Valentine’s Day 2023: ಅವಳ ಜೊತೆಗೆ ಕಳೆದ ಆ ದಿನಗಳು ಶ್ವಾಶತ, ನನ್ನವಳು ಮಾಡಿದ ಸಹಾಯ ಯಾವತ್ತೂ ಮರೆಯಲು ಸಾಧ್ಯವಿಲ್ಲ
ದುಃಖಕ್ಕೆ ಪ್ರೀತಿಯನ್ನು ತುಂಬಿದ ದೇವತೆ ನೀನು, ಆ ಸಮಯದಲ್ಲಿ ಒಂದು ಬಾರಿ ನೀನು ಅಮ್ಮನಂತೆ ಕಂಡೆ, ನಿನ್ನ ಮುಖದಲ್ಲಿ ನನ್ನ ಅಮ್ಮನ್ನು ಕಾಣುತ್ತಿರುವೆ.
ಪ್ರೀಯ ಗೆಳತಿ ‘ಪುಚ್ಚಿ’ ನಿನ್ನ ನೆನಪುಗಳ ಜೊತೆಯಲ್ಲೆ ನಾನು ಬದುಕುತ್ತಿರುವೆ. ನಿನ್ನ ಜೊತೆ ಕಳೆದ ದಿನಗಳ ಮೆಲುಕು ಹಾಕುತ್ತ ಈ ದಿನಗಳ ಕಳೆಯುತ್ತಿರುವೇ. ನಿನ್ನ ಮೊದಲ ಭಾರಿ ನೊಡಿದಾಗ ಮೊದಲು ಕೇಳಿದ ಮಾತು ನೆನಪಿದೆಯಾ ನಿಮ್ಮದ್ದು ಯಾವ ಊರು ಎಂದು. ನಿನ್ನಲ್ಲಿ ಭಯವಿದ್ದರು ನೀನು ತಡವರಿಸಿ ಯಾದಗಿರಿ ಎಂದೇ. ಅಲ್ಲಿಂದ ನಮ್ಮಿಬ್ಬರ ಸ್ನೇಹ ಶುರುವಾಗಿತ್ತು. ಅಂದು ನಾನು ಶಾಲೆ ಬಿಟ್ಟ ಮೇಲೆ ಹಾಸ್ಟೇಲ್ ಹೊಗದೆ ಒಬ್ಬನೇ ಡೆಸ್ಕ್ ಮೇಲೆ ಮಲಗಿರುವುದನ್ನು ನೋಡಿ, ಸನಿಹ ಬಂದು ಮಾತನಾಡಿಸಿ, ಮನೆಯ ನೆನಪಾಗುತ್ತಿದ್ದೀಯಾ ಎಂದು ಕೇಳಿದೆ. ನೀನು ನನ್ನ ಅಲ್ಲಿಂದ ಕರೆದುಕೊಂಡು ಹೋದೆ. ಅಂದು ನನ್ನ ದುಃಖಕ್ಕೆ ಪ್ರೀತಿಯನ್ನು ತುಂಬಿದ ದೇವತೆ ನೀನು, ಆ ಸಮಯದಲ್ಲಿ ಒಂದು ಬಾರಿ ನೀನು ಅಮ್ಮನಂತೆ ಕಂಡೆ, ನಿನ್ನ ಮುಖದಲ್ಲಿ ನನ್ನ ಅಮ್ಮನ್ನು ಕಾಣುತ್ತಿರುವೆ.
ಪುಚ್ಚಿ ನಿನಗೆ ಈ ವಿಚಾರ ನೆನಪಿರಬಹುದು, ಆ ಸಂಜೆ ಶಾಲೆ ಬಿಟ್ಟು ನಿಮ್ಮೂರಿಗೆ ಹೊಗಲು ಬಸ್ಸಿಲ್ಲದ ಕಾರಣ ನಾನೆ ನಿನ್ನ ಜೊತೆ ಬಂದು ನಿಮ್ಮ ಊರಿ ಬಿಟ್ಟು ಕ್ಷಣ ನೆನಪಿದಿಯಾ. ಆವತ್ತು ಮಾತನಾಡುತ್ತ ನಿನಗೆ ನಾನು ಎಂದರೆ ಇಷ್ಟನಾ ಎಂದು ಕೇಳಿದೆ. ಆಗಾ ನೀನು ನಾನು ಹೇಳುವ ಮುನ್ನವೇ ನೀನು ನನಗೆ ಇಷ್ಟ ಎಂದು ನನ್ನ ಹೃದಯ ಲಕ್ಷ್ಮೀಯಾಗಿ ಬಂದೆ. ನಾನು ನಿನ್ನ ಗುಣದಲ್ಲಿ ಆ ಪ್ರೀತಿ ಕಂಡೆ, ಹೌದು ನನಗೆ ಮನೆಯಿಂದ ಸರಿಯಾಗಿ ಹಣವನ್ನು ನೀಡುತ್ತಿರಲ್ಲಿ ನನ್ನ ಬಟ್ಟೆ, ಎಲ್ಲ ಖರ್ಚುಗಳನ್ನು ನೀನು ನೋಡುತ್ತಿದ್ದ ಆ ದಿಗಳನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ.
ಇದನ್ನೂ ಓದಿ: ಜಾಗಿಂಗ್ನಲ್ಲಿ ಹುಟ್ಟಿದ ಪ್ರೀತಿ, ನನ್ನ ಪ್ರೀತಿಯ ಒಪ್ಪಿಗಾಗಿ ಕ್ಷಣ ಕ್ಷಣಕ್ಕೂ ಕಾಯುತ್ತಿದ್ದ ಅಣ್ಣ ಸ್ನೇಹಿತ
ನಾನು ಸಿದ್ಧಗಂಗಾ ಮಠದಲ್ಲಿ ಓದುತ್ತಿದ್ದೆ, ಅವಳು ಮನೆಯಿಂದ ಬರುತ್ತಿದ್ದಳು. ಈ ದಿನವನ್ನು ನಾನು ಯಾವತ್ತೂ ಮರೆಯುವುದಿಲ್ಲ ಪುಚ್ಚಿ, ಈ ತಿಂಗಳು ಬಂದರೆ ಗುಲಾಬಿ ಹಿಡಿದುಕೊಂಡು ನಿನಗಾಗಿ ಕಾಯುತ್ತಿದ್ದೆ, ನಿನಗೆ ಬರೆದ ಪ್ರೇಮ ಪತ್ರದಲ್ಲಿ ಬರೆದ ಸಾಲುಗಳೆಲ್ಲ ನನ್ನ ಮನದ ಮಾತುಗಳು. ಸಾಯುವಷ್ಟು ಇಷ್ಟ ಪಡುತ್ತಿದ್ದವಳು ಇವತ್ತು ನನ್ನೊಂದಿಗೆ ಇಲ್ಲ. ಅದು ಕೊಟ್ಟ ಮಾತು ಇವತ್ತು ನೆನಪಿಗೆ ಬರುತ್ತಿದೆ.
ಪ್ರೇಮ ಪತ್ರ: ಭೀಮಣ್ಣ ಹತ್ತಿಕುಣಿ