Fitch Ratings: ಭಾರತಕ್ಕೆ ಬಿಬಿಬಿ ಗ್ರೇಡ್ ಕೊಟ್ಟ ಫಿಚ್ ರೇಟಿಂಗ್ಸ್; ಸಾಲ ಮರುಪಾವತಿ ಶಕ್ತಿ ಉತ್ತಮ; ಬೇರೆ ದೇಶಗಳಿಗೆ ಹೇಗಿದೆ ರೇಟಿಂಗ್ಸ್?

Issuer Default Rating for India: ಗ್ಲೋಬಲ್ ರೇಟಿಂಗ್ಸ್ ಏಜೆನ್ಸಿ ಫಿಚ್ ಭಾರತಕ್ಕೆ ಬಿಬಿಬಿ ರೇಟಿಂಗ್ ನೀಡಿದೆ. ಈ ಶ್ರೇಣಿ ಪಡೆದ ದೇಶಕ್ಕೆ ಸಾಲ ಮರುಪಾವತಿ ಶಕ್ತಿ ಇರುತ್ತದೆ ಎಂಬುದನ್ನು ಸೂಚಿಸುತ್ತದೆ. ವಿಶ್ವಾದ್ಯಂತ ವಿವಿಧ ಸರ್ಕಾರಗಳು, ಬಿಸಿನೆಸ್ ಸಂಸ್ಥೆಗಳ ಹಣಕಾಸು ಸ್ಥಿತಿ, ಸಾಲ ಮರುಪಾವತಿ ಶಕ್ತಿ ಎಷ್ಟು ಎಂದು ಫಿಚ್ ವಿವಿಧ ರೇಟಿಂಗ್ ನೀಡುತ್ತದೆ. ಎಎಎಯಿಂದ ಆರಂಭವಾಗಿ ಡಿ ವರೆಗೆ 11 ರೇಟಿಂಗ್ಸ್ ನೀಡಲಾಗುತ್ತದೆ. ಪಾಕಿಸ್ತಾನಕ್ಕೆ ಬಿಬಿಬಿ ರೇಟಿಂಗ್ ಇದೆ.

Fitch Ratings: ಭಾರತಕ್ಕೆ ಬಿಬಿಬಿ ಗ್ರೇಡ್ ಕೊಟ್ಟ ಫಿಚ್ ರೇಟಿಂಗ್ಸ್; ಸಾಲ ಮರುಪಾವತಿ ಶಕ್ತಿ ಉತ್ತಮ; ಬೇರೆ ದೇಶಗಳಿಗೆ ಹೇಗಿದೆ ರೇಟಿಂಗ್ಸ್?
ಫಿಚ್ ರೇಟಿಂಗ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 17, 2024 | 10:39 AM

ನವದೆಹಲಿ, ಜನವರಿ 17: ಜಾಗತಿಕ ರೇಟಿಂಗ್ಸ್ ಏಜೆನ್ಸಿಯಾದ ಫಿಚ್ ಸಂಸ್ಥೆ (Fitch Ratings) ಭಾರತಕ್ಕೆ ‘ಬಿಬಿಬಿ’ ಗ್ರೇಡ್ ನೀಡಿದೆ. ಭಾರತದ ಜಿಡಿಪಿ ವೃದ್ಧಿ ಸಾಧ್ಯತೆ ಉತ್ತಮವಾಗಿದೆ. ಬಾಹ್ಯ ಹಣಕಾಸು ಹರಿವು (external finances) ಕೂಡ ಉತ್ತಮವಾಗಿದೆ ಎನ್ನುವುದು ಫಿಚ್ ರೇಟಿಂಗ್ಸ್​ನ ಅನಿಸಿಕೆ. ಆದರೆ, ಭಾರತದ ಸಾರ್ವಜನಿಕ ಹಣಕಾಸು (public finances) ಸ್ಥಿತಿ ತುಸು ದುರ್ಬಲವಾಗಿರುವುದು ಭಾರತಕ್ಕೆ ಹಿನ್ನಡೆ ಆಗಬಹುದು ಎಂದೂ ಫಿಚ್ ಎಚ್ಚರಿಸಿದೆ.

ಏನಿದು ಫಿಚ್ ರೇಟಿಂಗ್ಸ್?

ಫಿಚ್ ಸಂಸ್ಥೆ ವಿವಿಧ ಸರ್ಕಾರ, ಕಾರ್ಪೊರೇಟ್ಸ್, ಬ್ಯಾಂಕ್ ಮೊದಲಾದ ಸಂಘ ಸಂಸ್ಥೆಗಳಿಗೆ ಇಷ್ಯೂಯರ್ ಡೀಫಾಲ್ಟ್ ರೇಟಿಂಗ್ಸ್ (ಐಡಿಆರ್) ನೀಡುತ್ತದೆ. ಸರ್ಕಾರ ಅಥವಾ ಸಂಸ್ಥೆಗಳ ಸಾಲ ತೀರಿಸುವಿಕೆ ಶಕ್ತಿ ಹೇಗಿದೆ, ಯಾವ ಪರಿಸ್ಥಿತಿಯಲ್ಲಿದೆ ಎಂದು ಈ ರೇಟಿಂಗ್ಸ್ ಸೂಚಕವಾಗಿರುತ್ತವೆ.

ಫಿಚ್ ರೇಟಿಂಗ್ಸ್ 11 ಶ್ರೇಣಿಗಳಿವೆ. ಎಎಎ ಎಂಬುದು ಅತ್ಯುನ್ನತ ಶ್ರೇಣಿ. ಎಎಎ ರೇಟಿಂಗ್ ಪಡೆದ ಸರ್ಕಾರ ಅಥವಾ ಸಂಸ್ಥೆಯು ಡೀಫಾಲ್ಟ್ ಆಗುವ ಸಾಧ್ಯತೆ ಅತ್ಯಂತ ಕಡಿಮೆ ಇರುತ್ತದೆ. ಸಾಲ ತೀರಿಸುವಿಕೆಯ ಶಕ್ತಿ ಅತ್ಯುತ್ತಮವಾಗಿರುತ್ತದೆ.

ಇದನ್ನೂ ಓದಿ: Interim Budget: ಈ ಬಾರಿಯ ಬಜೆಟ್​ನ ರೂವಾರಿಗಳ ಪೈಕಿ ಇದ್ದಾರೆ ಕರ್ನಾಟಕದ ಒಬ್ಬ ವ್ಯಕ್ತಿ; ಇವರೇ ನೋಡಿ ಈ ನಿರ್ಮಲಾ ಸೀತಾರಾಮನ್ ಬಜೆಟ್ ಟೀಮ್

ಇನ್ನು, ಡಿ ಎಂಬುದು ಕೊನೆಯ ದರ್ಜೆಯ ರೇಟಿಂಗ್. ದಿವಾಳಿಯಾಗಿರುವ, ದಿವಾಳಿಯಾಗುತ್ತಿರುವ, ಬಿಸಿನೆಸ್ ನಿಂತಿರುವ ಇತ್ಯಾದಿ ಸಂಸ್ಥೆಗಳಿಗೆ ಈ ಡಿ ರೇಟಿಂಗ್ಸ್ ನೀಡಲಾಗುತ್ತದೆ.

ಭಾರತ ಸರ್ಕಾರಕ್ಕೆ ನೀಡಲಾಗಿರುವ ಬಿಬಿಬಿ ರೇಟಿಂಗ್ ಈ ಸಾಲಿನಲ್ಲಿ 4ನೇ ಸ್ಥಾನದಲ್ಲಿದೆ. ಡೀಫಾಲ್ಟ್ ಆಗುವ ಅಪಾಯ ಕಡಿಮೆ ಇರುತ್ತದೆ. ಸಾಲ ಮರುಪಾವತಿ ಶಕ್ತಿ ಉತ್ತಮವಾಗಿರುತ್ತದೆ. ಆದರೆ, ಅಚಾನಕ್ಕಾಗಿ ಆರ್ಥಿಕ ಅಥವಾ ವ್ಯವಹಾರ ಪರಿಸ್ಥಿತಿ ಹದಗೆಟ್ಟರೆ ಈ ಮರುಪಾವತಿ ಸಾಮರ್ಥ್ಯ ಕಡಿಮೆ ಆಗಬಹುದು ಎಂಬುದನ್ನು ಈ ರೇಟಿಂಗ್ಸ್ ಸೂಚಿಸುತ್ತದೆ.

ಇದೇ ಫಿಚ್ ರೇಟಿಂಗ್ಸ್ ಪಾಕಿಸ್ತಾನಕ್ಕೆ ಸಿಸಿಸಿ ಗ್ರೇಡಿಂಗ್ ಕೊಟ್ಟಿದೆ. ಇಲ್ಲಿ ಹೂಡಿಕೆ ಬಹಳ ಅಸುರಕ್ಷಿತವಾಗಿರುತ್ತದೆ. ಡೀಫಾಲ್ಟ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ ಎಂಬುದು ಈ ಸಿಸಿಸಿ ರೇಟಿಂಗ್ ಸೂಚಿಸುತ್ತದೆ.

ಇದನ್ನೂ ಓದಿ: Costly Loan: ರಿಸ್ಕ್ ವೇಟ್ ರೂಲ್; ದುಬಾರಿಯಾಗಲಿದೆ ಪರ್ಸನಲ್ ಲೋನ್; ಏನು ಹೇಳುತ್ತದೆ ಆರ್​ಬಿಐನ ಹೊಸ ನಿಯಮ?

ಎಎಎ ರೇಟಿಂಗ್ ಹೊಂದಿರುವ ದೇಶಗಳು

  1. ಆಸ್ಟ್ರೇಲಿಯಾ
  2. ಕೆನಡಾ
  3. ಸ್ವಿಟ್ಜರ್​ಲ್ಯಾಂಡ್
  4. ಜರ್ಮನಿ
  5. ಡೆನ್ಮಾರ್ಕ್
  6. ಲೈಶೆಸ್ಟೀನ್
  7. ಲುಕ್ಸೆಂಬರ್ಗ್
  8. ನೆದರ್​ಲ್ಯಾಂಡ್ಸ್
  9. ನಾರ್ವೇ
  10. ಸಿಂಗಾಪುರ್
  11. ಸ್ವೀಡನ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ