Updated on: Feb 13, 2023 | 10:45 PM
ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. 12 ಕೋಟಿಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಒಟ್ಟು 18 ಆಟಗಾರರನ್ನು ಖರೀದಿಸಿದೆ. ಈ ಮೂಲಕ ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್ಗೆ ಬಲಿಷ್ಠ ಬಳಗವನ್ನೇ ರೂಪಿಸಿದೆ.
ಈ ಬಾರಿಯ ಹರಾಜಿನಲ್ಲಿ ಕಾಣಿಸಿಕೊಂಡಿದ್ದ 409 ಆಟಗಾರ್ತಿಯರಲ್ಲಿ ಅತ್ಯಧಿಕ ಮೊತ್ತ ಪಡೆದಿರುವುದು ಸ್ಮೃತಿ ಮಂಧಾನ. ಅದು ಕೂಡ ಆರ್ಸಿಬಿ ಫ್ರಾಂಚೈಸಿ ಖರೀದಿಸಿರುವುದು ಎಂಬುದೇ ವಿಶೇಷ. ಹಾಗಿದ್ರೆ ಆರ್ಸಿಬಿ ತಂಡದಲ್ಲಿ ಸ್ಥಾನ ಪಡೆದಿರುವ ಆಟಗಾರ್ತಿಯರು ಯಾರೆಲ್ಲಾ ಎಂದು ನೋಡೋಣ...
ಸ್ಮೃತಿ ಮಂಧಾನ (ಭಾರತ)- 3.4 ಕೋಟಿ ರೂ.
ಸೋಫಿ ಡಿವೈನ್ (ನ್ಯೂಜಿಲೆಂಡ್)- 50 ಲಕ್ಷ ರೂ.
ಎಲ್ಲಿಸ್ ಪೆರಿ (ಆಸ್ಟ್ರೇಲಿಯಾ)- 1.7 ಕೋಟಿ ರೂ.
ರೇಣುಕಾ ಸಿಂಗ್ (ಭಾರತ)- 1.5 ಕೋಟಿ ರೂ.
ರಿಚಾ ಘೋಷ್ (ಭಾರತ)-1.9 ಕೋಟಿ ರೂ.
ಎರಿನ್ ಬರ್ನ್ಸ್ (ಆಸ್ಟ್ರೇಲಿಯಾ) - 30 ಲಕ್ಷ ರೂ.
ದಿಶಾ ಕಸತ್ (ಭಾರತ)- 10 ಲಕ್ಷ ರೂ.
ಇಂದ್ರಾಣಿ ರಾಯ್ (ಭಾರತ)- 10 ಲಕ್ಷ ರೂ.
ಶ್ರೇಯಾಂಕ ಪಾಟೀಲ್ (ಭಾರತ)- 10 ಲಕ್ಷ ರೂ.
ಕನ್ನಿಕಾ ಅಹುಜಾ (ಭಾರತ)- 35 ಲಕ್ಷ ರೂ.
ಆಶಾ ಶೋಬನಾ (ಭಾರತ)- 10 ಲಕ್ಷ ರೂ.
ಹೀದರ್ ನೈಟ್ (ಇಂಗ್ಲೆಂಡ್) - 40 ಲಕ್ಷ ರೂ.
ಡೇನ್ ವ್ಯಾನ್ ನೀಕರ್ಕ್ (ಸೌತ್ ಆಫ್ರಿಕಾ) -30 ಲಕ್ಷ ರೂ.
ಪ್ರೀತಿ ಬೋಸ್ -30 ಲಕ್ಷ ರೂ.
ಪೂನಮ್ ಖೇಮ್ನಾರ್ -10 ಲಕ್ಷ ರೂ.
ಕೋಮಲ್ ಝಂಝಾದ್ -25 ಲಕ್ಷ ರೂ.
ಮೇಗನ್ ಶಟ್ - 40 ಲಕ್ಷ ರೂ.
ಸಹನಾ ಪವಾರ್ -10 ಲಕ್ಷ ರೂ.