ಆರ್​​ಸಿಬಿ ಪ್ಲೇ ಆಫ್​ ಹಾದಿ ಈಗ ಮತ್ತಷ್ಟು ಸುಗಮ!

ಆರ್​​ಸಿಬಿ ಪ್ಲೇ ಆಫ್​ ಹಾದಿ ಈಗ ಮತ್ತಷ್ಟು ಸುಗಮ!

ಉಳಿದಿರುವ ಮೂರು ಪಂದ್ಯಗಳ ಪೈಕಿ ಆರ್​ಸಿಬಿ ತನ್ನ ಮೊದಲ ಪಂದ್ಯವನ್ನು ಏ. 28ಕ್ಕೆ ಫಿರೊಜ್ ಷಾ ಕೋಟ್ಲಾದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಆಡಲಿದೆ. ಡೆಲ್ಲಿ ವಿರಾಟ್ ಕೊಹ್ಲಿಯ ತವರೂರು. ತಾನು ಆಡಿ ಬೆಳೆದ ಪಿಚ್ ಬಗ್ಗೆ ಕೊಹ್ಲಿ ಚೆನ್ನಾಗಿಯೇ ಅರಿತುಕೊಂಡಿದ್ದಾರೆ. ಅಂಕಿಅಂಶಗಳನ್ನು ಗಮನಿಸಿದಾಗ ಆರ್​ಸಿಬಿಯೇ ಬಲಿಷ್ಠವಾಗಿದೆ. ಉಭಯ ತಂಡಗಳು ಈವರೆಗೆ 23 ಪಂದ್ಯಗಳಲ್ಲಿ ಮುಖಾಮುಖಿ ಆಗಿದೆ. ಇದರಲ್ಲಿ ಆರ್​ಸಿಬಿ 15 ಪಂದ್ಯ ಗೆದ್ದಿದ್ದರೆ, ಡೆಲ್ಲಿ ಕೇವಲ 7 ಪಂದ್ಯಗಳಲ್ಲಷ್ಟೆ ಜಯ ಸಾಧಿಸಿದೆ. ಅಲ್ಲದೆ ಡೆಲ್ಲಿಯ ಸ್ಟಾರ್ ಬೌಲರ್ ಕಗಿಸೊ ರಬಾಡ ಮುಂದಿನ ಪಂದ್ಯದಲ್ಲಿ ಆಡುವುದು ಅನುಮಾನ. ವಿಶ್ವಕಪ್ ದೃಷ್ಟಿಯಿಂದ ರಬಾಡ ತವರಿಗೆ ಮರಳುವ ಅಂದಾಜಿದೆ. ಆದರೆ, ಈ ಬಗ್ಗೆ ಇನ್ನು ಅಧಿಕೃತವಾಗಿ ತಿಳಿದುಬಂದಿಲ್ಲ.

Published On - 1:05 pm, Mon, 25 March 19

Click on your DTH Provider to Add TV9 Kannada