Happy Valentine’s Day 2023: ನೀವು ಪ್ರೀತಿಸಿದ ಹುಡುಗಿಯ ಜತೆ ಯಾವೆಲ್ಲ ರೊಮ್ಯಾಂಟಿಕ್ ವಿಚಾರ ಹಂಚಿಕೊಳ್ಳಬಹುದು? ಇಲ್ಲಿದೆ ಟಿಪ್ಸ್

ಕೆಲವು ಹುಡುಗರಿಗೆ ತಾನು ಪ್ರೀತಿಸುತ್ತಿರುವ ಹುಡುಗಿಗೆ ಯಾವ ರೀತಿಯಾಗಿ ಪ್ರಪೋಸ್ ಮಾಡಬೇಕೆಂಬುವುದು ತಿಳಿದಿರುವುದಿಲ್ಲ. ಪ್ರೀತಿಯನ್ನು ಹೇಗೆ ವ್ಯಕ್ತಪಡಿಸಬೇಕೆಂಬ ಗೊಂದಲದಲ್ಲಿರುತ್ತಾರೆ. ಅಂತಹ ಹುಡುಗರಿಗಾಗಿ ಪ್ರೀತಿಯನ್ನು ಪ್ರಸ್ತಾಪಿಸುವ ಕೆಲವೊಂದು ಟಿಪ್ಸ್​​ಗಳು ಇಲ್ಲಿವೆ.

Happy Valentine's Day 2023: ನೀವು ಪ್ರೀತಿಸಿದ ಹುಡುಗಿಯ ಜತೆ ಯಾವೆಲ್ಲ ರೊಮ್ಯಾಂಟಿಕ್ ವಿಚಾರ ಹಂಚಿಕೊಳ್ಳಬಹುದು? ಇಲ್ಲಿದೆ ಟಿಪ್ಸ್
ಸಾಮದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Feb 13, 2023 | 5:10 PM

ಕೆಲವು ಹುಡುಗರಿಗೆ ತಾನು ಪ್ರೀತಿಸುತ್ತಿರುವ ಹುಡುಗಿಗೆ ಯಾವ ರೀತಿಯಾಗಿ ಪ್ರಪೋಸ್ ಮಾಡಬೇಕೆಂಬುವುದು ತಿಳಿದಿರುವುದಿಲ್ಲ. ಪ್ರೀತಿಯನ್ನು ಹೇಗೆ ವ್ಯಕ್ತಪಡಿಸಬೇಕೆಂಬ ಗೊಂದಲದಲ್ಲಿರುತ್ತಾರೆ. ಅಂತಹ ಹುಡುಗರಿಗಾಗಿ ಪ್ರೀತಿಯನ್ನು ಪ್ರಸ್ತಾಪಿಸುವ ಕೆಲವೊಂದು ಟಿಪ್ಸ್​​ಗಳು ಇಲ್ಲಿವೆ. ಯಾರಿಗಾದರೂ ಪ್ರೀತಿಯನ್ನು ಪ್ರಸ್ತಾಪಿಸುವುದು ಅಥವಾ ಮದುವೆಯಾಗುವಂತೆ ಕೇಳುವುದು ಎಂದಿಗೂ ಸರಳವಾದ ವಿಚಾರವಲ್ಲ. ಅದು ಪ್ರೀತಿಯನ್ನು ವ್ಯಕ್ತಪಡಿಸುವ ವ್ಯಕ್ತಿಯ ಮನಸ್ಸಿನಲ್ಲಿ ಭಯ ಮತ್ತು ಅಸ್ಥಿರತೆಯ ಭಾವನೆಯನ್ನು ಉಂಟುಮಾಡುತ್ತದೆ. ಅದರಲ್ಲೂ ಕೂಡಾ ಸದಾ ಕಾಲ ಇದು ನೆನಪಿಟ್ಟುಕೊಳ್ಳುವಂತೆ ತನ್ನ ಪ್ರೇಯಸಿಗೆ ವಿಶೇಷವಾಗಿ ಪ್ರೀತಿಯನ್ನು ವ್ಯಕ್ತಪಡಿಸಬೇಕು ಎಂಬುದು ಸ್ವಲ್ಪ ಕಷ್ಟಕರವಾಗಿರುತ್ತದೆ. ಅದಕ್ಕಾಗಿ ಕ್ರಿಯಾತ್ಮಕವಾಗಿ ಯೋಚಿಸುವುದು ಹಾಗೂ ಆತ್ಮವಿಶ್ವಾಸ ಮುಖ್ಯವಾಗಿರುತ್ತದೆ. ಇದು ಮಾತ್ರವಲ್ಲದೆ ಅದೇ ಪ್ರೀತಿಯ ಜೊತೆ ಜೀವನಪೂರ್ತಿ ಇರುವುದು ಕೂಡಾ ಮುಖ್ಯವಾಗಿರುತ್ತದೆ.

ಆದ್ದರಿಂದ ಈ ಬಾರಿಯ ಪ್ರೇಮಿಗಳ ದಿನದಂದು ನಿಮ್ಮ ಆತ್ಮವಿಶ್ವಾಸವನ್ನು ಒಟ್ಟುಗೂಡಿಸಿ ನೀವು ಪ್ರೀತಿಸುವ ಹುಡುಗಿಯನ್ನು ಶಾಶ್ವತವಾಗಿ ನಿಮ್ಮವಳನ್ನಾಗಿ ಮಾಡಿಕೊಳ್ಳಲು, ರಿಲೇಷನ್‌ಶಿಪ್ ಎಕ್ಸ್ಪರ್ಟ್ ಹಾಗೂ ಐಎಸ್‌ಎಸ್‌ಎಆರ್‌ನ ಸಂಸ್ಥಾಪಕ ಹಿತೇಶ್ ಚಕ್ರವರ್ತಿ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಪ್ರೀತಿಯನ್ನು ತುಂಬಾ ವಿಶೇಷವಾದ ರೀತಿಯಲ್ಲಿ ವ್ಯಕ್ತಪಡಿಸಿ. ನಿಮ್ಮ ಹುಡುಗಿಯ ಪ್ರೀತಿಯು ಈ ಪ್ರಕೃತಿಯ ಅಮೂಲ್ಯ ಉಡುಗೊರೆಯಾಗಿದೆ. ಹಾಗಾಗಿ ಅವಳನ್ನು ಯಾವಾಗಲೂ ಖುಷಿಯಾಗಿರುವಂತೆ ನೋಡಿಕೊಳ್ಳಿ. ಅವಳು ನಿಮ್ಮ ಜೀವನದಲ್ಲಿ ಎಷ್ಟು ಮುಖ್ಯವಾಗಿದ್ದಾಳೆ ಎಂದು ಭಾವಿಸುವಂತೆ ಮಾಡಿ. ಆಕೆ ಎಲ್ಲಾರೀತಿಯಲ್ಲೂ ಸುಂದರವಾಗಿದ್ದಾಳೆ ಎಂದು ಹೇಳಿ. ಹೀಗೆ ಹೇಳುವಾಗ ಆಕೆಯ ಹಣೆಗೆ ಮುತ್ತು ನೀಡಿ. ಇದು ನಿಮ್ಮ ಪ್ರೇಯಸಿಯ ಮನಸ್ಸಿನಲ್ಲಿ ವಿಶೇಷ ಭಾವನೆಯನ್ನು ಮೂಡಿಸುತ್ತದೆ.

ನೀವು ನಿಮ್ಮ ಹುಡುಗಿಗೆ ಹೂವುಗಳು ಮತ್ತು ಚಾಕೊಲೇಟ್‌ಗಳನ್ನು ನೀಡಬೇಕು. ಹಾಗೂ ಹೂಗುಚ್ಛವನ್ನು ನೀಡುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸಬೇಕು. ಪ್ರೀತಿಯಲ್ಲಿ ಇರುವವರು ನಿಮ್ಮ ಹುಡುಗಿಯನ್ನು ಭೇಟಿ ಮಾಡುವ ಸಂದರ್ಭದಲ್ಲಿ ಹೂವು ಅಥವಾ ಚಾಕೋಲೇಟ್‌ಗಳನ್ನು ನೀಡುವ ಮೂಲಕ ಆಕೆಯನ್ನು ಸಂತೋಷಪಡಿಸಬಹುದು.

ಅಪ್ಪುಗೆಯು ನೀವು ಪ್ರೀತಿಸುವ ಹುಡುಗಿಗೆ ಮಾಡಬಹುದಾದ ಅತ್ಯಂತ ರೊಮ್ಯಾಂಟಿಕ್ ಸಂಗತಿಯಾಗಿದೆ. ನಿಮ್ಮ ಹುಡುಗಿ ದುಃಖದಲ್ಲಿದ್ದಾಗ ಅಥವಾ ಸಂತೋಷದಲ್ಲಿದ್ದಾಗ, ಒತ್ತಡದಲ್ಲಿದ್ದಾಗ ಆಕೆಯನ್ನು ತಬ್ಬಿಕೊಳ್ಳಿ. ಇದು ನಿಮ್ಮ ಸಂಬಂಧದ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.

ನೀವು ನಿಜವಾಗಿಯೂ ಆಕೆಯನ್ನು ಶುದ್ಧ ಮನಸ್ಸಿನಿಂದ ಪ್ರೀತಿಸುತ್ತಿದ್ದರೆ, ಆಕೆಯ ಮುಟ್ಟಿನ ಸಮಯದಲ್ಲಿ ಕಾಳಜಿವಹಿಸಿ. ಇದು ಪ್ರತಿಯೊಬ್ಬ ಹುಡುಗಿಯ ಜೀವನದಲ್ಲಿ ಅತ್ಯಂತ ನೋವಿನ ಸಮಯ. ಇಂತಹ ಸಮಯದಲ್ಲಿ ಹುಡುಗಿಗೆ ನಿಮ್ಮ ಆರೈಕೆ ತುಂಬಾ ಮುಖ್ಯವಾಗಿರುತ್ತದೆ. ಆಕೆಯನ್ನು ವಿಶ್ರಾಂತಿ ಪಡೆಯಲು ಅನುಮತಿಸಿ, ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಒಳ್ಳೆಯ ಮಾತುಗಳನ್ನು ಹೇಳಿ, ಮುಟ್ಟಿನ ಸಮಯದಲ್ಲಿ ಡಾರ್ಕ್ ಚಾಕೊಲೇಟ್‌ಗಳನ್ನು ನೀಡಿ ಹಾಗೂ ಮುಖ್ಯವಾಗಿ ನಿಮ್ಮ ತೋಳುಗಳಲ್ಲಿ ಶಾಂತಿಯುತವಾಗಿ ಮಲಗಲು ಬಿಡಿ. ಟೂ ಫ್ಯಾಟ್ ಟೂ ಲೌಡ್ ಟೂ ಆಂಬಿಷಿಯಸ್ ಲೇಖಕಿ ದೇವಿನಾ ಕೌರ್ ಪ್ರೀತಿಸುವ ಹುಡುಗಿಗೆ ಪ್ರಸ್ತಾಪಿಸುವ ರೋಮ್ಯಾಂಟಿಕ್ ಐಡಿಯಾಗಳ ಬಗ್ಗೆ ಹೇಳಿದ್ದಾರೆ.

ನಿಮ್ಮ ಸಂಗಾತಿಯ ಬಗ್ಗೆ ತಿಳಿದುಕೊಳ್ಳಿ: ಸಂಬಂಧದಲ್ಲಿ ಒಬ್ಬರನ್ನೊಬ್ಬರು ತಿಳಿದುಕೊಳ್ಳುವುದು, ಅರ್ಥ ಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಅವರ ಇಷ್ಟ ಕಷ್ಟಗಳನ್ನು ಅರಿಯುವುದು, ನಿಮ್ಮ ಸಂಗಾತಿಯ ಬಗ್ಗೆ ನೀವು ಅರ್ಥ ಮಾಡಿಕೊಂಡ ನಂತರ, ನಿಮ್ಮ ಪ್ರೀತಿಯ ಹುಡುಗಿಗಾಗಿ ಪ್ರೀತಿ ಪ್ರಸ್ತಾಪವನ್ನು ಯೋಜಿಸಬೇಕು. ಮತ್ತು ಅವರಿಗಾಗಿ ಸಮಯವನ್ನು ಮೀಸಲಿಟ್ಟು ಜೊತೆಯಾಗಿ ಊಟ ಮಾಡುತ್ತಾ ಒಬ್ಬರನ್ನೊಬ್ಬರು ಇನ್ನಷ್ಟು ಅರ್ಥ ಮಾಡಿಕೊಳ್ಳಬಹುದು.

ಇದನ್ನೂ ಓದಿ:Valentine,s Day 2023: ನಿಮ್ಮಿಂದ ದೂರವಾಗಿರುವ ಪ್ರೀತಿಯನ್ನು ಮತ್ತೆ ಪಡೆಯಬೇಕೇ? ಇಲ್ಲಿದೆ ಬ್ಯೂಟಿಫುಲ್ ಟಿಪ್ಸ್

ಅಂಗೀಕಾರ: ನಿಮ್ಮ ಹುಡುಗಿಯನ್ನು ಆಕೆ ಇರುವಂತೆ ಅವಳನ್ನು ನೀವು ಸ್ವೀಕರಿಸುತ್ತೀರಿ ಎಂಬುದು ತಿಳಿಯುವುದು ತುಂಬಾ ಮುಖ್ಯವಾಗಿರುತ್ತದೆ. ಅವಳನ್ನು ತಿಳಿದುಕೊಳ್ಳಲು ಮತ್ತು ಆಕೆಯನ್ನು ಒಪ್ಪಿಕೊಳ್ಳಲು ನೀವು ಅವಳ ನೆಚ್ಚಿನ ಸ್ಥಳಕ್ಕೆ ಜೊತೆಯಾಗಿ ಹೋಗಿ ಗುಣಮಟ್ಟದ ಸಮಯವನ್ನು ಕಳೆಯಬಹುದು. ಅವಳ ಬಗ್ಗೆ ತಿಳಿದುಕೊಳ್ಳಬಹುದು. ಆಕೆಯನ್ನು ಸಂತೋಷ ಪಡಿಸುವ ಕೆಲಸವನ್ನು ಮಾಡಿ. ನೀವು ಅವಳ ಜೊತೆ ಹೋಗುವಾಗ ಒಂದು ಗುಲಾಬಿಯನ್ನು ತೆಗೆದುಕೊಂಡು ಹೋಗಿ.

ಅವಳಿಗೆ ವಿಶೇಷ ಭಾವನೆ ಮೂಡಿಸಿ: ಹುಡುಗಿಯರು ತಮ್ಮ ಸಂಗಾತಿಯಿಂದ ಹೆಚ್ಚು ಬಯಸುವ ಎರಡು ವಿಷಯಗಳೆಂದರೆ ಸಮಯ ಮತ್ತು ಗಮನ. ಹಾಗಾಗಿ ನಿಮ್ಮ ಹುಡುಗಿಗಾಗಿ ಸಮಯವನ್ನು ಮೀಸಲಿಡಿ. ಮತ್ತು ಹುಡುಗಿಯ ಜೊತೆಯಿರುವಾಗ ಮೊಬೈಲ್ ನೋಡುವ ಬದಲು ಪ್ರತಿ ಕ್ಷಣವನ್ನು ಆಕೆಯೊಂದಿಗೆ ಕಳೆಯಿರಿ.

Published On - 5:09 pm, Mon, 13 February 23

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ