ಪ್ರೇಮಿಗಳ ದಿನಕ್ಕೂ (ವ್ಯಾಲೆಂಟೈನ್ಸ್ ಡೆ) ಮದುವೆಯಾದ ದಂಪತಿಗೂ ಏನು ಸಂಬಂಧ? ಹೆಂಡತಿ ಹೆಂಡತಿಯೇ, ಪ್ರೇಯಸಿ ಪ್ರೇಯಿಸಿಯೇ! ಇವರಿಬ್ಬರ ಮಧ್ಯೆ ತಂದಿಕ್ಕುವ ಆ ವಿಷಯ ಈವಾಗ ಯಾಕೆ? ಎಂದು ಮೂಗುಮುರಿಯ ಬೇಡಿ. ಮತ್ತೊಂದು ರೀತಿ ಹೇಳುವುದಾದರೆ ಪ್ರೇಮಿಗಳು ಯಾವುದೇ ಕಾರಣಕ್ಕೂ ತಮ್ಮ ಮನದನ್ನೆಯೆ ಹುಟ್ಟುಹಬ್ಬದ ದಿನಾಂಕವನ್ನು ಮರೆಯುವುದೇ ಇಲ್ಲ. ಏಕೆಂದರೆ ಅದನ್ನೇ ನೆಪವಾಗಿಟ್ಟುಕೊಂಡು ಪ್ರೇಮಿಗಳು ಮತ್ತಷ್ಟು ಆಪ್ತವಾಗುವ ಅವಕಾಶ ಅದಾಗಿರುತ್ತದೆ. ಇಲ್ಲಿ ಹೇಳಹೊರಟಿರುವುದು ಮದುವೆಯಾದ ಗಂಡ, ತನ್ನ ಹೆಂಡತಿಯ ಹುಟ್ಟುಹಬ್ಬ ಮರೆತರೆ ಆತನಿಗೆ ಜೈಲು ಶಿಕ್ಷೆ ಗ್ಯಾರಂಟಿಯಾಗಿದೆ ಈ ದೇಶದಲ್ಲಿ. ಅದಕ್ಕೆ ಹೇಳಿದ್ದು ಪ್ರೇಮಿಗಳ ದಿನದ ಈ ಸಂದರ್ಭದಲ್ಲಿ ನಿಮ್ಮ ಭಾವಿ ಪತ್ನಿಯ ಕುರಿತು ಈ ವಿಷಯದಲ್ಲಿ ಎಚ್ಚರ ವಹಿಸಿ ಎಂದು!
ಆ ದೇಶದ ಪತಿ ತನ್ನ ಹೆಂಡತಿಯ ಹುಟ್ಟುಹಬ್ಬವನ್ನು ಮೊದಲ ಬಾರಿಗೆ ಮರೆತುಹೋದರೆ.. ಅವನನ್ನು ಎಚ್ಚರಿಸುತ್ತಾರೆ. ಎರಡನೇ ಬಾರಿಯೂ ಮರೆಯುವ ಘನಘೊರ ತಪ್ಪು ಮಾಡಿದರೆ ಮುಗಿಯಿತು. ಆ ಪತಿಗೆ ಜೈಲು ಶಿಕ್ಷೆ ಗ್ಯಾರಂಟಿ. ಈ ಕಾಯ್ದೆ ಯಾವ ದೇಶದಲ್ಲಿದೆ ಗೊತ್ತಾ?
ಪ್ರೇಮಿಗಳ ದಿನದ ಸಂದರ್ಭದಲ್ಲಿ ತಿಳಿವಳಿಕೆಯ ಮಾತು - ಕಾರ್ಯೇಷು ದಾಸೀ, ಕರಣೇಷು ಮಂತ್ರೀ, ರೂಪೇಚ ಲಕ್ಷ್ಮೀ, ಕ್ಷಮಯಾ ಧರಿತ್ರೀ, ಭೊಜ್ಯೇಷು ಮಾತಾ, ಶಯನೇಷು ರಂಭಾ, ಷಟ್ಕರ್ಮ ಯುಕ್ತಾ ಕುಲ ಧರ್ಮಪತ್ನೀ - ಎಂಬ ಮಾತುಗಳನ್ನು ಎಚ್ಚರಿಕೆಯಿಂದಲೇ ಮನದಟ್ಟು ಮಾಡಿಕೊಳ್ಳುವುದು ಪತಿಯ ಕ್ಷೇಮಕ್ಕಾಗಿ ಒಳಿತು. ಧರ್ಮಪತ್ನಿಯು ಈ ಆರು ಕೆಲಸಗಳೊಂದಿಗೆ - ಮನೆಗೆಲಸದಲ್ಲಿ ದಾಸಿಯಂತೆ, ಒಳ್ಳೆಯ ಆಲೋಚನೆಗಳನ್ನು ನೀಡುವಾಗ ಮಂತ್ರಿಯಂತೆ, ಅಲಂಕಾರ ಮಾಡುವಾಗ ಲಕ್ಷ್ಮಿಯಂತೆ, ಊಟವನ್ನು ತಯಾರಿಸುವಾಗ ತಾಯಿಯಂತೆ, ಮಲಗುವ ಕೋಣೆಯಲ್ಲಿ ರಂಭೆಯಂತೆ ಎಂಬುದು ಈ ಶ್ಲೋಕದ ಅರ್ಥ.
ಇಲ್ಲಿ ಷಟ್ಕರ್ಮದ ಬದಲು ಷಡ್ಧರ್ಮ ಹೇಳುವ ಪಠ್ಯದ ವ್ಯತ್ಯಾಸವೂ ಇದೆ. ಆದರೆ ಸದಾ ಪತಿಗಾಗಿ ದುಡಿಯುವ ಪತ್ನಿಗೆ ಆತ ನೀಡುವ ಸಣ್ಣ ಕರುಣೆಯ ಮಾತು ದೊಡ್ಡ ಹೊಗಳಿಕೆಗೆ ಸಮ. ಪರಿಸ್ಥಿತಿ ಹೀಗಿರುವಾಗ ಪತಿ ಮಹಾಶಯ ತನ್ನ ಪತ್ನಿಯ ಹುಟ್ಟುಹಬ್ಬವನ್ನು ಮರೆತುಬಿಟ್ಟರೆ ಹೇಗೆ? ಮನೆ ರಣರಂಗವಾಗುವುದು ಸಹಜ. ಆದರೆ ನಮ್ಮ ದೇಶದಲ್ಲಿ ಎಲ್ಲರ ಮನೆಯ ದೋಸೆಯೂ ತೂತು ಎಂಬಂತೆ ಮನೆ ಮನೆಯಲ್ಲೂ ಇಂತಹ ಘಟನೆಗಳನ್ನು ಸಾಮಾನ್ಯವೇ ಇರುತ್ತದೆ.
ಇನ್ನು ಆದಿದ್ದು ಆಯಿತು... ಮರೆತು ಕ್ಷಮಿಸಿ ಎಂದು ಹೇಳಿ ತಿದ್ದಿಕೊಳ್ಳಲು ಯತ್ನಿಸುವ ಅನೇಕ ಗಂಡಂದಿರನ್ನು ಕೂಡ ನಾವು ನೋಡುತ್ತೇವೆ. ಆಗ ಹೆಂಡತಿ ಆತನನ್ನು ಅಷ್ಟೇ ಸಹಜವಾಗಿ ಕ್ಷಮಿಸಿಬಿಡುತ್ತಾಳೆ. ಆದರೆ ಎಲ್ಲ ಕಡೆಯೂ, ಎಲ್ಲ ಪ್ರಕರಣಗಳಲ್ಲೂ ಹೀಗೇ ಇರಬೇಕೆಂದೇನೂ ಇಲ್ಲವಲ್ಲ. ಇದರಿಂದ ಗಂಡಂದಿರೂ ಹಲವೆಡೆ ಭಾರಿ ಬೆಲೆ ತೆರಬೇಕಾಗುತ್ತದೆ. ಅದಕ್ಕೆ ತಗಲುವ ‘ವೆಚ್ಚವೂ’ ಅಷ್ಟೇ ಇರುತ್ತದೆ. ಅವಾಗ ಗಂಡ ಮತ್ತೆ ಈ ತಪ್ಪು ಮಾಡುವುದಿಲ್ಲ ಎಂಬುದು ದೃಢ ನಂಬಿಕೆ. ಹಾಗಂತ, ನಾವು ಹೇಳುತ್ತಿರುವ ಆ ಸ್ಥಳ ನಮ್ಮ ದೇಶದಲ್ಲಿಲ್ಲ. ಹೆಂಡತಿಯ ಹುಟ್ಟುಹಬ್ಬವನ್ನು ಮರೆಯುವುದೇ ಅಲ್ಲಿ ದೊಡ್ಡ ಅಪರಾಧ. ಕಾನೂನಿನ ಪ್ರಕಾರ, ಈ ಅಪರಾಧಕ್ಕಾಗಿ ಪತಿಗೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು.
ಮೊದಲ ಬಾರಿಗೆ ಹೆಂಡತಿಯ ಬರ್ತ್ಡೆ ಮರೆಯುವ ತಪ್ಪಿಗೆ ಎಚ್ಚರಿಕೆಯ ಸಂದೇಶ ರವಾನೆಯಾಗುತ್ತದೆ.. ಮುಂದಿನದು ಘೋರ ಶಿಕ್ಷೆಯಾದೀತು. ಹೌದು ಇಂತಹ ‘ಕಠಿಣ’ ಕಾನೂನು ಜಾರಿಯಲ್ಲಿ ಇರುವುದು ಸೌಂದರ್ಯಕ್ಕೆ ಹೆಸರಾದ ಸಮೋವಾ ದೇಶದಲ್ಲಿ (samoa country)!
ಅಷ್ಟೇ ಅಲ್ಲ. ಪುಟ್ಟ ಸಮೋವಾ ದೇಶದಲ್ಲಿ ಈ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಸಮೋವಾ ದೇಶದಲ್ಲಿ ಪತಿ ತನ್ನ ಹೆಂಡತಿಯ ಹುಟ್ಟುಹಬ್ಬವನ್ನು ಎರಡನೆಯ ಬಾರಿಗೆ ಮರೆತರೆ... ಅಂದರೆ ಎರಡನೇ ಬಾರಿ ಅಪರಾಧ ಮಾಡಿದರೆ, ಪತಿಗೆ ದಂಡ ಅಥವಾ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಈ ಅಪರಾಧಕ್ಕಾಗಿ 5 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸುವ ಅವಕಾಶ ಅಲ್ಲಿನ ಕಾನೂನಿನಲ್ಲಿದೆ
ಕಾನೂನು ಜಾರಿಗಾಗಿ ಒಂದು ತಂಡವೂ ಇದೆ: ಪ್ರತಿ ಮನೆಯಲ್ಲೂ ಈ ಕಾನೂನನ್ನು ಪಾಲಿಸಬೇಕು. ಈ ಕಾನೂನನ್ನು ಜಾರಿಗೊಳಿಸಲು ಅಂದಾಜು 2-3 ಲಕ್ಷ ಜನಸಂಖ್ಯೆ ಹೊಂದಿರುವ ಸಮೋವಾ ದೇಶದಲ್ಲಿ ವಿಶೇಷ ತಂಡವೇ ಕಾರ್ಯನಿರ್ವಹಿಸುತ್ತದೆ. ಇದಕ್ಕಾಗಿ ಉನ್ನತ ಪೊಲೀಸ್ ಅಧಿಕಾರಿ ಮಟ್ಟದ ವಿಶೇಷ ತಂಡ ಕಾರ್ಯನಿರ್ವಹಿಸುತ್ತದೆ. ಪತ್ನಿಯ ಹುಟ್ಟುಹಬ್ಬಕ್ಕೆ ಶುಭ ಕೋರದ ದೂರು ಬಂದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು.
ಸಂತ್ರಸ್ತ ಪತ್ನಿಯರಿಗಾಗಿ ಜಾಗೃತಿ ಶಿಬಿರಗಳೂ ನಡೆಯುತ್ತವೆ: ಇನ್ನೂ ಕುತೂಹಲಕಾರಿ ಸಂಗತಿಯೆಂದರೆ ನಡುನಡುವೆ ಜಾಗೃತಿ ಶಿಬಿರಗಳನ್ನು ನಡೆಸಿ ಪತ್ನಿಯರಿಗೂ ಈ ಕಾನೂನಿನ ಬಗ್ಗೆ ತಿಳಿಸಲಾಗುತ್ತದೆ ಸಮೋವಾ ದೇಶದಲ್ಲಿ!
ಈ ದೇಶದಲ್ಲಿ ಜಾಗಿಂಗ್ ಕಾನೂನುಬಾಹಿರವಾಗಿದೆ: ಪೂರ್ವ ಆಫ್ರಿಕಾದಲ್ಲಿ ಇನ್ನೂ ಒಂದು ಕಾನೂನು ಇದೆ. ಎಲ್ಲರಿಗೂ ಅನ್ವಯವಾಗುವ, ಎಲ್ಲರ ಗಮನ ಸೆಳೆಯುವ ಮತ್ತೊಂದು ವಿಚಿತ್ರ ಕಾನೂನು ಇಲ್ಲಿ ಜಾರಿಯಲ್ಲಿದೆ. ಇಲ್ಲಿ ಜಾಗಿಂಗ್ ಮಾಡಲು ಜನರಿಗೆ ಅವಕಾಶವಿಲ್ಲ!
Published On - 12:33 pm, Mon, 13 February 23