Valentine’s Day 2023: ಜಾಗಿಂಗ್ನಲ್ಲಿ ಹುಟ್ಟಿದ ಪ್ರೀತಿ, ನನ್ನ ಪ್ರೀತಿಯ ಒಪ್ಪಿಗಾಗಿ ಕ್ಷಣ ಕ್ಷಣಕ್ಕೂ ಕಾಯುತ್ತಿದ್ದ ಅಣ್ಣ ಸ್ನೇಹಿತ
ಆ ದಿನದಿಂದ ನಮ್ಮ ಆ ಪುಟ್ಟ ಪ್ರಪಂಚಕ್ಕೆ ನಾವೆ ಸೂತ್ರಧಾರಿಗಳು ಮುಗ್ಧ ಮನಸ್ಸುಗಳಲ್ಲಿ ಪ್ರೀತಿಯು ಸಾಗರದಂಚಿಗೆ ಹರಿಯುತ್ತಿತ್ತು. ಒಮ್ಮೊಮ್ಮೆ ಜಗಳ ಒಮ್ಮೊಮ್ಮೆ ಪ್ರೀತಿ ಇದು ನಮ್ಮಲ್ಲಿ ಸಮನಾಗಿತ್ತು. ಎರಡು ಇದ್ದರೆ ಅಲ್ವಾ ಪ್ರೀತಿಗೊಂದು ಅರ್ಥ ಸಿಗುವುದು.
ಮುಂಜಾನೆಯ ವೇಳೆ ತಂಪಾದ ವಾತಾವರಣ ಕಣ್ಬಿಟ್ಟು ನೋಡಲು ಚಿಲಿಪಿಲಿ ಹಕ್ಕಿಯ ಕಲರವ, ಬೆಳಿಗ್ಗೆ ಎದ್ದು ಜಾಗಿಂಗ್ ಹೊರಟೆ. ದಾರಿ ಮಧ್ಯೆ ನನ್ನ ಸಂಬಂಧಿಕರ ಅಣ್ಣ ಹಾಗೂ ಅವನ ಸ್ನೇಹಿತ ಕಾಣಿಸಿಕೊಂಡರು. ಜಾಗಿಂಗ್ ಮಾಡುತ್ತಲೇ ಅಣ್ಣನನ್ನು ಮಾತನಾಡಿಸಲು ಹೋದೆ ಅಣ್ಣನೊಂದಿಗೆ ಸಲ್ಪ ಸಮಯ ಮಾತನಾಡಿದೆ ನಂತರ ಅಣ್ಣ ಅವನೊಂದಿಗಿದ್ದ ಅವನ ಸ್ನೇಹಿತನನ್ನು ಪರಿಚಯ ಮಾಡಿಸುತ್ತಾನೆ ಅಣ್ಣನ ಸ್ನೇಹಿತ ನನ್ನನು ನೋಡಿ ಕಿರುನಗೆ ಬೀರಿ ಹುಬ್ಬನ್ನು ಏರಿಸಿಕೊಂಡು ನನ್ನ ಕಡೆಗೆ ನೋಡುತ್ತಿದ್ದ ಯಾಕಾದರೂ ಈತರ ನೋಡ್ತಿದ್ದಾರೋ ಅಂತ ಅನಿಸ್ತಾ ಇತ್ತು. ನೋಡಲೇನು ಸುಂದರವಾಗಿ ಇದ್ದ ಅವನು ನೋಡುವ ರೀತಿಗೆ ನನಗೆ ಅಣ್ಣನೊಂದಿಗೆ ಜಾಸ್ತಿ ಸಮಯ ಮಾತನಾಡುವುದಕ್ಕೆ ಮುಜುಗರವಾಗುತ್ತಿತ್ತು ಅಣ್ಣನಿಗೆ ಮತ್ತೆ ಸಿಗುವೆ ಎಂದು ಹೇಳಿ ನಾ ಮನೆಗೆ ತೆರಳಿದೆ.
ಯಾಕೋ ಕಾಣೆ ರಾತ್ರಿ ನಿದ್ದೆಯಲ್ಲೂ ಅವನದೆ ನೆನೆಪು ಅವನ ಆ ನೋಟ ಅದ್ಯಾಕೋ ಮತ್ತೆ ಮತ್ತೆ ಕಾಡುತಿತ್ತು. ಅವನೇ ಕಣ್ಣ ಮುಂದೆ ಬಂದ ಹಾಗನಿಸುತಿತ್ತ್ತು. ನನ್ನ ನಿದ್ರೆಯನ್ನು ಕೆಡಿಸಿ ಅವನು ಆರಾಮಾಗಿ ನಿದ್ರೆಗೆ ಜಾರಿರಬೇಕೆಂದು ಮನಸಲ್ಲೇ ಬಯ್ಯುತ್ತಾ ಮಲಗಿದವಳಿಗೆ ಅದು ಯಾವಾಗ ನಿದ್ದೆ ಬಂದಿತ್ತು ತಿಳಿಯಲೇ ಇಲ್ಲ. ಎಂದಿನಂತೆ ಮತ್ತೆ ನನ್ನ ಜಾಗಿಂಗ್ ಶುರುವಾಯಿತು ಮಾರನೆಯ ದಿನ ಎಂದಿನಂತೆ ಜಾಗಿಂಗ್ ಹೊರಟೆ ಅಣ್ಣನ ಸ್ನೇಹಿತನೊಬ್ಬನೆ ಬಂದಿದ್ದ. ನನ್ನನ್ನು ಕಂಡು ಅವನು ಹಾಯ್ ಮಾಡುತ್ತಾನೆ ನಾನು ಕೂಡ ಹಾಯ್ ಎಂದೆ. ನಿನ್ನ ಹೆಸರೇನು ಎಂದು ಕೇಳಿದ ವಿನಿ ಅಂದೆ. ನಿನ್ನ ಹೆಸರೇನು ಎಂದು ಕೇಳಿದೆ ಸುನಿ ಎಂದ. ಅಂದಾಗೆ ನಿನ್ನಲ್ಲಿ ಏನೋ ಹೇಳಬೇಕು ನಂಬರ್ ಕೊಡುವೆಯಾ ಎಂದು ಕೇಳುತ್ತಾನೆ ನನಗೂ ಒಳಗೊಳಗೆ ಏನೋ ಸಂತೋಷ ನಂಬರ್ ಕೊಡಲು ನನಗೂ ಮನಸ್ಸಿತ್ತು ಆದ ಕಾರಣ ನಂಬರ್ ಕೊಟ್ಟೆ ಅವನ ನೋಟಕ್ಕೆ ಸೋತಿದ್ದೆ ಪ್ರೀತಿಯ ಚಿಗುರು ನಿಧಾನವಾಗಿ ಹುಟ್ಟಲಾರಂಬಿಸಿತು.
ಮನೆಗೆ ತೆರಳಿದ ನಂತರ ಸುನಿಯಿಂದ ಮೆಸೇಜ್ ಬರುತ್ತೆ ಹೀಗೆ ಮಾತನಾಡುತ್ತಾ ಮಾತನಾಡುತ್ತಾ ಒಂದು ದಿನವನ್ನು ನಿನ್ನನ್ನು ಪ್ರೀತಿಸುತ್ತೇನೆ ಎಂದು ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಾನೆ. ನಿನ್ನನ್ನು ನೋಡಿದ ಕ್ಷಣದಿಂದಲೇ ನಾ ನಿನ್ನ ನನ್ನವಳೆಂದು ಭಾವಿಸಿರುವೆ ಎಂದು ಹೇಳಿದ ಅವನು ಹಾಗೆ ಹೇಳುವಾಗ ನನ್ನಲ್ಲಿ ಎಲ್ಲಿಲ್ಲದ ಸಂತಸ ಆದರೂ ಕೂಡ ನನಗೆ ಅವನ ಮೇಲೆ ಇರೋ ಪ್ರೀತಿಯನ್ನು ನಾ ವ್ಯಕ್ತಪಡಿಸದೆ ನನಗೆ ಕೆಲಕಾಲ ಸಮಯ ಬೇಕೆಂದು ಸತಾಯಿಸಿದೆ. ಆ ಮಾತಿಗೆ ಅವನು ಒಪ್ಪಿಗೆ ನೀಡಿ ನಿನಗಾಗಿ ವರುಷಗಳೆ ಕಾಯುವೆ ಎಂದು ಹೇಳಿದ.
ಇದನ್ನೂ ಓದಿ: ಅವನನ್ನು ನೋಡಿದಾಗ ನನಗ್ಯಾಕೆ ಹೀಗಾಯ್ತು? ಇದು ಪ್ರೀತಿನಾ, ಆಕರ್ಷಣೆಯಾ?
ಕೆಲ ಸಮಯಗಳ ಕಾಲ ಅವನನ್ನು ಸತಾಯಿಸಿದ ನಾನು ಪ್ರೇಮಿಗಳ ದಿನ ಬರಲೆಂದು ಕಾದೆ. ದಿನ ಪ್ರೇಮಿಗಳ ದಿನ ಆಗಿತ್ತು ನನಗಾಗಿ ಸ್ವಚ್ಛ ಮನಸ್ಸಿಂದ ಕಾದ ಅವನ ಪ್ರೇಮಕ್ಕೆ ಮನಸ್ಸೊತು ಕೈಯಲ್ಲಿ ಒಂದು ಗುಲಾಬಿ ಹೂವನ್ನು ತೆಗೆದುಕೊಂಡು ಅವನು ಪ್ರಪೋಸ್ ಮಾಡಿದೆ . ಆ ದಿನದಿಂದ ನಮ್ಮ ಆ ಪುಟ್ಟ ಪ್ರಪಂಚಕ್ಕೆ ನಾವೆ ಸೂತ್ರಧಾರಿಗಳು ಮುಗ್ಧ ಮನಸ್ಸುಗಳಲ್ಲಿ ಪ್ರೀತಿಯು ಸಾಗರದಂಚಿಗೆ ಹರಿಯುತ್ತಿತ್ತು. ಒಮ್ಮೊಮ್ಮೆ ಜಗಳ ಒಮ್ಮೊಮ್ಮೆ ಪ್ರೀತಿ ಇದು ನಮ್ಮಲ್ಲಿ ಸಮನಾಗಿತ್ತು. ಎರಡು ಇದ್ದರೆ ಅಲ್ವಾ ಪ್ರೀತಿಗೊಂದು ಅರ್ಥ ಸಿಗುವುದು. ನಮ್ಮಲ್ಲಿ ಪ್ರೀತಿ ಎಷ್ಟರಮಟ್ಟಿಗೆ ಬೆಳೆದಿತ್ತು ಅಂದರೆ ಒಂದು ದಿನ ನೋಡದೆ ಹೋದರೆ ಆ ದಿನ ಶೂನ್ಯ ಎನ್ನುವಂತಾಗುತ್ತಿತ್ತು.
ಆಕಸ್ಮಿಕವಾಗಿ ಹುಟ್ಟಿದ ಈ ಪ್ರೀತಿ ಕೊನೆವರೆಗೂ ಉಳಿಯಲಿ ಎನ್ನುವುದೊಂದೇ ಹಂಬಲ ಪ್ರೀತಿನ ಪ್ರೀತಿಯಿಂದ ಗೆದ್ದರೆ ಪ್ರೀತಿಯು ಚಿರಕಾಲ ಆಗಿ ಉಳಿಯುತ್ತದೆ. ಈ ಪ್ರೀತಿ ಯಾವಾಗ ಎಲ್ಲಿ ಯಾರ ಮೇಲೆ ಹೇಗೆ ಹುಟ್ಟುವುದು ಯಾರಿಗೂ ತಿಳಿಯುವುದಿಲ್ಲ ಅದಕ್ಕೆ ಹೇಳುವುದು ಪ್ರೀತಿ ಕುರುಡು ಎಂದು.
ಪ್ರೇಮ ಪತ್ರ: ಪೂಜಾ