Pulwama Attack: ಫೆ.14ರಂದು ಪುಲ್ವಾಮಾದಲ್ಲಿ ನಡೆದಿದ್ದೇನು? ಪುಲ್ವಾಮಾ ದಾಳಿಗೆ ಭಾರತದ ಪ್ರತೀಕಾರ ಹೇಗಿತ್ತು?

ಫೆಬ್ರವರಿ 14ರಂದು ಜಗತ್ತು ಪ್ರೇಮಿಗಳ ದಿನವನ್ನು ಆಚರಿಸುತ್ತದೆ ಆದರೆ ಪುಲ್ವಾಮದ ಭಯೋತ್ಪಾದಕರ ಕ್ರೂರ ದಾಳಿಯಿಂದಾಗಿ ಈ ದಿನವನ್ನು ಭಾರತವು ಬ್ಲಾಕ್ ಡೇ ಎಂದು ಆಚರಿಸುತ್ತದೆ.

Pulwama Attack: ಫೆ.14ರಂದು ಪುಲ್ವಾಮಾದಲ್ಲಿ ನಡೆದಿದ್ದೇನು? ಪುಲ್ವಾಮಾ ದಾಳಿಗೆ ಭಾರತದ ಪ್ರತೀಕಾರ ಹೇಗಿತ್ತು?
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Feb 14, 2023 | 10:49 AM

ಫೆಬ್ರವರಿ 14ರಂದು ಜಗತ್ತು ಪ್ರೇಮಿಗಳ ದಿನವನ್ನು ಆಚರಿಸುತ್ತದೆ ಆದರೆ ಪುಲ್ವಾಮ(Pulwama Attack) ಭಯೋತ್ಪಾದಕರ ಕ್ರೂರ ದಾಳಿಯಿಂದಾಗಿ ಈ ದಿನವನ್ನು ಭಾರತವು ಬ್ಲಾಕ್ ಡೇ ಎಂದು ಆಚರಿಸುತ್ತದೆ. ಇದು ಭಾರತೀಯ ಭದ್ರತಾ ಪಡೆಗಳ ಮೇಲೆ ಇಲ್ಲಿವರೆಗೆ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಒಂದಾಗಿದ್ದು, 40 ಸಿಆರ್‌ಎಫ್ ವೀರ ಯೋಧರು ಹುತಾತ್ಮರಾಗಿದ್ದಾರೆ. ಸರಿಯಾಗಿ ನಾಲ್ಕು ವರ್ಷಗಳ ಹಿಂದೆ, ಫೆಬ್ರವರಿ 14, 2019ರಂದು ನಡೆದ ಪುಲ್ವಾಮ ದಾಳಿಯು ಭಾರತದ ಇತಿಹಾಸದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗಳಲ್ಲಿ ಒಂದಾಗಿದೆ. ಆ ದಿನ ಭಾರತೀಯ ಆಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಪಟ್ಟಣವಾದ ಪುಲ್ವಾಮದಲ್ಲಿ ಭಾರತೀಯ ಭದ್ರತಾ ಪಡೆಗಳ ಬೆಂಗಾವಲು ಪಡೆಯ ಮೇಲೆ ಆತ್ಮಹತ್ಯಾ ಬಾಂಬರ್ ಸ್ಪೋಟಕ ತುಂಬಿದ ವಾಹನ ಡಿಕ್ಕಿ ಹೊಡೆಯಿತು. ಈ ಭೀಕರ ದಾಳಿಯಲ್ಲಿ 40 ಭಾರತೀಯ ಯೋಧರು ಹುತಾತ್ಮರಾದರು ಮತ್ತು ಇನ್ನು ಅನೆಕರು ಗಾಯಗೊಂಡಿದ್ದರು.

ವರದಿಗಳ ಪ್ರಕಾರ, ವಾಹನವನ್ನು ಗುರಿಯಾಗಿಸಿಕೊಂಡು ಭದ್ರತಾ ಪಡೆಗಳ ಬೆಂಗಾವಲು ಪಡೆಯಲ್ಲಿ 70ಕ್ಕೂ ಹೆಚ್ಚು ವಾಹನಗಳಿದ್ದವು. ವಾಹನವನ್ನು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಓಡಿಸುತ್ತಿದ್ದನು, ನಂತರ ಅವನನ್ನು ಆದಿಲ್ ಅಹ್ಮದ್ ದಾರ್ ಎಂದು ಗುರುತಿಸಲಾಯಿತು, ವಾಹನವು ಸುಮಾರು 80 ಕಿಲೋಗ್ರಾಂಗಳಷ್ಟು ಉನ್ನತ ದರ್ಜೆಯ ಆರ್‌ಡಿಎಕ್ಸ್ ಸ್ಪೋಟಕವನ್ನು ಹೊಂದಿತ್ತು. ಇದನ್ನು ಆತ್ಮಾಹುತಿ ದಾಳಿಯಲ್ಲಿ ಬಳಸಲಾಯಿತು.

ಇದನ್ನೂ ಓದಿ: Pulwama attack: ಪುಲ್ವಾಮ ದಾಳಿಗೆ 4 ವರ್ಷ: ಇಲ್ಲಿವೆ ಕರಾಳ ದಿನದ ಭಾವಚಿತ್ರಗಳು

ಪುಲ್ವಾಮಾದ ಸ್ಥಳೀಯ ನಿವಾಸಿ ಮತ್ತು ಪಾಕಿಸ್ಥಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್(ಜಿಇಎಂ)ನೊಂದಿಗೆ ಸಂಬಂಧ ಹೊಂದಿದ್ದ ಆದಿಲ್ ಅಹ್ಮದ್ ದಾರ್ ಎಂಬ ಯುವಕ ಈ ಆತ್ಮಾಹುತಿ ದಾಳಿಯನ್ನು ನಡೆಸಿದ್ದನು. ಈ ಘಟನೆ ಭಾರತದಾದ್ಯಂತ ವ್ಯಾಪಕ ಆಕ್ರೋಶ ಮತ್ತು ಖಂಡನೆಗೆ ಕಾರಣವಾಗಿತ್ತು. ಹಾಗೂ ಅಂತರಾಷ್ಟೀಯ ಮಟ್ಟದಲ್ಲೂ ಈ ಘಟನೆ ಭಾರಿ ಆಕ್ರೋಶಕ್ಕೆ ಗುರಿಯಾಗಿತ್ತು. ಈ ಘಟನೆಯ ಬಳಿಕ ಹಲವು ದೇಶಗಳು ಭಾರತದೊಂದಿಗೆ ತಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಿತು. ಮತ್ತು ಭಯೋತ್ಪಾದನೆಯ ವಿರುದ್ಧದ ಕ್ರಮಕ್ಕೆ ಕರೆ ನೀಡಿತು. ವಿಶ್ವಸಂಸ್ಥೆ ಕೂಡಾ ದಾಳಿಯನ್ನು ಖಂಡಿಸಿ ದುಷ್ಕರ್ಮಿಗಳನ್ನು ನ್ಯಾಯಾಂಗಕ್ಕೆ ಹಾಜರುಪಡಿಸುವಂತೆ ಕರೆ ನೀಡಿತು.

ಪುಲ್ವಾಮಾ ದಾಳಿಗೆ ಭಾರತ ಹೇಗೆ ಪ್ರತಿಕ್ರಿಯಿಸಿತು

ಭಾರತದ ಭದ್ರತಾ ಪಡೆಗಳ ಮೇಲೆ ಮಾರಣಾಂತಿಕ ದಾಳಿಯ ಕೆಲವು ದಿನಗಳ ನಂತರ, ಫೆಬ್ರವರಿ 26, 2019ರಂದು ಭಾರತೀಯ ವಾಯುಪಡೆಯ ಹಲವಾರು ಜೆಟ್‌ಗಳು ಬಾಲಾಕೋಟ್‌ನಲ್ಲಿರುವ ಜೈಶ್‌ನ ಭಯೋತ್ಪಾದಕ ಶಿಬಿರಗಳ ಮೆಲೆ ಬಾಂಬ್ ದಾಳಿ ಮಾಡಿ ಸುಮಾರು 500 ಭಯೋತ್ಪಾದಕರನ್ನು ಹೊಡೆದುರುಳಿಸಿದರು.

ಬಾಲಾಕೋಟ್‌ನಲ್ಲಿ ನಡೆದ ವೈಮಾನಿಕ ದಾಳಿಯ ನಂತರ, ಪಾಕಿಸ್ತಾನದ ವಾಯುಪಡೆಯು ಜಮ್ಮು ಮತ್ತು ಕಾಶ್ಮೀರದಲ್ಲಿನ ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿಸಲು ಪ್ರಯತ್ನಿಸಿತು. ಈ ಪ್ರಯತ್ನವನ್ನು ಐಎಎಫ್ ವಿಫಲಗೊಳಿಸಿತು.

ಫೆಬ್ರವರಿ 14, 2019ರ ಪುಲ್ವಾಮ ದಾಳಿಯು ಭಾರತದ ಇತಿಹಾಸದಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವ ದುರಂತ ಘಟನೆಯಾಗಿದೆ. ನಾವು ಪುಲ್ವಾಮ ದಾಳಿಯನ್ನು ಎದುರಿಸಿ 4 ವರ್ಷಗಳು ಕಳೆದಿವೆ. ದಾಳಿಯಲ್ಲಿ ಪ್ರಾಣ ಕಳೆದುಕೊಂಡ ವೀರ ಸಿಆರ್‌ಪಿಎಫ್ ಯೋಧರ ನೆನಪಿಗಾಗಿ ಈ ಫೆಬ್ರವರಿ 14ನ್ನು ಬ್ಲಾಕ್ ದಿನವಾಗಿ ಆಚರಿಸಲಾಗುತ್ತಿದೆ.

ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಎಫ್ ಯೋಧರ ಹೆಸರು:

ನಸೀರ್ ಅಹ್ಮದ್ (ಜಮ್ಮು ಮತ್ತು ಕಾಶ್ಮೀರ), ಜೈಮಲ್ ಸಿಂಗ್ (ಪಂಜಾಬ್), ತಿಲಕ್ ರಾಜ್ (ಹಿಮಾಚಲ ಪ್ರದೇಶ), ರೋಹಿತಾಶ್ ಲಂಬಾ (ರಾಜಸ್ಥಾನ), ವಿಜಯ್ ಸೋರೆಂಗ್ (ಜಾರ್ಖಂಡ್), ವಸಂತ ಕುಮಾರ್ ವಿವಿ(ಕೇರಳ), ಸುಬ್ರಮಣ್ಯಂ ಜಿ (ತಮಿಳುನಾಡು), ಮನೋಜ್ ಕುಮಾರ್ ಬೆಹೆರಾ (ಒಡಿಶಾ), ಜಿಡಿ ಗುರು ಹೆಚ್ (ಕರ್ನಾಟಕ), ನಾರಾಯಣ್ ಲಾಲ್ ಗುರ್ಜರ್ (ರಾಜಸ್ಥಾನ), ಮಹೆಶ್ ಕುಮಾರ್ (ಉತ್ತರ ಪ್ರದೇಶ), ಹೇಮರಾಜ್ ಮೀನಾ (ರಾಜಸ್ಥಾನ), ಪಿಕೆ ಸಾಹೂ (ಒಡಿಶಾ), ಸಂಜಯ್ ರಜಪೂತ್ (ಮಹಾರಾಷ್ಟ), ಕೌಶಲ್ ಕುಮಾರ್ ರಾವತ್ (ಉತ್ತರ ಪ್ರದೇಶ), ಪ್ರದೀಪ್ ಸಿಂಗ್ (ಉತ್ತರ ಪ್ರದೆಶ), ಶ್ಯಾಮ್ ಬಾಬು (ಉತ್ತರ ಪ್ರದೇಶ), ಅಜಿತ್ ಕುಮಾರ್ ಆಜಾದ್ (ಉತ್ತರ ಪ್ರದೇಶ), ಮಣಿಂದರ್ ಸಿಂಗ್ ಅತ್ರಿ (ಪಂಜಾಬ್), ಬಬ್ಲು ಸಂತ್ರ (ಪಶ್ಚಿಮ ಬಂಗಾಳ), ಅಶ್ವಿನ್ ಕುಮಾರ್ ಕವೋಚಿ (ಮಧ್ಯಪ್ರದೇಶ), ನಿತಿನ್ ಶಿವಾಜಿ ರಾಥೋಡ್ (ಮಹಾರಾಷ್ಟ), ಭಗೀರಥ ಸಿಂಗ್ (ರಾಜಸ್ಥಾನ), ವೀರೇಂದ್ರ ಸಿಂಗ್ (ಉತ್ತರಖಂಡ), ಅವಧೇಶ್ ಕುಮಾರ್ ಯಾದವ್ (ಉತ್ತರ ಪ್ರದೇಶ), ರತನ್ ಕುಮಾರ್ ಠಾಕೂರ್ (ಬಿಹಾರ), ಜೀತ್ ರಾಮ್ (ರಾಜಸ್ಥಾನ), ಮೋಹನ್ ಲಾಲ್ (ಉತ್ತರಾಖಂಡ), ಪ್ರದೀಪ್ ಕುಮಾರ್ (ಉತ್ತರ ಪ್ರದೇಶ), ರಾಮ್ ವಕೀಲ್ (ಉತ್ತರ ಪ್ರದೇಶ), ಪಂಕಜ್ ಕುಮಾರ್ ತ್ರಿಪಾಠಿ (ಉತ್ತರ ಪ್ರದೇಶ), ರಮೇಶ್ ಯಾದವ್ (ಉತ್ತರ ಪ್ರದೇಶ), ಸುಖ್ಜಿಂದರ್ ಸಿಂಗ್ (ಪಂಜಾಬ್), ಕುಲ್ವಿಂದರ್ ಸಿಂಗ್ (ಪಂಜಾಬ್), ಅಮಿತ್ ಕುಮಾರ್(ಉತ್ತರ ಪ್ರದೇಶ), ವಿಜಯ್ ಕೃ. ಮೌರ್ಯ(ಉತ್ತರ ಪ್ರದೆಶ), ಸಿ. ಶಿವಚಂದ್ರನ್ (ತಮಿಳುನಾಡು), ಸುದೀಪ್ ಬಿಸ್ವಾಸ್ (ಪಶ್ಚಿಮ ಬಂಗಾಳ), ಮನೀಂದರ್ ಸಿಂಗ್ ಅತ್ರಿ (ಪಂಜಾಬ್) ಮಾನೇಶ್ವರ್ ಬ್ಸುಮಾತಾರಿ (ಅಸ್ಸಾಂ)

ಮಧುಶ್ರೀ ಅಂಚನ್

Published On - 10:48 am, Tue, 14 February 23

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ