ಕಳೆದ ಒಂದು ತಿಂಗಳುಗಳಿಂದ ಕ್ರಿಕೆಟ್ ಪ್ರಿಯರ ನಿದ್ದೆ ಕದ್ದಿದ್ದ ಐಸಿಸಿ ಟಿ20 ವಿಶ್ವಕಪ್ 2022ಕ್ಕೆ ಅದ್ಧೂರಿ ತೆರೆಬಿದ್ದಿದೆ. ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಜೋಸ್ ಬಟ್ಲರ್ ಪಡೆ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಟಿ20 ವಿಶ್ವಕಪ್ ಪ್ರಶಸ್ತಿ ಎತ್ತಿ ಹಿಡಿದಿದೆ. ಈ ಮೂಲಕ ಆಂಗ್ಲರು ಎರಡನೇ ಬಾರಿ ಟಿ20 ವಿಶ್ವಕಪ್ ಪ್ರಶಸ್ತಿಗೆ ಮುತ್ತಿಕ್ಕಿದ ಸಾಧನೆ ಮಾಡಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ 2022 ರಲ್ಲಿ ಅದ್ಭುತ ಪ್ರದರ್ಶನ ತೋರಿದ ಆಟಗಾರರಿಗೆ ಹಾಗೂ ತಂಡಕ್ಕೆ ಐಸಿಸಿ ಪ್ರಶಸ್ತಿ ನೀಡಿದೆ. ಇಲ್ಲಿದೆ ನೋಡಿ ಐಸಿಸಿ ಟಿ20 ವಿಶ್ವಕಪ್ ಪ್ರಶಸ್ತಿ ವಿಜೇತರ ಪಟ್ಟಿ.
ಇಂಗ್ಲೆಂಡ್ ತಂಡದ ಆಲ್ರೌಂಡರ್ ಸ್ಯಾಮ್ ಕುರ್ರನ್ ಫೈನಲ್ ಪಂದ್ಯದಲ್ಲಿ ನೀಡಿದ ಅದ್ಭುತ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಬಾಜಿಕೊಂಡರು. ಜೊತೆಗೆ ಟೂರ್ನಿಯಲ್ಲಿ ನೀಡಿದ ಅತ್ಯುತ್ತಮ ಪ್ರದರ್ಶನಕ್ಕೆ ಸರಣಿಶ್ರೇಷ್ಠ ಪ್ರಶಸ್ತಿ ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಜೊತೆಗೆ ಪುರುಷರ ಟಿ20 ವಿಶ್ವಕಪ್ ಇತಿಹಾಸದಲ್ಲಿ ಸರಣಿಶ್ರೇಷ್ಠ ಪಡೆದ ಮೊಟ್ಟ ಮೊದಲ ಬೌಲರ್ ಆಗಿದ್ದಾರೆ. ಇವರು ಒಟ್ಟು 13 ವಿಕೆಟ್ ಪಡೆದುಕೊಂಡಿದ್ದಾರೆ.
ಟಿ20 ವಿಶ್ವಕಪ್ 2022 ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ: ವಿರಾಟ್ ಕೊಹ್ಲಿ (293 ರನ್)
ಟಿ20 ವಿಶ್ವಕಪ್ 2022 ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ: ವನಿಂದು ಹಸರಂಗ (15 ವಿಕೆಟ್)
ಟಿ20 ವಿಶ್ವಕಪ್ 2022 ರಲ್ಲಿ ಅತಿ ಹೆಚ್ಚು 50+ ರನ್ ಗಳಿಸಿದ ಆಟಗಾರ: ವಿರಾಟ್ ಕೊಹ್ಲಿ (4 ಅರ್ಧಶತಕ)
ಟಿ20 ವಿಶ್ವಕಪ್ 2022 ರಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಆಟಗಾರ: ಗ್ಲೆನ್ ಪಿಲಿಪ್ಸ್, ರಿಲೀ ರೊಸ್ಸೋ (1 ಶತಕ)
ಟಿ20 ವಿಶ್ವಕಪ್ 2022 ರಲ್ಲಿ ಅತಿ ಹೆಚ್ಚು ಸಿಕ್ಸ್ ಸಿಡಿಸಿದ ಆಟಗಾರ: ಸಿಖಂದರ್ ರಾಜಾ (11 ಸಿಕ್ಸರ್)ಟಿ20 ವಿಶ್ವಕಪ್ 2022 ರಲ್ಲಿ ಅತಿ ಹೆಚ್ಚು ಸಿಕ್ಸ್ ಸಿಡಿಸಿದ ಆಟಗಾರ: ಸಿಖಂದರ್ ರಾಜಾ (11 ಸಿಕ್ಸರ್)
ಟಿ20 ವಿಶ್ವಕಪ್ 2022 ರಲ್ಲಿ ಅತಿ ಹೆಚ್ಚು ಫೋರ್ ಬಾರಿಸಿದ ಆಟಗಾರ: ಸೂರ್ಯಕುಮಾರ್ ಯಾದವ್ (24 ಫೋರ್)
ಟಿ20 ವಿಶ್ವಕಪ್ 2022 ರಲ್ಲಿ ಅತಿ ಹೆಚ್ಚು ಮೇಡನ್ ಮಾಡಿದ ಬೌಲರ್: ಭುವನೇಶ್ವರ್ ಕುಮಾರ್ (3 ಮೇಡನ್ ಓವರ್)
ವಿಶ್ವ ಚಾಂಪಿಯನ್ ಆದ ಇಂಗ್ಲೆಂಡ್ ತಂಡ ಪ್ರಶಸ್ತಿ ಗೆದ್ದಿದ್ದಕ್ಕೆ ಸುಮಾರು 13.05 ಕೋಟಿ ರೂಗಳನ್ನು ಬಹುಮಾನದ ರೂಪದಲ್ಲಿ ಪಡೆದಿದೆ. ಇದಲ್ಲದೇ ಸೂಪರ್-12 ಸುತ್ತಿನ ಪ್ರತಿ ಪಂದ್ಯದ ಗೆಲುವಿಗೆ ಪ್ರತ್ಯೇಕವಾಗಿ 32.6 ಲಕ್ಷ ರೂ. ಬಹುಮಾನ ನೀಡಲಾಗಿದೆ.
ಟೂರ್ನಿಯ ರನ್ನರ್ ಅಪ್ ಆಗಿರುವ ಪಾಕಿಸ್ತಾನ ಸುಮಾರು 6.5 ಕೋಟಿ ರೂಪಾಯಿ ಬಹುಮಾನ ಪಡೆಯಲಿದೆ. ಹಾಗೆಯೇ ಸೂಪರ್ 12 ಸುತ್ತಿನಲ್ಲಿ 3 ಪಂದ್ಯಗಳನ್ನು ಗೆದ್ದಿರುವ ಪಾಕಿಸ್ತಾನ ತಂಡದ ಖಾತೆಗೆ ಹೆಚ್ಚುವರಿಯಾಗಿ 97 ಲಕ್ಷಕ್ಕೂ ಅಧಿಕ ಹಣ ಸೇರಲಿದೆ.
ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್‌ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದವು. ಹೀಗಾಗಿ ಸೆಮಿಫೈನಲ್‌ನಲ್ಲಿ ಸೋತ ತಂಡಗಳಿಗೆ ತಲಾ 3.6 ಕೋಟಿ ರೂ. ಬಹುಮಾನ ನೀಡಲಾಗಿದೆ. ಅಂದರೆ ಭಾರತ ತಂಡ 3.6 ಕೋಟಿ ರೂ. ಜೊತೆಗೆ ಸೂಪರ್-12 ಸುತ್ತಿನ ಗೆಲುವಿಗೂ ಬಹುಮಾನ ಪಡೆಯಲಿದೆ.
Published On - 11:13 am, Mon, 14 November 22