Expectations On PLI: ಹೆಚ್ಚು ಉದ್ಯೋಗ ಸೃಷ್ಟಿಸುವ ಉದ್ಯಮಗಳಿಗೆ ಬೇಕು ಪಿಎಲ್​ಐ ಬೆಂಬಲ; ಬಜೆಟ್​ನಲ್ಲಿ ಸ್ಕೀಮ್ ವಿಸ್ತರಣೆ ಆಗುತ್ತಾ?

|

Updated on: Jan 21, 2024 | 9:00 AM

Budget 2024: ಹೆಚ್ಚು ಉದ್ಯೋಗಾವಕಾಶ ಇರುವ ಗಾರ್ಮೆಂಟ್ಸ್, ಹ್ಯಾಂಡಿಕ್ರಾಫ್ಟ್, ಜ್ಯುವೆಲರಿ ಇತ್ಯಾದಿ ಸೆಕ್ಟರ್​ಗಳಿಗೆ ಪಿಎಲ್​ಐ ಸ್ಕೀಮ್ ವಿಸ್ತರಿಸಿ ಎಂದು ಡೆಲಾಯಿಟ್ ಸಲಹೆ ನೀಡಿದೆ. 2021ರಲ್ಲಿ ಆರಂಭವಾದ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್​ನಲ್ಲಿ 14 ಸೆಕ್ಟರ್​ಗಳನ್ನು ಒಳಗೊಳ್ಳಲಾಗಿದೆ. ಗ್ರಾಮೀಣ ಭಾಗದ ಆರ್ಥಿಕತೆಗೆ ಉತ್ತೇಜನ ಕೊಟ್ಟರೆ ಬಹಳ ಅನುಕೂಲವಾಗುತ್ತದೆ ಎಂದು ಡೆಲಾಯಿಟ್ ಹೇಳಿದೆ.

Expectations On PLI: ಹೆಚ್ಚು ಉದ್ಯೋಗ ಸೃಷ್ಟಿಸುವ ಉದ್ಯಮಗಳಿಗೆ ಬೇಕು ಪಿಎಲ್​ಐ ಬೆಂಬಲ; ಬಜೆಟ್​ನಲ್ಲಿ ಸ್ಕೀಮ್ ವಿಸ್ತರಣೆ ಆಗುತ್ತಾ?
ಉತ್ಪಾದನೆ
Follow us on

ನವದೆಹಲಿ, ಜನವರಿ 21: ದೇಶದಲ್ಲಿ ಉತ್ಪಾದನೆ ಹೆಚ್ಚಿಸಲು ಸರ್ಕಾರ ಪಿಎಲ್​ಐ ಸ್ಕೀಮ್ (PLI scheme) ತಂದಿದೆ. ಉತ್ಪಾದನೆ ಆಧಾರಿತ ಪ್ರೋತ್ಸಾಹ ಒದಗಿಸುವ ಸ್ಕೀಮ್ ಇದು. ಎರಡು ಮೂರು ವರ್ಷದ ಹಿಂದೆ ಶುರುವಾದ ಈ ಸ್ಕೀಮ್​ನಲ್ಲಿ 14 ವಲಯಗಳನ್ನು ಒಳಗೊಳ್ಳಲಾಗಿದೆ. ಆದರೆ, ಉದ್ಯೋಗ ಸೃಷ್ಟಿ ಸಾಧ್ಯತೆ (employment generation) ಹೆಚ್ಚು ಇರುವ ಇನ್ನೂ ಹಲವು ಕ್ಷೇತ್ರಗಳನ್ನು ಈ ಸ್ಕೀಮ್ ವ್ಯಾಪ್ತಿಗೆ ತರಬೇಕು ಎಂಬ ಧ್ವನಿ ದಟ್ಟವಾಗಿ ಕೇಳಿಬರುತ್ತಿದೆ. ವಿಶ್ವದ ಪ್ರಮುಖ ಆಡಿಟಿಂಗ್ ಕಂಪನಿ ಡಿಲಾಯಿಟ್ (Deloitte) ತನ್ನ ಬಜೆಟ್ ನಿರೀಕ್ಷೆಗಳ ವರದಿಯಲ್ಲಿ, ಗಾರ್ಮೆಂಟ್ಸ್, ಜ್ಯುವೆಲರಿ, ಕರಕುಶಲ ಇತ್ಯಾದಿ ವಲಯಗಳಲ್ಲಿ ಉದ್ಯೋಗಸೃಷ್ಟಿ ಹೆಚ್ಚು ಆಗುವುದರಿಂದ ಅವುಗಳನ್ನು ಪಿಎಲ್​ಐ ಸ್ಕೀಮ್ ವ್ಯಾಪ್ತಿಗೆ ತರಬಹುದು ಎಂದು ಸರ್ಕಾರಕ್ಕೆ ಸಲಹೆ ನೀಡಿದೆ. ಈ ಮಧ್ಯಂತರ ಬಜೆಟ್​ನಲ್ಲಿ ಇದನ್ನು ಜಾರಿಗೆ ತರುವಂತೆಯೂ ಕೇಳಿಕೊಂಡಿದೆ.

‘ಪಿಎಲ್​ಐ ಸ್ಕೀಮ್​ನ ಅಡಿಯಲ್ಲಿ ಇವತ್ತು 14 ಸೆಕ್ಟರ್​ಗಳಿವೆ. ಇವುಗಳಲ್ಲಿ ಹೆಚ್ಚಿನವು ತೀರಾ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುವುದಿಲ್ಲ. ಲೆದರ್, ಗಾರ್ಮೆಂಟ್, ಹ್ಯಾಂಡಿಕ್ರಾಫ್ಟ್, ಜ್ಯುವೆಲರಿ ಇತ್ಯಾದಿ ಕೆಲ ಸೆಕ್ಟರ್​ಗಳು ಅತಿಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸುತ್ತವೆ. ಇವುಗಳನ್ನು ಪಿಎಲ್​ಐ ಸ್ಕೀಮ್ ವ್ಯಾಪ್ತಿಗೆ ತರಬೇಕು. ಆಗ ಕೆಳ ಮಟ್ಟದ ಆದಾಯ ಇರುವ ಕುಟುಂಬಗಳಿಗೆ ಸಹಾಯವಾಗುತ್ತದೆ,’ ಎಂದು ಡೆಲಾಯಿಟ್ ಇಂಡಿಯಾ ಪಾರ್ಟ್ನರ್ ರಜತ್ ವಾಹಿ ಹೇಳಿದ್ದಾರೆ.

ಇದನ್ನೂ ಓದಿ: Budget 2024: ಇನ್ಕಮ್ ಟ್ಯಾಕ್ಸ್ ವಿಚಾರದಲ್ಲಿ ಬಜೆಟ್​ನಲ್ಲಿ ಏನು ಬದಲಾವಣೆ ನಿರೀಕ್ಷಿಸಬಹುದು?

ಹಣದುಬ್ಬರ ಏರಿಕೆಗೆ ಕಡಿವಾಣ ಹಾಕಲು ಮತ್ತು ಅನುಭೋಗ ಬೇಡಿಕೆಯನ್ನು ಉತ್ತೇಜಿಸಲು ಗ್ರಾಮೀಣ ಭಾಗದ ಆದಾಯ ಹೆಚ್ಚಿಸುವುದು ಒಂದು ದಾರಿ. ಗ್ರಾಮೀಣ ಭಾಗದ ಕುಟುಂಬಗಳ ಆದಾಯ ಹೆಚ್ಚಿಸುವಂತಹ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಬಹುದು. ಇದರಿಂದ ಗ್ರಾಮೀಣ ಭಾಗ ಆರ್ಥಿಕತೆಗೆ ಪುಷ್ಟಿ ಸಿಕ್ಕಂತಾಗುತ್ತದೆ ಎಂಬುದು ಡೆಲಾಯಿಟ್​ನ ವರದಿಯಲ್ಲಿ ಹೇಳಲಾಗಿದೆ.

‘ಗ್ರಾಮೀಣ ಭಾಗದಲ್ಲಿ ಸೌಕರ್ಯ ವ್ಯವಸ್ಥೆ ನಿರ್ಮಾಣಕ್ಕೆ ಹೆಚ್ಚು ವೆಚ್ಚ ಮಾಡುವುದು ಅಥವಾ ನಗದು ಹರಿವನ್ನು ಹೆಚ್ಚಿಸುವಂತೆ ಪ್ರೋತ್ಸಾಹಕಗಳನ್ನು ಒದಗಿಸುವುದು ಮುಂತಾದ ಕ್ರಮಗಳ ಆಯ್ಕೆಗಳಿವೆ. ಕೆಮಿಕಲ್ಸ್, ಸರ್ವಿಸಸ್ ಇತ್ಯಾದಿ ಸೆಕ್ಟರ್​​ಗಳಿಗೆ ಪಿಎಲ್​ಐ ಸ್ಕೀಮ್​ನ ವ್ಯಾಪ್ತಿ ಹೆಚ್ಚಿಸಿದರೆ ಉತ್ಪಾದನೆಗೆ ಇನ್ನಷ್ಟು ಬೇಡಿಕೆ ಹೆಚ್ಚುತ್ತದೆ,’ ಎಂದು ಡೆಲಾಯಿಟ್ ಹೇಳಿದೆ.

ಇದನ್ನೂ ಓದಿ: ಪಿಎಂ ಕಿಸಾನ್ ಫಲಾನುಭವಿಗಳು, ಕಟ್ಟಡ ಕಾರ್ಮಿಕರಿಗೆ 10 ಲಕ್ಷ ರೂವರೆಗೆ ವಿಮಾ ಕವರೇಜ್?

2021ರಲ್ಲಿ ಶುರುವಾದ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್ ಸಾಕಷ್ಟು ಪರಿಣಾಮಕಾರಿಯಾಗಿದೆ. ಇದೂವರೆಗೂ ಒಂದು ಲಕ್ಷ ಕೋಟಿ ರೂಗೂ ಹೆಚ್ಚು ಹೂಡಿಕೆಗಳಾಗಿವೆ. ಅದರ ಪರಿಣಾಮವಾಗಿ 8.61 ಲಕ್ಷ ಕೋಟಿ ರೂ ಮೌಲ್ಯದಷ್ಟು ಉತ್ಪಾದನೆ ಅಥವಾ ಮಾರಾಟ ಆಗಿದೆ. 6.78 ಲಕ್ಷ ಉದ್ಯೋಗ ಸೃಷ್ಟಿಯಾಗಿರುವುದು ತಿಳಿದುಬಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ