WPL 2023: RCB ತಂಡಕ್ಕೆ ಕನ್ನಡತಿ ಆಯ್ಕೆ
WPL 2023 RCB Squad: ಸ್ಮೃತಿ ಮಂಧನಾ ಹಾಗೂ ಎಲ್ಲಿಸ್ ಪೆರ್ರಿ ಅವರಂತಹ ಅನುಭವಿ ಪ್ಲೇಯರ್ಸ್ ಜೊತೆ ಶ್ರೇಯಾಂಕ ಪಾಟೀಲ್ ಆರ್ಸಿಬಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Updated on:Feb 13, 2023 | 10:05 PM

ವುಮೆನ್ಸ್ ಪ್ರೀಮಿಯರ್ ಲೀಗ್ನ ಹರಾಜು ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 18 ಆಟಗಾರ್ತಿಯರನ್ನು ಖರೀದಿಸಿದೆ. ಇವರಲ್ಲಿ ಕರ್ನಾಟಕ ಪ್ಲೇಯರ್ ಕೂಡ ಇರುವುದು ವಿಶೇಷ.

ಕರ್ನಾಟಕದ 20ರ ಹರೆಯದ ಯುವ ಆಲ್ರೌಂಡರ್ ಶ್ರೇಯಾಂಕ ಪಾಟೀಲ್ ಅವರನ್ನು ಆರ್ಸಿಬಿ ತಂಡ 10 ಲಕ್ಷ ರೂ. ನೀಡಿ ಖರೀದಿಸಿದೆ. ಈ ಮೂಲಕ ಸ್ಥಳೀಯ ಪ್ರತಿಭೆಗಳಿಗೂ ಆರ್ಸಿಬಿ ತಂಡ ಮಣೆಹಾಕಿದೆ.

ಭಾರತ ಎ, ಭಾರತ ಬಿ ಹಾಗೂ ಕರ್ನಾಟಕ ತಂಡದ ಪರ ಆಡಿರುವ ಶ್ರೇಯಾಂಕ ಪಾಟೀಲ್ ಆಲ್ರೌಂಡರ್ ಪ್ರದರ್ಶನದ ಮೂಲಕ ಹಲವು ಬಾರಿ ಮಿಂಚಿದ್ದರು. ಅದರಲ್ಲೂ ಈ ಹಿಂದೆ 9 ವಿಕೆಟ್ ಕಬಳಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.

ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಕಾರ್ಪೋರೇಟ್ ಕಪ್ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದ ಶ್ರೇಯಾಂಕ ಪಾಟೀಲ್ ತಮ್ಮ ಆಫ್ ಸ್ಪಿನ್ ಮೋಡಿ ಮೂಲಕ ಕೇವಲ 24 ರನ್ಗಳಿಗೆ 9 ವಿಕೆಟ್ ಕಬಳಿಸಿ ಮಿಂಚಿದ್ದರು.

ಈ ಅದ್ಭುತ ಪ್ರದರ್ಶನದ ಫಲವಾಗಿ ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲೂ ಅವಕಾಶ ಪಡೆದಿದ್ದಾರೆ. ಅದರಂತೆ ಸ್ಮೃತಿ ಮಂಧನಾ ಹಾಗೂ ಎಲ್ಲಿಸ್ ಪೆರ್ರಿ ಅವರಂತಹ ಅನುಭವಿ ಪ್ಲೇಯರ್ಸ್ ಜೊತೆ ಶ್ರೇಯಾಂಕ ಪಾಟೀಲ್ ಆರ್ಸಿಬಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Published On - 10:05 pm, Mon, 13 February 23









