2022 ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಸೋತ ಶಾಕ್ನಲ್ಲಿರುವ ಪಾಕಿಸ್ತಾನ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಸುದ್ದಿ ಪ್ರಕಾರ, ಟಿ20 ವಿಶ್ವಕಪ್ ಫೈನಲ್‌ನಲ್ಲಿ ಗಾಯಗೊಂಡಿರುವ ಶಾಹೀನ್ ಅಫ್ರಿದಿಯ ಗಾಯವು ಗಂಭೀರವಾಗಿದ್ದು, ಅವರು ಹಲವಾರು ತಿಂಗಳುಗಳವರೆಗೆ ಕ್ರಿಕೆಟ್ ಆಡಲು ಸಾಧ್ಯವಾಗುವುದಿಲ್ಲ ಎಂದು ತಿಳಿದುಬಂದಿದೆ. ಫೈನಲ್ ಪಂದ್ಯದಲ್ಲಿ ಕ್ಯಾಚ್ ತೆಗೆದುಕೊಳ್ಳುವಾಗ ಶಾಹೀನ್ ಅಫ್ರಿದಿ ಗಾಯಗೊಂಡಿದ್ದರುಯ. ಇದರಿಂದಾಗಿ ಅವರು ಫೈನಲ್‌ನಲ್ಲಿ 4 ಓವರ್‌ಗಳ ಕೋಟಾವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.