Updated on: Nov 14, 2022 | 2:35 PM
ಒಂದೆಡೆ, ವಿಶ್ವದಾದ್ಯಂತದ ಆಟಗಾರರು ಅತಿದೊಡ್ಡ ಕ್ರಿಕೆಟ್ ಲೀಗ್‌ನ ಭಾಗವಾಗಲು ಬಯಸುತ್ತಿದ್ದರೆ, ಇನ್ನೊಂದೆಡೆ ಇಂಗ್ಲೆಂಡ್‌ನ ಟಿ20 ಸ್ಪೆಷಲಿಸ್ಟ್ ಸ್ಯಾಮ್ ಬಿಲ್ಲಿಂಗ್ಸ್ ಐಪಿಎಲ್‌ನೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದಾರೆ. ಸ್ಯಾಮ್ ಬಿಲ್ಲಿಂಗ್ಸ್ ಅವರು IPL 2023 ರಲ್ಲಿ ಆಡುವುದಿಲ್ಲ ಎಂಬ ಮಾಹಿತಿಯನ್ನು ಹೊರಹಾಕಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಬರೆದಿರುವ ಸ್ಯಾಮ್ ಬಿಲ್ಲಿಂಗ್ಸ್, 'ಮುಂದಿನ ಐಪಿಎಲ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಕಠಿಣ ನಿರ್ಧಾರ ತೆಗೆದುಕೊಂಡಿದ್ದೇನೆ. ನಾನು ದೀರ್ಘ ಸ್ವರೂಪಗಳ ಮೇಲೆ ಹೆಚ್ಚು ಗಮನಹರಿಸಲು ಬಯಸುತ್ತೇನೆ. ನನಗೆ ಅವಕಾಶ ನೀಡಿದಕ್ಕಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಧನ್ಯವಾದಗಳು. ಭವಿಷ್ಯದಲ್ಲಿ ಮತ್ತೆ ಐಪಿಎಲ್ ಆಡುವ ಭರವಸೆ ಇದೆ ಎಂದು ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಕಳೆದ ಸೀಸನ್ನಲ್ಲಿ ಸ್ಯಾಮ್ ಬಿಲ್ಲಿಂಗ್ಸ್ ಅವರನ್ನು ಕೋಲ್ಕತ್ತಾ 2 ಕೋಟಿ ರೂ.ಗೆ ಖರೀದಿಸಿತ್ತು. ಆದರೆ ಈ ಬಲಗೈ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್‌ಗೆ ವಿಶೇಷ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಬಿಲ್ಲಿಂಗ್ಸ್ ಕಳೆದ ಐಪಿಎಲ್‌ನಲ್ಲಿ ಕೇವಲ 24.14ರ ಸರಾಸರಿಯಲ್ಲಿ 169 ರನ್ ಗಳಿಸಿದರು. ಅವರ ಬ್ಯಾಟ್‌ನಿಂದ ಒಂದೇ ಒಂದು ಅರ್ಧಶತಕ ಕೂಡ ಬರಲಿಲ್ಲ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಟ್ಟಿಗೆ ಹೇಳುವುದಾದರೆ, ಈ ಫ್ರಾಂಚೈಸಿ ಮಿನಿ ಹರಾಜಿಗು ಮುನ್ನ ಆರೋನ್ ಫಿಂಚ್, ಶಿವಂ ಮಾವಿ, ಮೊಹಮ್ಮದ್ ನಬಿ, ಚಾಮಿಕಾ ಕರುಣಾರತ್ನೆ, ರಮೇಶ್ ಕುಮಾರ್, ಅಜಿಂಕ್ಯಾ ರಹಾನೆ ಅವರನ್ನು ತಂಡದಿಂದ ಬಿಡುಗಡೆ ಮಾಡಬಹುದು ಎಂಬ ಮಾಹಿತಿ ಇದೆ.
ಹಾಗೆಯೇ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯಲ್ಲಿ ಶ್ರೇಯಸ್ ಅಯ್ಯರ್, ಸುನಿಲ್ ನರೈನ್, ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ಪ್ಯಾಟ್ ಕಮ್ಮಿನ್ಸ್, ನಿತೀಶ್ ರಾಣಾ, ರಿಂಕು ಸಿಂಗ್, ಉಮೇಶ್ ಯಾದವ್ ಇದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.