Valentine’s Day 2023: ನಿನ್ನನೇ ಬಯಸಿದೆ ಈ ಹೃದಯ, ನಿನಗೆ ಯಾವ ರೀತಿ ಹೇಳಲಿ ನನ್ನ ಮುಗ್ಧ ಮನದ ಪ್ರೀತಿಯ

| Updated By: Digi Tech Desk

Updated on: Feb 14, 2023 | 11:42 AM

Valentine's Day: ಯಾವುದೋ ಜನ್ಮದ ಪುಣ್ಯ ನನ್ನದು ನೀನು ಸಿಕ್ಕಿರುವಂತಹ ಒಂದು ಕ್ಷಣ ಬದುಕಿನ ಇಡೀ ಜಗತ್ತನ್ನೇ ಬದಲಾಗಿಸಿ ನನ್ನನ್ನು ನಿನ್ನ ಪ್ರೇಯಸಿ ಎಂದು ಅಂದುಕೊಂಡೆ. ಈಗಿನ ಕಾಲದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಯುವಕರು ಹಾಗೂ ವೃದಾಪ್ಯದದವರೆಗೂ ಪ್ರೀತಿ ಎಂಬ ಶಬ್ದವನ್ನು ನಾವು ಎಲ್ಲರ ಮಾತಿನಲ್ಲಿ ತಿಳಿದುಕೊಂಡು ಬಂದಿದ್ದೇವೆ.

Valentines Day 2023: ನಿನ್ನನೇ ಬಯಸಿದೆ ಈ ಹೃದಯ, ನಿನಗೆ ಯಾವ ರೀತಿ ಹೇಳಲಿ ನನ್ನ ಮುಗ್ಧ ಮನದ ಪ್ರೀತಿಯ
Valentine's Day 2023
Follow us on

ಮಾತು ಮೌನವಾಗಿರಬಹುದು ಹೃದಯದ ಬಡಿತದ ಶಬ್ದ ನಿನಗೆ ಕೇಳಿಸದೆ ಇರಬಹುದು ಆದರೆ ನಿನ್ನನ್ನೇ ನೆನೆದು ಹಂಬಲಿಸುತ್ತಿದೆ ನನ್ನ ಮನ. ಮಾತಿಗೆ ಮಾತು ಬೆಳೆದು ಜಗಳ ಕೋಪ ಮುನಿಸುಗಳನ್ನು ಮಾಡಿಕೊಂಡು ಯಾವುದೇ ಕೋಪವಿಲ್ಲದೆ ನನ್ನ ಜೊತೆಗೆ ಇದ್ದು ನನ್ನನ್ನು ಸಂತೈಸಿ, ನನ್ನ ಕಷ್ಟ ಸುಖಕ್ಕೆ ಯಾವಾಗಲೂ ನೀ ಬೆಂಗವಲಾಗಿ ನನ್ನನ್ನು ಕಾಯುತ್ತಿರುವೆ ನೀ… ನಿನಗೆ ಯಾವ ರೀತಿ ಹೇಳಲಿ ನನ್ನ ಮುಗ್ಧ ಮನದ ಪ್ರೀತಿ. ಇನ್ನಷ್ಟು ಹೆಚ್ಚಿಸಿದ್ದು ನಿನ್ನ ಮುಗುಳ್ನಗೆ ಅದರಲ್ಲಿದ್ದ ಪ್ರೀತಿ. ಯಾವುದೋ ಜನ್ಮದ ಪುಣ್ಯ ನನ್ನದು ನೀನು ಸಿಕ್ಕಿರುವಂತಹ ಒಂದು ಕ್ಷಣ ಬದುಕಿನ ಇಡೀ ಜಗತ್ತನ್ನೇ ಬದಲಾಗಿಸಿ ನನ್ನನ್ನು ನಿನ್ನ ಪ್ರೇಯಸಿ ಎಂದು ಅಂದುಕೊಂಡೆ. ಈಗಿನ ಕಾಲದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಯುವಕರು ಹಾಗೂ ವೃದಾಪ್ಯದದವರೆಗೂ ಪ್ರೀತಿ ಎಂಬ ಶಬ್ದವನ್ನು ನಾವು ಎಲ್ಲರ ಮಾತಿನಲ್ಲಿ ತಿಳಿದುಕೊಂಡು ಬಂದಿದ್ದೇವೆ, ಆದರೆ ಒಬ್ಬೊಬ್ಬರ ಪ್ರೀತಿ ಒಂದೊಂದು ಸನ್ನಿವೇಶಕ್ಕೆ ತಕ್ಕಂತೆ ಇರುತ್ತದೆ.

ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಎಂಬ ಮಾತಿನಂತೆ ಎಲ್ಲರೂ ಪ್ರೀತಿಸುತ್ತಾರೆ ಒಬ್ಬೊಬ್ಬರ ಪ್ರೀತಿ ತುಂಬಾನೇ ಅತ್ಯಮೂಲ್ಯವಾದದ್ದು. ಇತ್ತೀಚಿನ ಕಾಲಘಟ್ಟದಲ್ಲಿ ನಿಂತು ಯೋಚಿಸಿದರೆ ಅಥವಾ ನಾವು ವೀಕ್ಷಿಸಿದರೆ ಯಾರಿಗೂ ಒಂದು ಪ್ರೀತಿ ಇರೋದಕ್ಕೆ ಸಾಧ್ಯವಿಲ್ಲ ಮತ್ತು ಅದರ ಹಿಂದೆ ಸಾವಿರಾರು ಪ್ರೀತಿಯ ಮೋಸಗಳು ನಡೆಯುತ್ತಿರುತ್ತದೆ. ಆದರೆ ಎಲ್ಲರೂ ಒಂದೇ ತರ ಇರೋದಿಲ್ಲ. ಒಂದು ಪ್ರೀತಿ, ಒಂದು ಜೀವನ, ಒಂದು ಗುರಿ, ಇದ್ದಂತೆ ಗುರಿಯನ್ನು ತಲುಪಿ ಜೀವನವನ್ನು ಸೃಷ್ಟಿಸಿ ತಾವು ಪ್ರೀತಿ ಮಾಡಿದ ವ್ಯಕ್ತಿಯೊಡನೆ ಜೀವಿಸುತ್ತಾರೆ. ಈ ರೀತಿ ಆದರೆ ಅದು ಬಯಸಿ ಬಂದ ಭಾಗ್ಯ ಎನ್ನಬಹುದು. ಪ್ರೀತಿ ಮಾಡ್ತಾರೆ ತಂದೆ ತಾಯಿಯನ್ನು ಬಿಟ್ಟು ಬರುವ ನಿರ್ಧಾರವನ್ನು ಮಾಡುತ್ತಾರೆ ಆದರೆ ಆ ನಿರ್ಧಾರ ಸರಿಯಲ್ಲ ಅವನು ನನ್ನವಳು ಇವಳು ನನ್ನವಳು ಎನ್ನುವ ಮಾತು ಒಂದು ಕಡೆಯ ಮಾತದರೆ ನಮ್ಮನ್ನು ಇಷ್ಟು ವರ್ಷ ಸಾಕಿ ಸಲಹಿದ ತಾಯಿಯ ಪ್ರೀತಿಯ ಬಗ್ಗೆ ತಂದೆಯ ಪರಿಶ್ರಮದ ಬಗ್ಗೆ ಸ್ವಲ್ಪ ಯೋಚಿಸಿ.. ಪ್ರೀತಿ ಮಾಡಬಾರದು ಎಂದು ಹೇಳಲ್ಲ ಆದರೆ ಪ್ರೀತಿ ಯಾವಾಗಲೂ ಶಾಶ್ವತ ಎಂದು ಹೇಳಲು ಅಸಾಧ್ಯ ಒಬ್ಬರ ಮೇಲೆ ನಂಬಿಕೆ ಇಡುವ ಮೊದಲು ಸಾವಿರ ಸಲ ಯೋಚಿಸಿ ಆ ಸಾವಿರ ಸಲ ಯೋಚಿಸಿದ್ದಲ್ಲಿ ಒಂದು ಬಾರಿ ತಂದೆ ತಾಯಿಗಳ ನೆನಪನ್ನು ಮಾಡಿಕೊಳ್ಳಿ.

ಇದನ್ನೂ ಓದಿ: ನೀವು ಪ್ರೀತಿಸಿದ ಹುಡುಗಿಯ ಜತೆ ಯಾವೆಲ್ಲ ರೊಮ್ಯಾಂಟಿಕ್ ವಿಚಾರ ಹಂಚಿಕೊಳ್ಳಬಹುದು? ಇಲ್ಲಿದೆ ಟಿಪ್ಸ್

ತಂದೆ ತಾಯಿಯ ಪ್ರೀತಿಯಂತೆ ಪ್ರೇಯಸಿ ಕೂಡ ಅಷ್ಟೇ ಪ್ರೀತಿ ಮಡುವವನಾಗಿದ್ದರೆ ಬಿಟ್ಟು ಹೋಗುವ ನಿರ್ಧಾರ ಯಾವತ್ತಿಗೂ ಮಾಡಬೇಡಿ. ಪ್ರೀತಿ ಎನ್ನುವುದು ಕೇವಲ ಮಾತಿಗೆ ಮಾತ್ರ ಸೀಮಿತವಾಗಿರಬಾರದು ಒಂದೇ ಎಂಬ ಭಾವನೆಯಲ್ಲಿ ಜೊತೆಯಾಗಿ ಕಷ್ಟ ಸುಖಗಳನ್ನು ಹಂಚಿಕೊಳ್ಳುವ ಮನಸಾಗಿರಬೇಕೆ ಹೊರತು ಅದನ್ನು ಬಿಟ್ಟು ಹೋಗುವ ಸ್ವಾರ್ಥಿ ಆಗಬಾರದು ಹಾಗೆಯೇ ನಿರ್ಧಾರವನ್ನು ಮಾಡಿಕೊಳ್ಳಬಾರದು.

ಜೀವಿಸುವೆನು ಅವನಿಗಾಗಿ ಪ್ರತಿಕ್ಷಣ ಅವನನ್ನು ಹಂಬಲಿಸುವೆನು ಈ ಹೃದಯಕ್ಕಾಗಿ ಪ್ರೀತಿಯಿಂದ ಕರೆಯುವೆ ನನ್ನ ಮುದ್ದು ಕಂದನಾಗಿ ಜೊತೆಯಾಗಿ ಬಾಳುವೆನು ನನ್ನ ಜೀವ ಇರೋವರೆಗೆ. ನಂಬಿಕೆ ಕೇವಲ ಮೂರು ಅಕ್ಷರದ ಒಂದು ಸಣ್ಣ ಪದ. ಆದರೆ ಆ ನಂಬಿಕೆಯನ್ನು ಕೊನೆವರೆಗೂ ಉಳಿಸಿಕೊಳ್ಳಬೇಕಾದರೆ ಅವರನ್ನು ನಾವು ನಂಬುವತಿರಬೇಕು ಎಲ್ಲಾ ವಿಷಯದಲ್ಲೂ ತಂದೆ- ತಾಯಿಯಂತೆ ಪ್ರೋತ್ಸಾಹ ನೀಡಿದವನು ನೀನು ಜನ್ಮ ಪೂರ್ತಿ ಯಾವಾಗಲೂ ಜೊತೆಗಿರುವವನು ನೀನಾಗಿರಬೇಕು ಎನ್ನುವುದು ನನ್ನ ಒಂದು ಪುಟ್ಟ ಆಸೆ. ಆ ಕನಸನ್ನು ನನಸಾಗಿಸಲು ನಿನ್ನ ಮೇಲೆ ನಂಬಿಕೆಯನ್ನು ಇಟ್ಟವಳು ನಾನು. ತುಂಟತನ ಮಾಡಿಕೊಂಡು, ಜಗಳವಾಡಿಕೊಂಡು, ಒಬ್ಬರನ್ನೊಬ್ಬರು ಅರ್ಥಹಿಸಿ ಇಷ್ಟು ಕಾಲ ಜೊತೆಯಾಗಿದ್ದ ಜೀವ ನಮ್ಮದು ನನ್ನ ನಿನ್ನ ಭಾಂದವ್ಯ ಕೊನೆವರೆಗೂ ಶಾಶ್ವತವಾಗಿ ಹೀಗೆ ಇರಲಿ. ಒಮ್ಮೆ ಅನಿಸಿ ಬಿಡುತ್ತದೆ ಯಾತಕ್ಕಾಗಿ ನಿನ್ನನ್ನೇ ಬಯಸಿದೆ ಹೃದಯ ಎಂದು ಆದರೆ ಈಗ ಅನಿಸುತ್ತಿದೆ ನೀನೇ ನನ್ನ ಇಡೀ ಪ್ರಪಂಚವೆಂದು…

ಪ್ರೇಮ ಪತ್ರ: ರಮ್ಯ ಎಂ ಶ್ರೀನಿವಾಸ್

 

Published On - 11:12 am, Tue, 14 February 23