AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pulwama attack: ಪುಲ್ವಾಮ ದಾಳಿಗೆ 4 ವರ್ಷ: ಇಲ್ಲಿವೆ ಕರಾಳ ದಿನದ ಭಾವಚಿತ್ರಗಳು

2019ರ ಫೆಬ್ರವರಿ 14ರಂದು ಸಂಜೆ ವೇಳೆಗೆ ಜಮ್ಮು ಮತ್ತು ಕಾಶ್ಮೀರದಿಂದ ಸಿಡಿಲಬ್ಬರದ ಸುದ್ದಿಯೊಂದು ದೇಶವಾಸಿಗಳ ಕಿವಿಗಪ್ಪಳಿಸಿತು. ಅದು ಉಗ್ರರ ಅಟ್ಟಹಾಸಕ್ಕೆ ಭಾರತೀಯ ಸೈನಿಕರನ್ನು ಪ್ರಾಣತೆತ್ತಿದ್ದರು.

TV9 Web
| Edited By: |

Updated on: Feb 14, 2023 | 7:40 AM

Share
CRPF jawans killed in 2019 Pulwama attack in Pics

ಇಂದಿಗೆ ಸರಿಯಾಗಿ 4 ವರ್ಷಗಳ ಹಿಂದೆ 2019ರ ಫೆಬ್ರವರಿ 14ರಂದು ಸಂಜೆ ವೇಳೆಗೆ ಜಮ್ಮು ಮತ್ತು ಕಾಶ್ಮೀರದಿಂದ ಸಿಡಿಲಬ್ಬರದ ಸುದ್ದಿಯೊಂದು ದೇಶವಾಸಿಗಳ ಕಿವಿಗಪ್ಪಳಿಸಿತು. ಅದು ಉಗ್ರರ ಅಟ್ಟಹಾಸಕ್ಕೆ ಭಾರತೀಯ ಸೈನಿಕರನ್ನು ಪ್ರಾಣತೆತ್ತಿದ್ದರು.

1 / 8
CRPF jawans killed in 2019 Pulwama attack in Pics

ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್‌ಪೋರಾ ಬಳಿಯ ಅವಾಂತಿಪೋರಾ ಸಮೀಪ ರಾಷ್ಟ್ರೀಯ ಹೆದ್ದಾರಿ 44ರಲ್ಲಿ 78 ಸೇನಾ ವಾಹನಗಳಲ್ಲಿ 2,500 ಸಿಆರ್‌ಪಿಎಫ್ ಯೋಧರನ್ನು ಕರೆದುಕೊಂಡು ಸಾಲಾಗಿ ಸಾಗುತ್ತಿದ್ದವು.

2 / 8
CRPF jawans killed in 2019 Pulwama attack in Pics

ಈ ವೇಳೆ 350 ಕೆಜಿ ಸ್ಫೋಟಕಗಳನ್ನು ಹೊತ್ತ ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುಪಿಯೊಂದು ನೇರವಾಗಿ ಸೇನಾ ವಾಹನಕ್ಕೆ ಡಿಕ್ಕಿ ಹೊಡೆಯಿತು (Pulwama Attack). ಪರಿಣಾಮ ಕ್ಷಣ ಮಾತ್ರದಲ್ಲೇ 76ನೇ ಬೆಟಾಲಿಯನ್‌ನ 40 ಯೋಧರು ಹುತಾತ್ಮರಾದರು.

3 / 8
CRPF jawans killed in 2019 Pulwama attack in Pics

ಈ ಸುದ್ದಿ ದೇಶಾದ್ಯಂತ ಹಬ್ಬುತ್ತಿದ್ದಂತೆ ದೇಶವಾಸಿಗಳ ಕಂಗಳಲ್ಲಿ ನೀರು ತುಂಬಿತ್ತು, ಆಕ್ರಂದನ ಮುಗಿಲು ಮುಟ್ಟಿತ್ತು. ದೇಶದ ಎಲ್ಲಡೆ ಕ್ಯಾಂಡಲ್​ ಮಾರ್ಚ್​​ ನಡೆದವು. ಪ್ರತಿಕಾರದ ಕೂಗು ಎಲ್ಲಡೆ ಕೇಳಲು ಆರಂಭಿಸಿತು.

4 / 8
CRPF jawans killed in 2019 Pulwama attack in Pics

ಸೇನಾ ವಾಹನಕ್ಕೆ ಡಿಕ್ಕಿ ಹೊಡೆದ ಉಗ್ರನನ್ನು ಜೈಶ್-ಇ-ಮೊಹಮ್ಮದ್‌ (ಜೆಇಎಮ್) ಭಯೋತ್ಪಾದಕ ಸಂಘಟನೆಯ ಆತ್ಮಹತ್ಯಾ ದಾಳಿಕೋರ ಆದಿಲ್ ಅಹ್ಮದ್ ದಾರ್ (20) ಎಂದು ಗುರುತಿಸಲಾಗಿದೆ.

5 / 8
CRPF jawans killed in 2019 Pulwama attack in Pics

2019ರ ಫೆಬ್ರವರಿ 15ರಂದು ಈ ದಾಳಿಯನ್ನು ಪಾಕಿಸ್ತಾನ ಪ್ರಾಯೋಜಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿತು.

6 / 8
CRPF jawans killed in 2019 Pulwama attack in Pics

ಉಗ್ರ ದಾಳಿಯಿಂದ ಗಾಯಗೊಂಡ ಹುಲಿಯಂತಾಗಿದ್ದ ಫೆಬ್ರವರಿ 26, 2019 ರಂದು ಭಾರತೀಯ ವಾಯುಪಡೆಯು ಪಾಕಿಸ್ತಾನದ ಬಾಲಾಕೋಟ್ ಪ್ರದೇಶದಲ್ಲಿನ ಭಯೋತ್ಪಾದಕ ಶಿಬಿರದ ಮೇಲೆ ದಾಳಿ ನಡೆಸಿತು.

7 / 8
CRPF jawans killed in 2019 Pulwama attack in Pics

ಪ್ರತೀಕಾರವಾಗಿ, ಪಾಕಿಸ್ತಾನವು ಮರುದಿನ ವಾಯುದಾಳಿಗಳನ್ನು ಪ್ರಾರಂಭಿಸಿತು. ಈ ಸಮಯದಲ್ಲಿ MIG-21 ಫೈಟರ್ ಜೆಟ್ ಪೈಲಟ್ ಅಭಿನಂದನ್ ವರ್ಧಮಾನ್ ಪಾಕಿಸ್ತಾನದ PAF ನ F-16 ಅನ್ನು ಹೊಡೆದುರುಳಿಸಿದರು.

8 / 8