AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentines Day 2023: ಆಧುನಿಕ ಕಾಲದಲ್ಲೂ ಪ್ರೇಮ ಪತ್ರ ಬರೆಯುವುದು ಹೇಗೆ? ಇಂದು ಪ್ರೀತಿ ಹೃದಯಗಳಿಗೆ ಹಬ್ಬದ ಸಂಭ್ರಮ

ಪ್ರೀತಿಯ ಆಯಾಮಗಳು ಹಲವಾರು. ಈ ಭಾವನೆಗಳೇ ಓರ್ವ ಆದರ್ಶ ಪ್ರೆಮಿಯಾಗಿರಬೇಕು. ಅದೇನೆ ಇರಲಿ ಅವಳಿಗೆ ಕೊಟ್ಟ ಪ್ರೇಮ ಪತ್ರ ಇಲ್ಲಿದೆ.

Valentines Day 2023: ಆಧುನಿಕ ಕಾಲದಲ್ಲೂ ಪ್ರೇಮ ಪತ್ರ ಬರೆಯುವುದು ಹೇಗೆ? ಇಂದು ಪ್ರೀತಿ ಹೃದಯಗಳಿಗೆ ಹಬ್ಬದ ಸಂಭ್ರಮ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Feb 14, 2023 | 12:02 PM

Share

ಪ್ರೀತಿ ಒಂದು ಮಧುರವಾದ ಭಾವನೆ, ಪ್ರೀತಿ ಇಲ್ಲದೆ ಬಹುಶಃ ಜಗತ್ತಿನಲ್ಲಿ ಯಾರೂ ಬದುಕಲು ಸಾಧ್ಯವೇ ಇಲ್ಲ. ಪ್ರೀತಿಯಲ್ಲಿ ಹಲವಾರು ವಿಧಗಳಿವೆ. ಗಂಡ-ಹೆಂಡತಿಯರ ಪ್ರೀತಿ, ಸಹೋದರ ಸಹೋದರಿಯರ ನಡುವಿನ ಪ್ರೀತಿ, ಅಜ್ಜ-ಅಜ್ಜಿಯರ ಮುದ್ದು ಮಕ್ಕಳ ಬಗೆಗಿನ ಪ್ರೀತಿ, ಸಾಕು ಪ್ರಾಣಿಗಳ ಮೇಲೆ ಒಡೆಯನಿಗೆ ಇರುವ ಪ್ರೀತಿ, ಹೀಗೆ ಪ್ರೀತಿಯ ಆಯಾಮಗಳು ಹಲವಾರು. ಈ ಭಾವನೆಗಳೇ ಓರ್ವ ಆದರ್ಶ ಪ್ರೆಮಿಯಾಗಿರಬೇಕು. ಅದೇನೆ ಇರಲಿ ಅವಳಿಗೆ ಕೊಟ್ಟ ಪ್ರೇಮ ಪತ್ರ ಇಲ್ಲಿದೆ. ನನ್ನ ನಯನಗಳಿಗೆ ನಿನ್ನ ಕನಸು ಕಾಣುವುದು ಗೊತ್ತು. ನನ್ನ ಹೃದಯಕ್ಕೆ ನಿನ್ನನ್ನು ಪ್ರೀತಿಸುವುದು ಗೊತ್ತು. ಆದರೆ ನನ್ನ ತುಂಟ ತುಟಿಗಳಿಗೆ ನಿನ್ನ ಮೇಲಿರುವ ಪ್ರೀತಿಯನ್ನು ಹೇಳಲು ಧೈರ್ಯವಿಲ್ಲ. ಅದಕ್ಕಾಗಿ ಈಗಿನ ಮೊಬೈಲ್ ದುನಿಯಾದ SMS ಯುಗದಲ್ಲೂ ಪ್ರೇಮ ಪತ್ರ ಬರೆಯುವ ಸಾಹಸಕ್ಕೆ ಕೈ ಹಾಕಿದ್ದೇನೆ. ಫೆಬ್ರವರಿ 14 ಪ್ರಿತಿಸುವ ಹೃದಯಗಳಿಗೆ ಹಬ್ಬದ ಸಂಭ್ರಮ. ಆ ದಿನ ಬರದಿದ್ದರೂ ನಿನ್ನೊಂದಿಗೆ ಸಂಚರಿಸಲು ನನಗೆ ಕಾತುರ. ಅದರಲ್ಲಿಯೂ ನಿನ್ನನು ಓಲೈಸುವಲ್ಲಿ ಬಲು ಆತುರ. ಆದ್ದರಿಂದ ನಿನ್ನ ಹೃದಯದ ಬಾಗಿಲಿನ ಕದ ತಟ್ಟಿ ಆಗುತ್ತಿರುವ ಪ್ರೇಮ ಚತುರ.

ನನ್ನ ನಯನಗೋಪುರದ ಕನಸುಗಳಿಗೆ ನಾಯಕಿಯಾಗಿರುವೆ. ಆದರೆ ನಾ ನಿನ್ನ ಕನಸಿಗೆ ನಾಯಕನಾಗಿದ್ದೇನೆಯೋ ಇಲ್ಲವೋ ಎಂಬುದು ನನಗೆ ಖಚಿತವಾಗಿ ಗೊತ್ತಿಲ್ಲ. ನನಗೆ ಬಹುದಿನಗಳಿಂದ ಕೋಗಿಲೆಯಂತೆ ಹಾಡಬೇಕು, ಗಾಳಿಪಟದಂತೆ ಎತ್ತರಕ್ಕೆ ಹಾರಬೇಕೆಂಬ ಆಸೆಗಳಿದ್ದವು. ಆದರೆ ನನ್ನ ಹಾಡಿಗೆ ಧ್ವನಿಗೂಡಿಸುವರಾರು? ನನ್ನ ಹಾರಾಟಕ್ಕೆ ಸೂತ್ರಧಾರ ಯಾರು? ಎಂಬ ಪ್ರಶ್ನೆಗಳು ಕಾಡುತ್ತಿದ್ದವು. ನಿನ್ನನು ನೋಡಿದಾಕ್ಷಣ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಅದಕ್ಕಾಗಿ ನಿನ್ನ ವಿಶಾಲ ಹೃದಯದೊಳಗೆ ಒಂದು ಚಿಕ್ಕ ಸ್ಥಾನವನ್ನು ನೀಡುವಂತೆ ಕೋರುತಿದ್ದೇನೆ. ನಿನಗೆ ಇಷ್ಟವಿದ್ದರೆ ಪ್ರೀತಿಸು. ಇಲ್ಲವೇ ತಿರಸ್ಕರಿಸು ನನ್ನ ಕಡೆಯಿಂದ ಬಲವಂತವೇನು ಇಲ್ಲ.

ನಿನ್ನ ನೋಡಿದಾಗಿನಿಂದ ನನ್ನನ್ನೆ ನಾ ಮರೆತ್ತಿದ್ದೇನೆ ಎಂಬುದು ಅರಿವಾದಾಗ ನನಗೆ ಈ ನನ್ನ ತುಂಟ ಹೃದಯ ಲೂಟಿಯಾಗಿದೆ ಎನ್ನುವುದು ಖಾತ್ರಿಯಾಯಿತು. ನನ್ನ ಹೃದಯ ಕದ್ದ ಕಳ್ಳಿ ನೀನೇ ಎಂದು ನನಗೆ ಗೊತ್ತಾದಾಗ ತುಂಬಾನೇ ಖುಷಿ ಯಾಗಿದ್ದು ಏನೂ ಪ್ರಯೋಜನ? ಅದಕ್ಕೆ ಕನಸಿನ ಮಾತನ್ನು ಮರೆತರು ಮನಸ್ಸಿನ ಮಾತನ್ನು ಮರೆಯದೆ ನಿನ್ನೊಡನೆ ಹೆಜ್ಜೆ ಹಾಕಲು ಬಯಸುತ್ತಿರುವ ನಿನ್ನ ವಿಶಾಲ ಹೃದಯದಲ್ಲೊಂದು ಪುಟ್ಟ ಪ್ರೀತಿಗೂಡು ಕಟ್ಟಿಕೊಂಡು ನಿನ್ನದೇ ಹಾಡನ್ನು ಹಾಡುತ್ತಾ ಜೀವನದ ದೋಣಿಯಲ್ಲಿ ನಿನ್ನೊಂದಿಗೆ ಅಂಬಿಗನಾಗಿ ಸಾಗುವ ದೊಡ್ಡ ಅವಕಾಶವನ್ನು ಕೇಳುತ್ತಿರುವೆ.

ಇದನ್ನೂ ಓದಿ: Valentines Day 2023: ನಿನ್ನನೇ ಬಯಸಿದೆ ಈ ಹೃದಯ, ನಿನಗೆ ಯಾವ ರೀತಿ ಹೇಳಲಿ ನನ್ನ ಮುಗ್ಧ ಮನದ ಪ್ರೀತಿಯ

ನಾನೂ ತಮಾಷೆಗಾಗಿ “ನಿನ್ನನು ಪ್ರಿತಿಸುತ್ತಿಲ್ಲ” ಎಂಬುದಕ್ಕೆ ಲಕ್ಷಾಂತರ ಕಾರಣಗಳನ್ನು ಕೊಡಬಲ್ಲೆ. ಆದರೆ ನಾನೂ”ನಿನ್ನನು ಮಾತ್ರ ಪ್ರೀತಿಸುವೆ” ಎನ್ನುವುದಕ್ಕೆ ಒಂದು ಕಾರಣವನ್ನು ನಾ ಕೊಡಲಾರೆ. ಏಕೆಂದರೆ ನಾ ನಿನನ್ನು ಮನಸಾರೆ ಪ್ರೀತಿಸುತ್ತಿರುವುದು ನಿನ್ನ ಸೌಂದರ್ಯಕ್ಕೆ ನಿನ್ನ ಐಶ್ವರ್ಯ ಅಂತಸ್ತಿಗೆ ಅಲ್ಲವೇ ಅಲ್ಲ. “ನಾ ಪ್ರೀತಿಸುತ್ತಿರುವುದು ನಿನ್ನ ಒಳ್ಳೆಯ ಮಗುವಿನಂತಹ ಮುಗ್ದ ಮನಸ್ಸಿಗೆ ದಾಸನಾಗಿ ಎಂಬುದನ್ನು ನೀ ಮೊದಲು ಅರಿಯಬೇಕು ಎಂದೆಲ್ಲ ನಾ ಹೇಳುವುದಿಲ್ಲ. ಇದರ ಅರ್ಥ ನಿನಗೆ ಗೊತ್ತಾಗುತ್ತೆ ಎಂದು ಭಾವಿಸುತ್ತೇನೆ. ಗೆಳತಿ ನೀ ಎಲ್ಲೆಯಿರು, ಹೇಗೆಯಿರು, ಯಾರೊಂದಿಗೆ ಬೇಕಾದರೂ ಜೊತೆಗಿರು. ಆದರೆ ನೀ ಯಾವತ್ತೂ ನಗು ನಗುತ್ತಲೆ ಚೆನ್ನಾಗಿರು.

ಪ್ರೇಮ ಪತ್ರ: ಕಾರ್ತಿಕ್.ಜಿ

Published On - 12:01 pm, Tue, 14 February 23

ಅಪ್ಪನಿಗೆ ಜೀವಾವಧಿ ಶಿಕ್ಷೆ ಆಗಬೇಕು, ಇಲ್ಲಂದ್ರೆ ನಾನೇ ಕೊಲೆ ಮಾಡ್ತೀನಿ ಮಗ
ಅಪ್ಪನಿಗೆ ಜೀವಾವಧಿ ಶಿಕ್ಷೆ ಆಗಬೇಕು, ಇಲ್ಲಂದ್ರೆ ನಾನೇ ಕೊಲೆ ಮಾಡ್ತೀನಿ ಮಗ
ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಮನೆಯಲ್ಲಿ ಆತಿಥ್ಯ
ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಮನೆಯಲ್ಲಿ ಆತಿಥ್ಯ
ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!
ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!
ವರ್ಷಕ್ಕೊಮ್ಮೆ ಮಾತ್ರ ಏಕೆ ಭಕ್ತರಿಗೆ ಹಾಸನಾಂಬೆ ದರ್ಶನ? ಇಲ್ಲಿದೆ ನೋಡಿ ಕಾರಣ
ವರ್ಷಕ್ಕೊಮ್ಮೆ ಮಾತ್ರ ಏಕೆ ಭಕ್ತರಿಗೆ ಹಾಸನಾಂಬೆ ದರ್ಶನ? ಇಲ್ಲಿದೆ ನೋಡಿ ಕಾರಣ
ಕಾನ್ಪುರದಲ್ಲಿ 2 ಸ್ಕೂಟರ್‌ಗಳಲ್ಲಿ ಸ್ಫೋಟ; 6 ಜನರಿಗೆ ಗಾಯ
ಕಾನ್ಪುರದಲ್ಲಿ 2 ಸ್ಕೂಟರ್‌ಗಳಲ್ಲಿ ಸ್ಫೋಟ; 6 ಜನರಿಗೆ ಗಾಯ
ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದ ಪತಿ: ಅಪ್ಪನ ಅಸಲಿ ಬಣ್ಣ ಬಿಚ್ಚಿಟ್ಟ ಮಗ
ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದ ಪತಿ: ಅಪ್ಪನ ಅಸಲಿ ಬಣ್ಣ ಬಿಚ್ಚಿಟ್ಟ ಮಗ
ಅಮಿತ್ ಶಾ ಅವರನ್ನು ನಂಬಬೇಡಿ; ಮೋದಿಗೆ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ
ಅಮಿತ್ ಶಾ ಅವರನ್ನು ನಂಬಬೇಡಿ; ಮೋದಿಗೆ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ
ಬಿಗ್ ಬಾಸ್ ಸ್ಥಗಿತ ಆಗಲು ಜಾಲಿವುಡ್ ಸ್ಟುಡಿಯೋ ಮಾಡಿದ ಮುಖ್ಯ ತಪ್ಪು ಏನು?
ಬಿಗ್ ಬಾಸ್ ಸ್ಥಗಿತ ಆಗಲು ಜಾಲಿವುಡ್ ಸ್ಟುಡಿಯೋ ಮಾಡಿದ ಮುಖ್ಯ ತಪ್ಪು ಏನು?
ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ: ಸಚಿವ ದರ್ಶನಾಪುರ ಏನಂದ್ರು?
ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ: ಸಚಿವ ದರ್ಶನಾಪುರ ಏನಂದ್ರು?
ಸಿಸಿ , ಓಸಿ ಪಡೆಯದೇ ಮನೆ ಕಟ್ಟಿದವರಿಗೆ ಗುಡ್ ನ್ಯೂಸ್
ಸಿಸಿ , ಓಸಿ ಪಡೆಯದೇ ಮನೆ ಕಟ್ಟಿದವರಿಗೆ ಗುಡ್ ನ್ಯೂಸ್