Children’s Day 2022: ಮಕ್ಕಳ ದಿನಾಚರಣೆಯನ್ನು ಆಚರಿಸಲು ಹಲವಾರು ಕಾರಣಗಳಿವೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 14, 2022 | 9:23 AM

ಪ್ರತಿ ವರ್ಷ ನವೆಂಬರ್ 14 ರಂದು ಮಕ್ಕಳ ಹಕ್ಕುಗಳ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲು ಮಕ್ಕಳ ದಿನಾಚರಣೆಯನ್ನು ಮಾಡಲಾಗುತ್ತದೆ. ಭಾರತದ ಪ್ರಧಾನಿ ಜವಾಹರ್ ಲಾಲ್ ನೆಹರು (1889) ಜನ್ಮದಿನದ ಸವಿನೆನಪಿಗಾಗಿ ಭಾರತದಲ್ಲಿ ಮಕ್ಕಳ ದಿನವನ್ನು ಆಚರಿಸಲಾಗುತ್ತಿದೆ.

Children’s Day 2022: ಮಕ್ಕಳ ದಿನಾಚರಣೆಯನ್ನು ಆಚರಿಸಲು ಹಲವಾರು ಕಾರಣಗಳಿವೆ
ಸಾಂದರ್ಭಿಕ ಚಿತ್ರ
Follow us on

ನವೆಂಬರ್ ಬಂತಂದರೆ ಸಾಕು ಮಕ್ಕಳಲ್ಲಿ ಎಲ್ಲಿದ ಇಲ್ಲದ ಸಂಭ್ರಮ  ಸಗಡಗರ. ಮಕ್ಕಳ ದಿನಾಚರಣೆಯ ಸಂಭ್ರಮ ಮಾತ್ರವಲ್ಲದೆ ಅದೊಂದು ಹಬ್ಬ. ಪ್ರತಿ ವರ್ಷ ನವೆಂಬರ್ 14 ರಂದು ಮಕ್ಕಳ ಹಕ್ಕುಗಳ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲು ಮಕ್ಕಳ ದಿನಾಚರಣೆಯನ್ನು ಮಾಡಲಾಗುತ್ತದೆ. ಭಾರತದ ಪ್ರಧಾನಿ ಜವಾಹರ್ ಲಾಲ್ ನೆಹರು (1889) ಜನ್ಮದಿನದ ಸವಿನೆನಪಿಗಾಗಿ ಭಾರತದಲ್ಲಿ ಮಕ್ಕಳ ದಿನವನ್ನು ಆಚರಿಸಲಾಗುತ್ತಿದೆ. ಈ ಮಕ್ಕಳ ದಿನಾಚಾರಣೆಯಲ್ಲಿ ಮಕ್ಕಳು ಮಾತ್ರವಲ್ಲದೆ ಹಿರಿಯರು ಕೂಡ ತಮ್ಮ ಬಾಲ್ಯವನ್ನು ನೆನಪುಗಳನ್ನು ನೆನಪಿಸಿಕೊಂಡು ಸಂಭ್ರಮಿಸುತ್ತಾರೆ. ಇನ್ನು ಶಾಲೆಗಳಲ್ಲಿ ನವೆಂಬರ್ ಮೊದಲ ದಿನದಿಂದಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ.

ಮಕ್ಕಳಂತೂ ಆ ದಿನಕ್ಕೆ ಹೊಸ ಡ್ರೆಸ್ ತಗೋಬೇಕು, ಭಾಷಣ ಮಾಡಬೇಕು, ಸಾಂಸ್ಕೃತಿಕ ಕಾರ್ಯಕ್ರಮಗಳ ತಯಾರಿ ಹೀಗೆ ವಿಶೇಷವಾಗಿ ಈ ದಿನವನ್ನು ಭಾರತದಲ್ಲಿ ಆಚರಿಸಲಾಗುತ್ತದೆ. ಈ ದಿನವನ್ನು ಇಷ್ಟೊಂದು ವಿಜೃಂಭಣೆಯಿಂದ ಆಚರಿಸಲು ಕೆಲವೊಂದು ಕಾರಣಗಳಿವೆ ಮಕ್ಕಳು ಈ ದೇಶದ ಶಕ್ತಿ ಮತ್ತು ಸಮಾಜದ ಅಡಿಪಾಯ ಆಗಿರುತ್ತಾರೆ.

ಭಾರತದಲ್ಲಿ 1956 ರಿಂದ ಮಕ್ಕಳ ದಿನವನ್ನು ಆಚರಿಸಲಾಗುತ್ತಿದೆ. ನೆಹರು ಅವರ ಮರಣದ ನಂತರ ಮಕ್ಕಳೊಂದಿಗೆ ಅವರ ಬಾಂಧವ್ಯ ಮತ್ತು ಅವರ ಮೇಲಿದ್ದ ಒಲವನ್ನ ನೋಡಿ ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಮಾಡುವಂತಹ ಇತ್ತು. ಭಾರತದ ಮೊದಲ ಪ್ರಧಾನಿಯಾಗಿದ್ದ ನೆಹರು ಜನ್ಮದಿನವನ್ನು ಮಕ್ಕಳ ದಿನ ಎಂದು ಘೋಷಿಸಿದಲಾಯಿತು.

ಭಾರತೀಯ  ಸಂಸತ್ತಿನಲ್ಲೂ ಇದನ್ನ ನಿರ್ಣಯಿಸಲಾಯಿತು ಅಂದಿನಿಂದ ಪ್ರತಿ ವರ್ಷ ನವೆಂಬರ್ 14 ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ ಮತ್ತು ಈ ದಿನ ಮಕ್ಕಳಿಗೆ ಅವರ ಹಕ್ಕುಗಳು ಮತ್ತು ಶಿಕ್ಷಣದ ಬಗ್ಗೆ ಹೇಳುತ್ತಾರೆ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಹಾಗಾಗಿ ಅವರಲ್ಲಿ ಒಳ್ಳೆಯ ವಿಷಯಗಳನ್ನ ಹಂಚಿಕೊಂಡು ತಿಳಿಸಿ ದೇಶಕ್ಕೆ ಭದ್ರಬುನಾದಿ ಹಾಕುವಲ್ಲಿ ಅವರನ್ನ ತಯಾರಿಸಬೇಕು ಮತ್ತು ನಾಳಿನ ಉತ್ತಮ ಭಾರತ ಕಟ್ಟುವಲ್ಲಿ ಮಕ್ಕಳ ಪಾತ್ರವೇ ಅಧಿಕವಾಗಿದೆ ಹೀಗಾಗಿ ಮಕ್ಕಳಲ್ಲಿ ಕೆಟ್ಟ  ವಿಚಾರ ಹೇಳದೆ, ಉತ್ತಮ ನಾಗರಿಕನಾಗಿ ಮಾಡುವಲ್ಲಿ ಪ್ರತಿಯೊಬ್ಬರ ಪಾತ್ರ ಬಹಳ ಮುಖ್ಯವಾಗುತ್ತದೆ. ದೇಶದ ಮುಂದಿನ ಪೀಳಿಗೆಯನ್ನು ಉತ್ತಮಗೊಳಿಸಲು ನಾವೆಲ್ಲರೂ ಪಣತೊಡಬೇಕು.

ಐಶ್ವರ್ಯಾ ಕೋಣನ