ದೇಖೋ ಅಪ್ನಾ ದೇಶ್ ಯೋಜನೆಯಲ್ಲಿ ದೇಶದ 50 ಪ್ರಮುಖ ಪ್ರವಾಸಿತಾಣಗಳ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
ಕೋವಿಡ್ ಸಮಯದಲ್ಲಿ ತೀವ್ರ ತೊಂದರೆ ಎದುರಿಸಿದ ನಂತರ ಪ್ರಯಾಣ ಮತ್ತು ಪ್ರವಾಸೋದ್ಯಮ ಉದ್ಯಮವು ಸ್ವಲ್ಪ ಚೇತರಿಕೆ ಕಂಡಿದೆ. ಪ್ರವಾಸೋದ್ಯಮ ಕ್ಷೇತ್ರವು ಆರ್ಥಿಕತೆಗೆ ಕೊಡುಗೆ ನೀಡುವ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ.
ಜೀವನೋಪಾಯಕ್ಕಾಗಿ ಹಲವಾರು ಜನರು ಪ್ರವಾಸೋದ್ಯಮವನ್ನು ಅವಲಂಬಿಸಿದ್ದಾರೆ. ಸಾಂಕ್ರಾಮಿಕ ರೋಗದಿಂದ ಇನ್ನೂ ತತ್ತರಿಸುತ್ತಿರುವ ಸವಾಲುಗಳು, ವಿಮಾನಗಳು ಮತ್ತು ಹೋಟೆಲ್‌ಗಳ ಮೇಲಿನ ಹೆಚ್ಚಿನ ಜಿಎಸ್‌ಟಿ ದರಗಳ ಸ್ವರೂಪ, ಉದ್ಯಮವು ಇತರ ದೇಶಗಳೊಂದಿಗೆ ಸ್ಪರ್ಧಿಸಲು ಮತ್ತು ಪ್ರವಾಸಿಗರನ್ನು ಆಕರ್ಷಿಸಲು ಕಷ್ಟಕರವಾಗಿದೆ. ಕಳೆದ ಬಜೆಟ್‌ನಲ್ಲಿ ಸರ್ಕಾರ ನೀಡಿದ ಸೀಮಿತ ಸಹಾಯದ ನಂತರ ಈ ಕ್ಷೇತ್ರವೂ ಚಿಂತೆಗೀಡಾಗಿದೆ.
Published On - 12:13 pm, Wed, 1 February 23