
2017 ರ ಅಕ್ಟೋಬರ್ 30 ಭೀಮಾ ತೀರದ ಹಂತಕ ಧರ್ಮರಾಜ ಚಡಚಣ ನನ್ನು ಅಂದಿನ ಚಡಚಣ ಪಿಎಸ್‌ಐ ಗೋಪಾಲ ಹಳ್ಳೂರ ನೇತೃತ್ವದ ತಂಡ ಎನಕೌಂಟರ್ ಮಾಡಿತ್ತು. ಅಲ್ಲದೇ, ಅದೇ ದಿನ ಆತನ ತಮ್ಮ ಗಂಗಾಧರ ಚಡಚಣನನ್ನು ಅಪಹರಿಸಿ ನಿಗೂಢವಾಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಗಂಗಾಧರ ಚಡಚಣ ಶವ ಈವರೆಗೂ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಧರ್ಮರಾಜ ಚಡಚಣ ತಾಯಿ ತಮ್ಮ ಮಗ ಗಂಗಾಧರ ಚಡಚಣನನ್ನು ಹುಡುಕಿ ಕೊಡುವಂತೆ ಕಲಬುರಗಿ ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಸಲ್ಲಿಸಿದ್ದರು.
Published On - 8:30 pm, Tue, 26 March 19