- Kannada News Photo gallery Children's Day 2022: Children of today are the strongest pillars of tomorrow's India
Children’s Day 2022: ಇಂದಿನ ಮಕ್ಕಳೇ ನಾಳಿನ ಭಾರತದ ಬಲಿಷ್ಠ ಸ್ತಂಭಗಳು
ಮಕ್ಕಳಿಗೆ ಮಾತ್ರವಲ್ಲದೆ ಹಿರಿಯರಿಗೂ ಕೂಡ ತಮ್ಮ ಬಾಲ್ಯದಲ್ಲಿ ಮಕ್ಕಳ ದಿನಾಚರಣೆಯನ್ನು ಹೇಗೆ ಆಚರಿಸುತ್ತಿದ್ದೆವು ಎಂದು ಮೆಲುಕು ಹಾಕುತ್ತಾರೆ. ಯಾಕೆಂದರೆ ಅವರು ಕೂಡ ಸಡಗರದಿಂದ ಈ ದಿನವನ್ನು ಹಬ್ಬವಾಗಿಯೇ ಆಚರಿಸುತ್ತಿದ್ದರು.
Updated on:Nov 14, 2022 | 10:10 AM

childrens day 2022

childrens day 2022

ನೆಹರು ಇಂದಿಗೂ ಕೂಡ ಮಕ್ಕಳ ನೆಚ್ಚಿನ ಚಾಚಾ ಆಗಿಯೇ ಹೆಚ್ಚು ಹೆಸರುವಾಸಿ. ಮಕ್ಕಳನ್ನು ದೇಶದ ಮುಂದಿನ ಭವಿಷ್ಯ ಎಂದು ಹೇಳುತ್ತಿದ್ದರು. ನಾಡಿನ ಭಾರತವನ್ನು ಈ ದಿನ ಮಕ್ಕಳು ರೂಪಿಸಲಿದ್ದಾರೆ. ನಾವು ಇಂದು ಯಾವ ಯಾವ ರೀತಿ ಅವರನ್ನು ಮುಂದೆ ತರುತ್ತೇವೆಯೋ ಅದೇ ರೀತಿ ನಾಳಿನ ಭಾರತದ ಭವಿಷ್ಯ ರೂಪುಗೊಳ್ಳುತ್ತದೆ ಇಂದು ನೆಹರು ಆಗಾಗ ಹೇಳುತ್ತಾ ಇದ್ದರು. ಆದ್ದರಿಂದ ಇವರ ಸವಿನೆನಪಗಾಗಿ ಅವರ ಹುಟ್ಟಿದ ದಿನವನ್ನು ಮಕ್ಕಳಿಗೆ ಮೀಸಲಿಟ್ಟು ಪ್ರತಿ ವರ್ಷ ದೇಶದಾದ್ಯಂತ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ನೆಹರು ಅವರಿಗೆ ಮಕ್ಕಳೆಂದರೆ ಬಹಳ ಪ್ರೀತಿ. ಮಕ್ಕಳ ಮೇಲಿನ ಅವಾಚಲೇ ಎಷ್ಟಿತ್ತು ಎಂದರೆ ಹೆಚ್ಚಿನ ಸಮಯ ಅವರು ಮಕ್ಕಳೊಂದಿಗೆ ಕಳೆಯುವುದಕ್ಕಾಗಿ ಬಯಸುತ್ತಿದ್ದರಂತೆ. ಆದ್ದರಿಂದ ಇಲ್ಲ ಮಕ್ಕಳಿಗೆ ಅವರು ಪ್ರೀತಿಯ ಚಾಚಾ ಆಗಿ ಇರ್ತಾ ಇದ್ರು, ಮಕ್ಕಳು ಕೂಡ ಅವರನ್ನು ಚಾಚಾ ಎಂದೇ ಕರೆಯುತ್ತಿದ್ದರು.

ವಿ. ಎನ್. ಕುಲಕರ್ಣಿಯವರ ಮನಸ್ಸು ಭಾರತದಲ್ಲಿರುವ ಮಕ್ಕಳ ಸ್ಥಿತಿಗತಿಗಳ ಬಗ್ಗೆ ಸದಾ ಯೋಚಿಸುತ್ತಿತ್ತು. ಅವರ ಏಳಿಗೆಗಾಗಿ ಏನೋ ಒಂದು ಮಾಡಬೇಕೆಂಬ ಹಂಬಲ. ಭಾರತದಲ್ಲಿಯೂ ಮಕ್ಕಳಿಗಾಗಿ ಧನ ಸಂಗ್ರಹಿಸಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಬೇಕು ಎನ್ನುವ ಪ್ರಸ್ತಾವನೆಯನ್ನು ವಿಶ್ವ ಸಂಸ್ಥೆಯ ಮುಂದಿಟ್ಟರು. ಕೊನೆಗೆ ವಿಶ್ವಸಂಸ್ಥೆ ಇವರ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿತು ಎಂಬ ಉಲ್ಲೇಖವಿದೆ. ಭಾರತದಲ್ಲಿ ಮಕ್ಕಳ ಕಲ್ಯಾಣಕ್ಕಾಗಿ ಹುಟ್ಟಿಕೊಂಡ ಆಚರಣೆಯೇ ಮಕ್ಕಳ ದಿನಾಚರಣೆ ಎನ್ನಬಹುದು.

ಆ ದಿನಗಳಲ್ಲಿ ಮಕ್ಕಳ ಕಲ್ಯಾಣಕ್ಕಾಗಿ ರಾಣಿ ಎಲಿಜಬೆತ್-2 ಅವರ ಜನ್ಮದಿನವನ್ನು ಧ್ವಜ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದರು. ಇದರಿಂದ ಸಂಗ್ರಹಿಸಲಾದ ಹಣವನ್ನು ಮಕ್ಕಳ ಏಳಿಗೆಗಾಗಿ ಉಪಯೋಗಿಸುತ್ತಿದ್ದರು.

ಮಕ್ಕಳ ದಿನಾಚರಣೆಗೆ ಕೆಲವೊಂದು ಇತಿಹಾಸವು ಕೂಡ ಇದೆ. 1951ರಲ್ಲಿ ವಿಶ್ವಸಂಸ್ಥೆಯ ಒಂದು ಯೋಜನೆಯಡಿಯಲ್ಲಿ ಇಂಗ್ಲೆಂಡ್ನ ಮಕ್ಕಳ ಕಲ್ಯಾಣಕ್ಕಾಗಿ ವಿ .ಎನ್. ಕುಲಕರ್ಣಿ ಅವರು ದುಡಿಯುತ್ತಿದ್ದರು.

ಪ್ರತಿಯೊಂದು ಮಕ್ಕಳು ಕೂಡ ದೇಶವನ್ನು ಕಟ್ಟುವವರಾಗಲಿ, ನಾಳಿನ ಭಾರತದ ಬಲಿಷ್ಠ ಸ್ತಂಭಗಳಾಗಲಿ ಎಂದು ಹಾರೈಸೋಣ. ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು. ಪ್ರಣಮ್ಯ ಟಿ. ಯಾದವ್
Published On - 10:10 am, Mon, 14 November 22




