ರಮೇಶ್​ ಜಾರಕಿಹೊಳಿ ರಾಜೀನಾಮೆ ಕೊಟ್ಟರೂ ಸರ್ಕಾರ ಬೀಳಲ್ಲ

ರಮೇಶ್​ ಜಾರಕಿಹೊಳಿ ರಾಜೀನಾಮೆ ಕೊಟ್ಟರೂ ಸರ್ಕಾರ ಬೀಳಲ್ಲ

ಬೆಳಗಾವಿ ಶಾಸಕ ರಮೇಶ್​ ಜಾರಕಿಹೊಳಿ ಕಾಂಗ್ರೆಸ್​ ನಾಯಕರ ವಿರುದ್ಧ ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ. ಚುನಾವಣೆ ಸಂದರ್ಭದಲ್ಲೂ ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ ಎಂದು ಕಾಂಗ್ರೆಸ್​ ನಾಯಕರು ಆರೋಪಿಸಿದ್ದರು. ಅತ್ತ ಬಿಜೆಪಿಗೂ ಸೇರದೆ, ಇತ್ತ ಕಾಂಗ್ರೆಸ್​ಗೆ ರಾಜೀನಾಮೆಯನ್ನೂ ನೀಡದೆ ಪಕ್ಷದೊಳಗೇ ಇದ್ದುಕೊಂಡು ಪಕ್ಷದ ನಾಯಕರ ಅಸಮಾಧಾನವನ್ನು ಕಟ್ಟಿಕೊಂಡಿರುವ ರಮೇಶ್​ ಜಾರಕಿಹೊಳಿ ವಿರುದ್ಧ ಖುದ್ದು ಅವರ ತಮ್ಮ ಸತೀಶ್​ ಜಾರಕಿಹೊಳಿ ಕೂಡ ಅಸಮಾಧಾನ ಹೊರಹಾಕಿದ್ದರು.

ಇಂದು ಕಾಂಗ್ರೆಸ್​ ಪಕ್ಷದೊಳಗಿನ ಅಸಮಾಧಾನಕ್ಕೆ ತೇಪೆ ಹಚ್ಚುವ ಕೆಲಸ ಮಾಡಿರುವ ಸಚಿವ ಡಿ.ಕೆ. ಶಿವಕುಮಾರ್, ನಮ್ಮ ಪಕ್ಷದಲ್ಲಿ ಯಾವುದೇ ಸಮಸ್ಯೆಯಿಲ್ಲ. ನಾನು ರಮೇಶ್​ ಜಾರಕಿಹೊಳಿ ಅವರಿಗೆ ಸಮನಾದ ನಾಯಕನಲ್ಲ ಎಂಬುದು ನಿಜ. ಅವರು ಬೇಕಿದ್ದರೆ ನನಗೆ ಎರಡೇಟು ಹೊಡೆದರೂ ನನಗೆ ಬೇಸರವಿಲ್ಲ. ನಾವೆಲ್ಲರೂ ಅಣ್ಣ-ತಮ್ಮಂದಿರಂತೆ

Published On - 8:44 pm, Tue, 26 March 19