Petrol Diesel Price: ಪೆಟ್ರೋಲ್, ಡೀಸಲ್ ಬೆಲೆ 10 ರೂವರೆಗೆ ಕಡಿಮೆ ಆಗುವ ಸಾಧ್ಯತೆ

ನಷ್ಟದ ಪೊರೆ ಕಳಚಿ ಲಾಭದ ಹಳಿಗೆ ಬಂದಿರುವ ಪೆಟ್ರೋಲಿಯಂ ಕಂಪನಿಗಳು ಈಗ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಇಳಿಸುವ ಸಾಧ್ಯತೆ ಇದೆ. ಒಂದು ಲೀಟರ್​ಗೆ 5ರಿಂದ 10 ರೂನಷ್ಟು ಬೆಲೆ ಇಳಿಕೆ ಆಗಬಹುದು ಎಂದು ವರದಿಗಳು ಹೇಳುತ್ತಿವೆ. 2022ರ ಏಪ್ರಿಲ್ ತಿಂಗಳಿಂದಲೂ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಸ್ಥಿರವಾಗಿದೆ.

Petrol Diesel Price: ಪೆಟ್ರೋಲ್, ಡೀಸಲ್ ಬೆಲೆ 10 ರೂವರೆಗೆ ಕಡಿಮೆ ಆಗುವ ಸಾಧ್ಯತೆ
ಪೆಟ್ರೋಲ್
Follow us
|

Updated on: Jan 17, 2024 | 11:16 AM

ನವದೆಹಲಿ, ಜನವರಿ 17: ಕಳೆದ ಎರಡು ವರ್ಷದಿಂದ ಸಾಕಷ್ಟು ಲಾಭ ಮಾಡಿರುವ ಭಾರತದ ಪೆಟ್ರೋಲಿಯಂ ಕಂಪನಿಗಳು (Oil Marketing companies) ಈಗ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳನ್ನು ಇಳಿಸುವ ಸಾಧ್ಯತೆ ದಟ್ಟವಾಗಿದೆ ಎಂದು ವರದಿಗಳು ಮತ್ತೆ ಬರುತ್ತಿವೆ. ಫೆಬ್ರುವರಿ ತಿಂಗಳಲ್ಲಿ ಸರಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಲೀಟರ್​ಗೆ 10 ರೂವರೆಗೂ ಬೆಲೆ ಇಳಿಕೆ ಮಾಡಬಹುದು ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ. ಪೆಟ್ರೋಲ್ ಮತ್ತು ಡೀಸಲ್ ಬೆಲೆ ಕಡಿಮೆ ಆಗಬಹುದು ಎಂದು ಡಿಸೆಂಬರ್ ತಿಂಗಳಲ್ಲೂ ವರದಿಗಳು ಬಂದಿದ್ದವು. ಲೋಕಸಭೆ ಚುನಾವಣೆಗೆ ಒಂದು ಅಥವಾ ಎರಡು ತಿಂಗಳು ಇರುವ ಮುನ್ನ ಬೆಲೆ ಇಳಿಕೆ ಆಗಬಹುದು ಎನ್ನಲಾಗಿದೆ.

ಭಾರತದಲ್ಲಿ 2022ರ ಏಪ್ರಿಲ್ ತಿಂಗಳಿಂದಲೂ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳು ಸ್ಥಿರವಾಗಿವೆ. ಅದೇ ವೇಳೆ ಜಾಗತಿಕವಾಗಿ ಕಚ್ಚಾ ತೈಲ ಬೆಲೆಗಳು ಅಗ್ಗಗೊಂಡಿವೆ. ರಷ್ಯಾದಿಂದಲೂ ಕಡಿಮೆ ಬೆಲೆಗೆ ತೈಲವನ್ನು ಪಡೆಯಲಾಗುತ್ತಿದೆ. ಅಲ್ಲಿಯವರೆಗೆ ಸಾಕಷ್ಟು ನಷ್ಟಗಳನ್ನು ಕಂಡಿದ್ದ ಭಾರತದ ಪೆಟ್ರೋಲಿಯಂ ಕಂಪನಿಗಳು ಕಳೆದ ಎರಡು ವರ್ಷದಿಂದ ನಷ್ಟದ ಸುಳಿಯಿಂದ ಹೊರಬಂದಿರುವುದಷ್ಟೇ ಅಲ್ಲ ಲಾಭದ ಹಳಿಗೂ ಬಂದಿವೆ. ಈ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ (ಅಕ್ಟೋಬರ್​ನಿಂದ ಡಿಸೆಂಬರ್​ನ ಅವಧಿ) ಇಂಡಿಯನ್ ಆಯಿಲ್, ಎಚ್​ಪಿ, ಭಾರತ್ ಪೆಟ್ರೋಲಿಯಂ ಕಂಪನಿಗಳು 75,000 ಕೋಟಿ ರೂನಷ್ಟು ಲಾಭ ಹೊಂದಿರಬಹುದು.

ಇದನ್ನೂ ಓದಿ: Fitch Ratings: ಭಾರತಕ್ಕೆ ಬಿಬಿಬಿ ಗ್ರೇಡ್ ಕೊಟ್ಟ ಫಿಚ್ ರೇಟಿಂಗ್ಸ್; ಸಾಲ ಮರುಪಾವತಿ ಶಕ್ತಿ ಉತ್ತಮ; ಬೇರೆ ದೇಶಗಳಿಗೆ ಹೇಗಿದೆ ರೇಟಿಂಗ್ಸ್?

ಪೆಟ್ರೋಲ್ ಬೆಲೆ ಇಳಿಕೆಯಿಂದ ಸರ್ಕಾರಕ್ಕೆ ಚುನಾವಣೆ ಹಾಗೂ ಹಣದುಬ್ಬರ ಎರಡೂ ಲಾಭ

ವರದಿಯ ಪ್ರಕಾರ ಭಾರತದ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಸದ್ಯಕ್ಕೆ ಒಂದು ಲೀಟರ್​ಗೆ 10 ರೂನಷ್ಟು ಲಾಭದ ಮಾರ್ಜಿನ್ ಹೊಂದಿವೆ. ಇದರಲ್ಲಿ ಒಂದಷ್ಟು ಮೊತ್ತವನ್ನು ಗ್ರಾಹಕರಿಗೆ ವರ್ಗಾಯಿಸಬಹುದು. ಪೆಟ್ರೋಲ್ ಮತ್ತು ಡೀಸಲ್ ಒಂದು ಲೀಟರ್​ಗೆ 5ರಿಂದ 10 ರೂವರೆಗೆ ಬೆಲೆ ಇಳಿಕೆ ಕಾಣಬಹುದು.

ಪೆಟ್ರೋಲ್ ಡೀಸಲ್ ಬೆಲೆ ಇಳಿಕೆಯಿಂದ ಸರ್ಕಾರಕ್ಕೂ ಎರಡು ರೀತಿಯಲ್ಲಿ ಅನುಕೂಲವಾಗುತ್ತದೆ. ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆಗಳು ಇರುವುದರಿಂದ ಜನಬೆಂಬಲ ಸಿಗಬಹುದೆಂದು ನಿರೀಕ್ಷಿಸಬಹುದು. ಹಾಗೆಯೇ, ಪೆಟ್ರೋಲ್ ಡೀಸಲ್ ಬೆಲೆ ಇಳಿಕೆಯ ಪರಿಣಾಮವಾಗಿ ಬೇರೆ ಬೆಲೆಗಳೂ ಕಡಿಮೆ ಆಗಬಹುದು. ಇದರಿಂದ ಹಣದುಬ್ಬರ ಏರಿಕೆಗೆ ಸ್ವಲ್ಪ ಕಡಿವಾಣ ಬೀಳಬಹುದು.

ಇದನ್ನೂ ಓದಿ: Petrol Diesel Price on January 17: ಛತ್ತೀಸ್​ಗಢದಲ್ಲಿ ಪೆಟ್ರೋಲ್ ಬೆಲೆ ಇಳಿಕೆ, ಉತ್ತರ ಪ್ರದೇಶದಲ್ಲಿ ದುಬಾರಿ

ಈಗೆಷ್ಟಿದೆ ಪೆಟ್ರೋಲ್ ಬೆಲೆ?

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 96.72 ರೂ ಇದೆ. ಡೀಸಲ್ ಬೆಲೆ ಲೀಟರ್​ಗೆ 89.62 ರೂ ಇದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ 106.31 ರೂ ಇದ್ದರೆ ಡೀಸಲ್ ಬೆಲೆ 94.27 ರೂ ಇದೆ. ಬೆಂಗಳೂರಿನಲ್ಲಿ ಈಗ ಪೆಟ್ರೋಲ್ ಬೆಲೆ ಲೀಟರ್​ಗೆ 101.94 ರೂ ಇದೆ. ಡೀಸಲ್ ಬೆಲೆ 87.89 ರೂ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ