AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Day Special 2023: ಅವನನ್ನು ನೋಡಿದಾಗ ನನಗ್ಯಾಕೆ ಹೀಗಾಯ್ತು? ಇದು ಪ್ರೀತಿನಾ, ಆಕರ್ಷಣೆಯಾ?

ನನ್ನ ಸ್ನೇಹಿತರನ್ನು ಹುಡುಕುತ್ತ ಮುಂದೆ ಹೋದ ನನಗೆ ಮತ್ತೊಂದು ವಿಸ್ಮಯ ಎದುರಾಗಿತ್ತು. ಅದೊಂದು ಎತ್ತರ ದೇಹ, ಬಿಳಿ ಶರ್ಟ್, ಪ್ರಿಂಟೆಡ್ ಬ್ಲೂ ಶಾರ್ಟ್ಸ್​, ತಂಗಾಳಿ ಅವನ ದೇಹ ಸೋಕಲು ಅವನ ಶರ್ಟ್​ನ ಒಳಗಿಂದ ನುಸುಳುತ್ತಿತ್ತು.

Valentine's Day Special 2023: ಅವನನ್ನು ನೋಡಿದಾಗ ನನಗ್ಯಾಕೆ ಹೀಗಾಯ್ತು? ಇದು ಪ್ರೀತಿನಾ, ಆಕರ್ಷಣೆಯಾ?
ಸಾಂದರ್ಭಿಕ ಚಿತ್ರ
ಆಯೇಷಾ ಬಾನು
| Updated By: ಅಕ್ಷಯ್​ ಪಲ್ಲಮಜಲು​​|

Updated on: Feb 14, 2023 | 12:19 PM

Share

ಅವನನ್ನು ನೋಡುತ್ತಿದ್ದರೆ ಮುಖದಲ್ಲಿ ಮಂದಹಾಸ, ನಾಚಿಕೆ, ಮನಸಲ್ಲಿ ಅದೆನೋ ನೆಮ್ಮದಿ, ಒಂದು ರೀತಿಯ ಖುಷಿ, ಉದ್ವೇಗ, ಹೊಟ್ಟೆಯಲ್ಲಿ ಚಿಟ್ಟೆಗಳು ಹಾರಾಡಿದಂತಾಗುತ್ತೆ ಅಂತ ನನ್ನ ಸ್ನೇಹಿತರು ಹೇಳುವಾಗ ನಾನು ಪಳ್ಳನೆ ನಕ್ಕಿ ಅವರ ಬಗ್ಗೆ ಹಾಸ್ಯ ಮಾಡ್ತಿದ್ದೆ. ಯಾರೂ ಒಬ್ಬ ಸ್ಮಾರ್ಟ್​ ಫೆಲೋಯಿಂದ ಇಷ್ಟೆಲ್ಲಾ ಅನುಭವವಾಗುತ್ತಾ.. ನಮ್ಮಲ್ಲಿ ಇಷ್ಟೊಂದು ಬದಲಾವಣೆಗಳಾಗುತ್ತವಾ? ಬುಲ್ ಶಿಟ್ ಅಂತ ನಗಾಡ್ತಿದ್ದೆ. ಇನ್ನು ಪ್ರೀತಿ, ಪ್ರೇಮದ ಬಗ್ಗೆ ಕತೆಗಳು, ಕವಿತೆಗಳು, ಸಿನಿಮಾಗಳಲ್ಲಿ ನೋಡಿದಾಗ ವಾವ್ಹ್ ಇದು ಕೇವಲ ಇದಕ್ಕೇ ಸೀಮಿತ, ನಿಜ ಜೀವನದಲ್ಲಿ ಇಂತದ್ದೇನು ಆಗಲ್ಲ… ಅಂತ ಅಂದುಕೊಳ್ಳುತ್ತಿದ್ದೆ. ಹೀಗೆ ಪ್ರೇಮದಲ್ಲಿ ‘L’ ಬೋರ್ಡ್​ ಆಗಿದ್ದ ನಾನು ಮೊದಲ ಬಾರಿಗೆ ಪ್ರೇಮವೆಂದರೆ ಇದೇ ನಾ… ನನಗೆ ಪ್ರೀತಿಯಾಗಿದೆಯಾ..? ಇದನ್ನೇ ‘Love At First Sight’ ಅಂತಾರಾ? ಎಂಬ ಸಂದೇಹಕ್ಕೆ ಬಿದ್ದದ್ದು ನಾನು ಉಡುಪಿಗೆ ಹೋಗಿದ್ದಾಗ..

ಅದು ಕಳೆದ ವರ್ಷ ಡಿಸೆಂಬರ್ ತಿಂಗಳು ನನ್ನ ಸರ್ಟಿಫಿಕೇಟ್​(ಫೇಕ್ ಬರ್ತಡೇ) ಹುಟ್ಟುಹಬ್ಬ ಆಚರಿಸಬೇಕು, ಸರ್ಪೈಸ್ ನೀಡಬೇಕೆಂದು ನನ್ನ ಮೂವರು ಗೆಳತಿಯರು ಉಡುಪಿಗೆ ಹೋಗಲು ಟ್ರಿಪ್ ಪ್ಲಾನ್ ಮಾಡಿದ್ರು. ನನಗೂ ನನ್ನ ಕೆಲಸದಿಂದ ಚಿಕ್ಕದೊಂದು ಬ್ರೇಕ್ ಬೇಕು ಎನಿಸಿ ಈ ಟ್ರಿಪ್​ಗೆ ಜೈ ಎಂದೆ. ಬುಕ್ ಮಾಡಿದ್ದ ಟ್ರೈನ್ ಟಿಕೆಟ್​ಗಳು ಕೊನೇ ಅಂತದಲ್ಲಿ ಕ್ಯಾನ್ಸಲ್ ಆಗಿ ಕೈಕೊಟ್ಟಿದ್ದವು. ಟಿಟಿ ಜೊತೆ ಚಿಕ್ಕದೊಂದು ಜಗಳವಾಡಿ ಕೊನೆಗೆ ಜನರಲ್ ಟಿಕೆಟ್ ಪಡೆದು ಜನ ಜಂಗುಳಿಯಲ್ಲಿ ಎದ್ನೋ ಬಿದ್ನೋ ಅಂತ ಉಡುಪಿ ಸೇರಿದ್ವಿ. ಕೃಷ್ಣನ ಸನ್ನಿಧಾನದಲ್ಲೇ ರೂಂ ಬುಕ್ ಮಾಡಿ 10 ಗಂಟೆ ನಿದ್ದೆ ಹೊಡೆದು ಕನಕನ ಕಿಂಡಿ ಮೂಲಕ ದರ್ಶನ ಪಡೆದ ನಂತರ ನಮ್ಮ ಉಡುಪಿ ಎಕ್ಸ್ಪ್ಲೋರ್ ಶುರುವಾಯಿತು. ಬೀದಿ ಬೀದಿ ಸುತ್ತಾಡುದ್ವಿ. ಅಜ್ಜ, ಮಕ್ಕಳು, ಆಂಟಿ ಎಲ್ಲರೊಂದಿಗೂ ಒಂದಷ್ಟು ಮಾತು, ಹರಟೆ. ಕೊನೆಗೆ ನೀರಲ್ಲಿ ಸಿಗುವ ಒಂದಷ್ಟು ಜಲಚರಗಳ ರುಚಿ ನೋಡಿ ಜೀವನ ಸಾರ್ಥಕ ಅನಿಸ್ತು.

ಇದನ್ನೂ ಓದಿ: Udupi Travel Guide: ಉಡುಪಿಗೆ ಹೋಗ್ತಿದ್ದೀರಾ? ಈ ಸ್ಥಳಗಳಿಗೆ ಮಿಸ್ ಮಾಡ್ದೆ ಹೋಗಿ

ನೀಲಿ ಕಡಲ ತೀರದಲ್ಲಿ ಹಗುರಾಯ್ತು ಮನಸ್ಸು

ನಾವು ಉಡುಪಿಯಲ್ಲಿ ಕಳೆದದ್ದು ಕೇವಲ ಮೂರೇ ದಿನ. ಅದರಲ್ಲಿ ಒಂದು ದಿನ ಮಲ್ಪೆ ಬೀಚ್​ನತ್ತ ನಮ್ಮ ಪ್ರಯಾಣ ಹೊರಟಿತ್ತು. ಬೀಚ್​​ಗೆ ತಲುಪುತ್ತಿದ್ದಂತೆ ಕೊನೆಯೇ ಇಲ್ಲದಂತೆ ಕಣ್ಣು ಹಾಯಿಸಿದಷ್ಟು ನೀರು ಆಕಾಶ ಮುಟ್ಟುತ್ತಿತ್ತು. ನೆತ್ತಿ ಸುಡುವ ಬಿಸಿಲು. ಒಂದಷ್ಟು ಸಮಯ ಬೀಚ್​ನ ಮರಳಲ್ಲಿ ಆಟವಾಡಿ, ಉಪ್ಪು ನೀರಿನಲ್ಲಿ ಮಿಂದು ಮಲ್ಪೆ ಬೀಚ್​ನಿಂದ ಸೆಂಟ್ ಮೇರಿಸ್ ದ್ವೀಪಕ್ಕೆ ಹಡಗು ಹಿಡಿದ್ವಿ. ಪ್ರಕೃತಿ ಸೌಂದರ್ಯದ ರಾಣಿಯಂತಿರುವ ಸೆಂಟ್ ಮೇರಿಸ್​​ ಐ ಲಾಂಡ್​ಗೆ ಬರಬೇಕು ಎಂಬುವುದು ನಮ್ಮೆಲ್ಲರ ಕನಸಾಗಿತ್ತು. ಹೀಗಾಗಿ ನಾವು ಈ ಸ್ಥಳವನ್ನು ನೋಡಲು ಕಾತುರದಿಂದ ಕಾಯುತಿದ್ವಿ. ನೀಲಿ ಸಾಗರದಲ್ಲಿ ಹಡಗು ತೇಲುತ್ತ ತಣ್ಣನೆಯ ಗಾಳಿ ಮೈ ಸೋಕಲು ಮನಸ್ಸು ಶಾಂತವಾಗಿತ್ತು. ಕಡಲ ಅಲೆಗಳು ಅಪ್ಪಳಿಸಿ ದೋಣಿಯನ್ನು ತೇಲಿಸಿದರೂ ಮನಸ್ಸು, ದೇಹ ಶಾಂತವಾಗಿ ಅಲೆಗಳ ತಾಳಕ್ಕೆ ಕುಣಿಯುತ್ತಿತ್ತು.

ಕೊನೆಗೆ 10-20 ನಿಮಿಷದ ಬಳಿಕ ಕನಸಿನ, ಬಹು ನಿರೀಕ್ಷಿತ ಸೆಂಟ್ ಮೇರಿಸ್ ಐ ಲಾಂಡ್​ ಕಣ್ಣ ಮುಂದಿತ್ತು. ಹಡಗು ಬ್ರೇಕ್ ಹೊಡೆದು ನಿಲ್ಲಿಸಿದ್ರೂ.. ಹಡಗು ಮಾತ್ರ ಥೈಯ್ಯಾ ಥಕ ಥಯ್ಯಾ ಥಕ ಅಂತ ಕುಣಿತಾ ಇತ್ತು. ಹಡಗಿನಿಂದ ನೀರಿಗೆ ಕಾಲಿಡುತ್ತಿದ್ದಂತೆ ಸೀ ಶೆಲ್​ಗಳು ಸ್ವಾಗತಿಸಿದ್ವು. ವಿಶಾಲ ದ್ವೀಪ, ಎತ್ತ ನೋಡಿದರೂ ಜನ, ಸುತ್ತ ಒಂದಷ್ಟು ಗಿಡ-ಮರ, ಬಂಡೆ ಕಲ್ಲುಗಳು ರಮ್ಯ ಮನೋಹರ ದೃಶ್ಯಕ್ಕೆ ಸಾಕ್ಷಿಯಾದ್ವು. ಹಡಗಿನಲ್ಲಿ ಬಂದ ಅಂಕಲ್ ಒಬ್ರು.. ನೋಡಮ್ಮ ಕೇವಲ ಒಂದು ಗಂಟೆ ಅಷ್ಟೇ ಟೈಮ್, ಮತ್ತೆ ಇದೇ ಹಡಗು ಬಂದು ಇಲ್ಲಿಂದ ಕರ್ಕೊಂಡು ಹೋಗುತ್ತೆ.. ಬೇರೆ ಎಲ್ಲ ನೋಡ್ಕು ಅಂತ ಹೇಳಿ ಹೊರಟ್ರು. ಸರಿ ಎಂದು ನಾನು, ನನ್ನ ಸ್ನೇಹಿತರು ಒಳಗೆ ಹೋದ್ವಿ. ಇದರಲ್ಲಿ ಇಬ್ಬರು ಫೋಟೋಶೂಟ್ ಮಾಡಿಸಲೆಂದೇ ತಂದಿದ್ದ ಬಟ್ಟೆಗಳನ್ನು ಹಾಕಿಕೊಂಡು ಬರುವುದಾಗಿ ಹೇಳಿ ಹೋದ್ರು. ಉಳಿದ ನಾವಿಬ್ಬರು ಮುಂದೆ, ಮುಂದೆ ಹೋಗುತ್ತಿದ್ದಂತೆ ಸೆಂಟ್ ಮೇರಿಸ್ ದ್ವೀಪದ ಅಂದ ತೆರೆಯುತ್ತ ಹೋಗಿತು.

ಆ ಒಂದೇ ಒಂದು ನೋಟ, ಮನಸಲ್ಲಿ ಚಿಗುರಿದ್ದು ಸಾವಿರಾರು ಭಾವನೆ

ಮುಂದೆ ಮುಂದೆ ಹೋಗುತ್ತಿದ್ದಂತೆ ವಿಶಾಲ ನೀಲಿ ಕಡಲ ತೀರ, ಎದೆ ಎತ್ತರದ ತೆಂಗಿನ ಮರಗಳು ನಮ್ಮನ್ನು ಬೇರೆಯೇ ಲೋಕಕ್ಕೆ ಕರೆದುಕೊಂಡು ಹೋಗಿದ್ದವು. ಆದ್ರೆ ಈ ಪ್ರಕೃತಿ ಸೌಂದರ್ಯದಲ್ಲಿ ಮರೆತು ಮರಳಾದ ನನ್ನನ್ನು ಬಿಟ್ಟು ನನ್ನ ಮತ್ತೊಬ್ಬಳು ಸ್ನೇಹಿತೆ ಕಾಲ್ ಬಂತು ಅಂತ ಮತ್ತೆಲ್ಲೋ ಹೋದಳು. ನನಗೆ ಪ್ರಜ್ಞೆ ಬಂದಾಗ ನಾನು ಒಬ್ಬಂಟಿಯಾಗಿದ್ದೆ.

ನನ್ನ ಸ್ನೇಹಿತರನ್ನು ಹುಡುಕುತ್ತ ಮುಂದೆ ಹೋದ ನನಗೆ ಮತ್ತೊಂದು ವಿಸ್ಮಯ ಎದುರಾಗಿತ್ತು. ಅದೊಂದು ಎತ್ತರ ದೇಹ, ಬಿಳಿ ಶರ್ಟ್, ಪ್ರಿಂಟೆಡ್ ಬ್ಲೂ ಶಾರ್ಟ್ಸ್​, ತಂಗಾಳಿ ಅವನ ದೇಹ ಸೋಕಲು ಅವನ ಶರ್ಟ್​ನ ಒಳಗಿಂದ ನುಸುಳುತ್ತಿತ್ತು.. ಎದ್ದು ಕಾಣುತ್ತಿದ್ದ ಅವನ 4 ಪ್ಯಾಕ್ಸ್ ಇವನೊಬ್ಬ ಪಕ್ಕ ಫಿಟ್​ನೆಸ್ ಪ್ರಿಯ ಎಂದು ಹೇಳುತ್ತಿತ್ತು. ಅವನ ಈ ಮೈ ಮಾಟ, ಮುಗುಳು ನಗೆ, ಮಕ್ಕಳೊಂದಿಗಿನ ಆಟ ನೋಡಿ ನನಗೆ ದೇಹದಲ್ಲಿ ಕರೆಂಟ್ ಪಾಸ್ ಆದ ಹಾಗೆ ಆಯ್ತು. ನನ್ನಲೇನೋ ಬದಲಾವಣೆ. ನಾನು ನಾನಾಗಿರಲಿಲ್ಲ. ನನ್ನ ಈ ಉದ್ವೇಗಕ್ಕೆ ಲತಾ ಜೀ, ರಫೀ ಜೀ ಧ್ವನಿ ಸಾಥ್ ನೀಡುತ್ತಿತ್ತು. ಅದು ಸೂರ್ಯಾಸ್ತದ ಸಮಯವಾದ ಕಾರಣ ತಿಳಿ ಸಂಜೆ ಒಂದು ರೊಮ್ಯಾಂಟಿಕ್ ವಾತಾವರಣವನ್ನು ಸೃಷ್ಟಿಸಿತ್ತು. ಸೂರ್ಯನ ಬಣ್ಣಗಳ ಮಧ್ಯೆ ನನ್ನವನ ಬಿಂಬ ಕಣ್ಣನ್ನು ಕುಕ್ಕುವಂತಿತ್ತು. ಇಷ್ಟು ನೋಡುವಷ್ಟುರಲ್ಲಿ ಅವನಿಗೆ ದೃಷ್ಟಿಯಾಗುತ್ತೆ ಎಂಬಂತೆ ಗಾಳಿಯ ರಭಸಕ್ಕೆ ಎದ್ದು ಬಂದ ಮರಳ ಕಣಗಳು ಕಣ್ಣಿಗೆ ಹೊಡೆದಿತ್ತು. ಬಾಯಿ ತೆರೆದು, ಅಗಲ ಕಣ್ಣಿಂದ ಅವನನ್ನು ನೋಡುತ್ತಿದ್ದ ನಾನು ಮೆಲ್ಲನೆ ತಿರುಗಿದೆ. ಆಗ ಅವನ ಕೈ ಮೇಲೆಳಿ ನನ್ನನ್ನು ಕರೆದಂತಾಯ್ತು. ಎದೆ ಚಲ್ ಅಂತು. ಕಣ್ಮುಚ್ಚಿ ತಲೆ ಬಗ್ಗಿಸಿ ನನಗಿಷ್ಟವಾದ ದೇವರಪಟ್ಟಿಯನ್ನೇ ಇಳಿಸಿದೆ.

ಇದನ್ನೂ ಓದಿ: Happy Valentine’s Day 2023: ನೀವು ಪ್ರೀತಿಸಿದ ಹುಡುಗಿಯ ಜತೆ ಯಾವೆಲ್ಲ ರೊಮ್ಯಾಂಟಿಕ್ ವಿಚಾರ ಹಂಚಿಕೊಳ್ಳಬಹುದು? ಇಲ್ಲಿದೆ ಟಿಪ್ಸ್

ಆಗ ನನ್ನ ಹೆಗಲೆ ಮೇಲೆ ಯಾರೋ ಕೈ ಇಟ್ಟಂತಾಯ್ತು. ಒಂದು ಕ್ಷಣ ಬಿಚ್ಚಿಬಿದ್ದು ಕಣ್ತೆರೆದು ನೋಡಿದಾಗ ನನ್ನ ಸ್ನೇಹಿತರು ನನ್ನ ಕಣ್ಣಮುಂದಿದ್ದರು. ಅವನು ನನ್ನ ಮಾತನಾಡಿಸಲು ಪ್ರಯತ್ನಿಸಿ ಸುಮ್ಮನಾಗಿದ್ದ… ಅದೇ ಅವನ-ನನ್ನ ಕೊನೆಯ ಕಣ್ ನೋಟ. ಇದು ಪ್ರೀತಿನಾ? ಆಕರ್ಷಣೆಯಾ? ಎಂಬ ಗೊಂದಲದಲ್ಲೇ ಈ ಸುಂದರ ಕ್ಷಣಗಳನ್ನು ಆಗಾಗ ನೆನಪಿಸಿಕೊಳ್ಳತಿರುತ್ತೇನೆ.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!