Updated on: Feb 14, 2023 | 7:40 AM
ಇಂದಿಗೆ ಸರಿಯಾಗಿ 4 ವರ್ಷಗಳ ಹಿಂದೆ 2019ರ ಫೆಬ್ರವರಿ 14ರಂದು ಸಂಜೆ ವೇಳೆಗೆ ಜಮ್ಮು ಮತ್ತು ಕಾಶ್ಮೀರದಿಂದ ಸಿಡಿಲಬ್ಬರದ ಸುದ್ದಿಯೊಂದು ದೇಶವಾಸಿಗಳ ಕಿವಿಗಪ್ಪಳಿಸಿತು. ಅದು ಉಗ್ರರ ಅಟ್ಟಹಾಸಕ್ಕೆ ಭಾರತೀಯ ಸೈನಿಕರನ್ನು ಪ್ರಾಣತೆತ್ತಿದ್ದರು.
ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್‌ಪೋರಾ ಬಳಿಯ ಅವಾಂತಿಪೋರಾ ಸಮೀಪ ರಾಷ್ಟ್ರೀಯ ಹೆದ್ದಾರಿ 44ರಲ್ಲಿ 78 ಸೇನಾ ವಾಹನಗಳಲ್ಲಿ 2,500 ಸಿಆರ್‌ಪಿಎಫ್ ಯೋಧರನ್ನು ಕರೆದುಕೊಂಡು ಸಾಲಾಗಿ ಸಾಗುತ್ತಿದ್ದವು.
ಈ ವೇಳೆ 350 ಕೆಜಿ ಸ್ಫೋಟಕಗಳನ್ನು ಹೊತ್ತ ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುಪಿಯೊಂದು ನೇರವಾಗಿ ಸೇನಾ ವಾಹನಕ್ಕೆ ಡಿಕ್ಕಿ ಹೊಡೆಯಿತು (Pulwama Attack). ಪರಿಣಾಮ ಕ್ಷಣ ಮಾತ್ರದಲ್ಲೇ 76ನೇ ಬೆಟಾಲಿಯನ್‌ನ 40 ಯೋಧರು ಹುತಾತ್ಮರಾದರು.
ಈ ಸುದ್ದಿ ದೇಶಾದ್ಯಂತ ಹಬ್ಬುತ್ತಿದ್ದಂತೆ ದೇಶವಾಸಿಗಳ ಕಂಗಳಲ್ಲಿ ನೀರು ತುಂಬಿತ್ತು, ಆಕ್ರಂದನ ಮುಗಿಲು ಮುಟ್ಟಿತ್ತು. ದೇಶದ ಎಲ್ಲಡೆ ಕ್ಯಾಂಡಲ್ ಮಾರ್ಚ್ ನಡೆದವು. ಪ್ರತಿಕಾರದ ಕೂಗು ಎಲ್ಲಡೆ ಕೇಳಲು ಆರಂಭಿಸಿತು.
ಸೇನಾ ವಾಹನಕ್ಕೆ ಡಿಕ್ಕಿ ಹೊಡೆದ ಉಗ್ರನನ್ನು ಜೈಶ್-ಇ-ಮೊಹಮ್ಮದ್ (ಜೆಇಎಮ್) ಭಯೋತ್ಪಾದಕ ಸಂಘಟನೆಯ ಆತ್ಮಹತ್ಯಾ ದಾಳಿಕೋರ ಆದಿಲ್ ಅಹ್ಮದ್ ದಾರ್ (20) ಎಂದು ಗುರುತಿಸಲಾಗಿದೆ.
2019ರ ಫೆಬ್ರವರಿ 15ರಂದು ಈ ದಾಳಿಯನ್ನು ಪಾಕಿಸ್ತಾನ ಪ್ರಾಯೋಜಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿತು.
ಉಗ್ರ ದಾಳಿಯಿಂದ ಗಾಯಗೊಂಡ ಹುಲಿಯಂತಾಗಿದ್ದ ಫೆಬ್ರವರಿ 26, 2019 ರಂದು ಭಾರತೀಯ ವಾಯುಪಡೆಯು ಪಾಕಿಸ್ತಾನದ ಬಾಲಾಕೋಟ್ ಪ್ರದೇಶದಲ್ಲಿನ ಭಯೋತ್ಪಾದಕ ಶಿಬಿರದ ಮೇಲೆ ದಾಳಿ ನಡೆಸಿತು.
ಪ್ರತೀಕಾರವಾಗಿ, ಪಾಕಿಸ್ತಾನವು ಮರುದಿನ ವಾಯುದಾಳಿಗಳನ್ನು ಪ್ರಾರಂಭಿಸಿತು. ಈ ಸಮಯದಲ್ಲಿ MIG-21 ಫೈಟರ್ ಜೆಟ್ ಪೈಲಟ್ ಅಭಿನಂದನ್ ವರ್ಧಮಾನ್ ಪಾಕಿಸ್ತಾನದ PAF ನ F-16 ಅನ್ನು ಹೊಡೆದುರುಳಿಸಿದರು.