News Alert: ಶುಭ ಸುದ್ದಿ; ಪಿಎಂ ಕಿಸಾನ್ ಫಲಾನುಭವಿಗಳು, ಕಟ್ಟಡ ಕಾರ್ಮಿಕರಿಗೆ 10 ಲಕ್ಷ ರೂವರೆಗೆ ವಿಮಾ ಕವರೇಜ್?
PM Kisan Beneficiaries Insurance Coverage: ಆಯುಷ್ಮಾನ್ ಭಾರತ್ ಪಿಎಂ ಜನ್ ಆರೋಗ್ಯ ಯೋಜನೆಯ ಅಡಿಯ ಇನ್ಷೂರೆನ್ಸ್ ಸ್ಕೀಮ್ನಲ್ಲಿ ಫಲಾನುಭವಿಗಳ ಸಂಖ್ಯೆಯನ್ನು 100 ಕೋಟಿಗೆ ಹೆಚ್ಚಿಸುವ ಗುರಿ ಇದೆ. ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು, ಆಶಾ ಕಾರ್ಯಕರ್ತೆಯರು, ಕಟ್ಟಡ ಕಾರ್ಮಿಕರು ಮೊದಲಾದವರನ್ನೂ ವಿಮಾ ವ್ಯಾಪ್ತಿಗೆ ತರಬಹುದು. ಪಿಎಂ ಕಿಸಾನ್ ಯೋಜನಯಲ್ಲಿ ನೀಡಲಾಗುವ ಧನಸಹಾಯದ ಪ್ರಮಾಣವನ್ನು 6,000 ರೂನಿಂದ 8,000 ರೂಗೆ ಹೆಚ್ಚಿಸಬಹುದು.
ನವದೆಹಲಿ, ಜನವರಿ 17: ಮಧ್ಯಂತರ ಬಜೆಟ್ಗೆ ಎರಡು ವಾರ ಬಾಕಿ ಇರುವಂತೆಯೇ ಸಾಧ್ಯಾಸಾಧ್ಯತೆಗಳ ಬಗ್ಗೆ ವಿವಿಧ ವರದಿಗಳು ಬರುತ್ತಿವೆ. ಇದರಲ್ಲಿ ಪಿಎಂ ಜನ್ ಆರೋಗ್ಯ ಯೋಜನೆಯ ವಿಮಾ ಕವರೇಜ್ ಮಿತಿಯನ್ನು (Ayushman Bharat PM Jan Aarogya Yojana) ದ್ವಿಗುಣಗೊಳಿಸಲಿರುವ ಸುದ್ದಿಯೂ ಇದೆ. ಆಯುಷ್ಮಾನ್ ಭಾರತ್ ಹೆಲ್ತ್ ಸ್ಕೀಮ್ನ ವಿಮಾ ಕವರೇಜ್ ಅನ್ನು ವರ್ಷವೊಂದಕ್ಕೆ ಈಗ ಇರುವ 5 ಲಕ್ಷ ರೂ ಮಿತಿಯನ್ನು 10 ಲಕ್ಷ ರೂಗೆ ಏರಿಸುವ ಪ್ರಸ್ತಾಪವೊಂದನ್ನು ಸರ್ಕಾರ ಪರಿಗಣಿಸುತ್ತಿದೆ. ಫೆಬ್ರುವರಿ 1ರಂದು ಬಜೆಟ್ನಲ್ಲಿ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಬಹುದು. ಇನ್ನೂ ಖುಷಿ ಸುದ್ದಿ ಎಂದರೆ, ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳೂ ಸೇರಿದಂತೆ ವಿವಿಧ ಸಮುದಾಯಗಳನ್ನು ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಕವರೇಜ್ ವ್ಯಾಪ್ತಿಗೆ ತರಲು ಸರ್ಕಾರ ಚಿಂತಿಸಿದೆ.
ಸದ್ಯ ಆಯುಷ್ಮಾನ್ ಭಾರತ್ ಹೆಲ್ತ್ ಇನ್ಷೂರೆನ್ಸ್ ಸ್ಕೀಮ್ ಅನ್ನು ಎಸ್ಸಿ ಎಸ್ಟಿ ಸಮುದಾಯದವರು, ಬುಡಕಟ್ಟು ಸಮುದಾಯದವರು, ಬಿಕ್ಷುಕರು, ದಿವ್ಯಾಂಗರುವ ಕುಟುಂಬ, ಗುಡಿಸಲು ನಿವಾಸಿಗಳು ಹೀಗೆ ಬಡವರು, ನಿರ್ಗತಿಕರು, ದುರ್ಬಲ ವರ್ಗದ ಕುಟುಂಬಗಳಿಗೆಂದು ಮಾಡಲಾಗಿದೆ. ಒಟ್ಟು 30 ಕೋಟಿಗಿಂತ ಹೆಚ್ಚು ಆಯುಷ್ಮಾನ್ ಕಾರ್ಡ್ಗಳನ್ನು ವಿತರಿಸಲಾಗಿದೆ. ಆಯುಷ್ಮಾನ್ ಕಾರ್ಡ್ ಫಲಾನುಭವಿಗಳ ಸಂಖ್ಯೆಯನ್ನು 100 ಕೋಟಿಗೆ ಹೆಚ್ಚಿಸುವ ಗುರಿ ಸರ್ಕಾರಕ್ಕೆ ಇದೆ. ಈ ನಿಟ್ಟಿನಲ್ಲಿ ಪಿಎಂ ಜನ್ ಆರೋಗ್ಯ ಯೋಜನೆಯ ವ್ಯಾಪ್ತಿಗೆ ಇನ್ನಷ್ಟು ಜನರನ್ನು ಸೇರಿಸುವ ಸಾಧ್ಯತೆ ಇದೆ. ವರದಿ ಪ್ರಕಾರ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು, ಆಶಾ ಕಾರ್ಯಕರ್ತೆಯರೂ ಇದರಲ್ಲಿ ಒಳಗೊಳ್ಳಲಿದ್ದಾರೆ. ಮುಂದಿನ ಮೂರು ವರ್ಷದಲ್ಲಿ ಇವರನ್ನು ಸ್ಕೀಮ್ ವ್ಯಾಪ್ತಿಗೆ ತರಬಹುದು ಎನ್ನಲಾಗಿದೆ.
ಆಯುಷ್ಮಾನ್ ಭಾರತ್ ಹೆಲ್ತ್ ಇನ್ಷೂರೆನ್ಸ್ ವ್ಯಾಪ್ತಿಗೆ ತರುವ ಪ್ರಸ್ತಾಪ ಇರುವ ವರ್ಗಗಳು
- ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು
- ಕಟ್ಟಡ ನಿರ್ಮಾಣ ಕಾರ್ಮಿಕರು
- ಕಲ್ಲಿದ್ದಲೇತರ ಗಣಿ ಕಾರ್ಮಿಕರು
- ಆಶಾ ಕಾರ್ಯಕರ್ತೆಯರು
ಪಿಎಂ ಕಿಸಾನ್ ಯೋಜನೆಯಲ್ಲಿ ಧನ ಸಹಾಯ ಹೆಚ್ಚಳ?
ಇತ್ತೀಚೆಗೆ ಬಂದ ಕೆಲ ಸುದ್ದಿಗಳ ಪ್ರಕಾರ ಪಿಎಂ ಕಿಸಾನ್ ಯೋಜನೆಯಲ್ಲಿ ಸರ್ಕಾರ ನೀಡುವ ಧನ ಸಹಾಯದ ಪ್ರಮಾಣ ಹೆಚ್ಚುವ ನಿರೀಕ್ಷೆ ಇದೆ. ಸರ್ಕಾರ ಈಗ ವರ್ಷಕ್ಕೆ ಮೂರು ಕಂತುಗಳಲ್ಲಿ 6,000 ರೂ ನೀಡುತ್ತಿದೆ. ಇದನ್ನು ನಾಲ್ಕು ಕಂತುಗಳಲ್ಲಿ 8,000 ರೂ ನೀಡುವ ಆಲೋಚನೆಯನ್ನು ಸರ್ಕಾರ ಮಾಡಿರುವುದು ತಿಳಿದುಬಂದಿದೆ. ಬಜೆಟ್ನಲ್ಲಿ ಇದರ ಘೋಷಣೆ ಆಗಬಹುದು.
ಇದನ್ನೂ ಓದಿ: Petrol Diesel Price: ಪೆಟ್ರೋಲ್, ಡೀಸಲ್ ಬೆಲೆ 10 ರೂವರೆಗೆ ಕಡಿಮೆ ಆಗುವ ಸಾಧ್ಯತೆ
ಇನ್ನು, ಪಿಎಂ ಕಿಸಾನ್ ಯೋಜನೆಯ ಮಹಿಳಾ ಫಲಾನುಭವಿಗಳಿಗೆ ವರ್ಷಕ್ಕೆ 12,000 ರೂ ನೀಡುವ ಪ್ರಸ್ತಾಪವೂ ಸರ್ಕಾರದ ಮುಂದಿದೆ. ದೇಶಾದ್ಯಂತ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಸಂಖ್ಯೆ 10 ಕೋಟಿಗೂ ಅಧಿಕ ಇದೆ. ಈ ಪೈಕಿ ಸುಮಾರು 9 ಕೋಟಿಯಷ್ಟು ರೈತರ ಖಾತೆಗಳಿಗೆ ಸರ್ಕಾರ 15ನೇ ಕಂತಿನ ಹಣವನ್ನು ವರ್ಗಾಯಿಸಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:37 pm, Wed, 17 January 24