿನ್ನನ್ನು ರಕ್ಷಣೆ ಮಾಡುತ್ತೇನೆ ಎಂಬ ಭರವಸೆಯನ್ನು ನೀಡುತ್ತಾನೆ. ನಂತರದ ದಿನಗಳಲ್ಲಿ ಕೌರವರ ವಿರುದ್ಧ ಪಗಡೆಯಾಟದಲ್ಲಿ ಪಾಂಡವರು ಸೋತಾಗ ಕೌರವರು ದ್ರೌಪದಿಯ ವಸ್ತ್ರಾಪಹರಣ ಮಾಡಲು ಮುಂದಾದ ಸಂದರ್ಭದಲ್ಲಿ ಸೀರೆಯನ್ನು ಎಷ್ಟು ಎಳೆದರೂ ಮುಗಿಯದ ಹಾಗೆ ಮಾಡಿ ಶ್ರೀ ಕೃಷ್ಣನು ತನ್ನ ಮಾತಿನಂತೆ ದ್ರೌಪದಿಯನ್ನು ರಕ್ಷಣೆ ಮಾಡುತ್ತಾರೆ. ಇದೆ ಮುಂದೆ ಅಣ್ಣ ತಂಗಿಯರ ಹಬ್ಬ ರಕ್ಷಾಬಂಧನವಾಗಿ ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಹೀಗೆ ಶ್ರೀ ರಕ್ಷೆ ಯನ್ನು ನೀಡುವ ರಕ್ಷಾ ಬಂಧನ ಅಣ್ಣ ತಂಗಿಯ ಅನುಬಂಧಕ್ಕೆ ಸಾಕ್ಷಿಯಾಗಿ ನಿಂತಿದೆ.
ಕವಿತಾ
ಆಳ್ವಾಸ್ ಕಾಲೇಜು ಮೂಡುಬಿದಿರೆ