MS Dhoni: ಕ್ರಿಕೆಟಿಗ ಎಂಎಸ್ ಧೋನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ ಮಾಜಿ ಬಿಸಿನೆಸ್ ಪಾರ್ಟ್ನರ್ಸ್; ಏನಿದು ಕೇಸ್?

Defamation case in Delhi HC: ಮಾಜಿ ಕ್ರಿಕೆಟ್ ಕ್ಯಾಪ್ಟನ್ ಎಂಎಸ್ ಧೋನಿ ವಿರುದ್ಧ ಅವರ ಇಬ್ಬರು ಮಾಜಿ ಬಿಸಿನೆಸ್ ಪಾರ್ಟ್ನರ್​ಗಳು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಆರ್ಕಾ ಸ್ಪೋರ್ಟ್ಸ್ ನಿರ್ದೇಶಕರಾದ ಮಿಹಿರ್ ದಿವಾಕರ್ ಮತ್ತು ಸೌಮ್ಯಾ ದಾಸ್ ಅವರು ದೆಹಲಿ ಹೈಕೋರ್ಟ್​ನಲ್ಲಿ ಮೊಕದ್ದಮೆ ಹಾಕಿದ್ದಾರೆ. ಆರ್ಕಾ ಸ್ಪೋರ್ಟ್ಸ್​ನೊಂದಿಗೆ ಗುತ್ತಿಗೆ ಮಾಡಿಕೊಂಡಿದ್ದ ಧೋನಿ ತನಗೆ 16 ಕೋಟಿ ರೂ ವಂಚನೆ ಆಗಿದೆ ಎಂದು ರಾಂಚಿ ಕೋರ್ಟ್​ವೊಂದರಲ್ಲಿ ಕೇಸ್ ದಾಖಲಿಸಿದ್ದರು.

MS Dhoni: ಕ್ರಿಕೆಟಿಗ ಎಂಎಸ್ ಧೋನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ ಮಾಜಿ ಬಿಸಿನೆಸ್ ಪಾರ್ಟ್ನರ್ಸ್; ಏನಿದು ಕೇಸ್?
ಎಂ ಎಸ್ ಧೋನಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 17, 2024 | 11:55 AM

ನವದೆಹಲಿ, ಜನವರಿ 17: ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಅವರ ಇಬ್ಬರು ಮಾಜಿ ಬಿಸಿನೆಸ್ ಪಾಲುದಾರರು (business partners) ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ದೆಹಲಿ ಹೈಕೋರ್ಟ್​ನಲ್ಲಿ ಪ್ರಕರಣ ದಾಖಲಾಗಿದ್ದು, ನಾಳೆ ಗುರುವಾರ (ಜ. 18) ನ್ಯಾ| ಪ್ರತಿಭಾ ಎಂ ಸಿಂಗ್ ಅವರಿರುವ ಪೀಠದಲ್ಲಿ ವಿಚಾರಣೆ ನಡೆಯಲಿದೆ. ದೋನಿ ವಿರುದ್ಧ ದೂರು ದಾಖಲಿಸಿರುವುದು ಆರ್ಕಾ ಸ್ಪೋರ್ಟ್ಸ್ (Aarka sports) ಸಂಸ್ಥೆಯ ನಿರ್ದೇಶಕರಾದ ಮಿಹಿರ್ ದಿವಾಕರ್ ಮತ್ತು ಅವರ ಪತ್ನಿ ಸೌಮ್ಯಾ ದಾಸ್. ಧೋನಿ ಅವರಿಂದ ತಮ್ಮ ವಿರುದ್ಧ ಮಾನಹಾನಿಯಾಗುವಂತಹ ಆರೋಪಗಳು ಬರದಂತೆ ನಿರ್ಬಂಧಿಸಬೇಕು ಮತ್ತು ಈಗಾಗಲೇ ಆಗಿರುವ ಮಾನಹಾನಿಗೆ ಪರಿಹಾರ ಕೊಡಿಸಬೇಕು ಎಂದು ಇವರು ಎಂ ಎಸ್ ಧೋನಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.

ಏನಿದು ಎಂಎಸ್ ಧೋನಿ ಮಾನಹಾನಿ ಪ್ರಕರಣ?

ಆರ್ಕಾ ಸ್ಪೋರ್ಟ್ಸ್ ಸಂಸ್ಥೆಯಲ್ಲಿ ಎಂಎಸ್ ಧೋನಿ ಈ ಮೊದಲು ಬಿಸಿನೆಸ್ ಪಾರ್ಟ್ನರ್ ಆಗಿದ್ದರು. ಆದರೆ, ಈ ಸಂಸ್ಥೆಯ ಇಬ್ಬರು ನಿರ್ದೇಶಕರಾದ ಮಹಿರ್ ದಿವಾಕರ್ ಮತ್ತು ಸೌಮ್ಯಾ ದಾಸ್ ವಿರುದ್ಧ ಧೋನಿ ಇತ್ತೀಚೆಗೆ ರಾಂಚಿ ಕೋರ್ಟ್​ವೊಂದರಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿದ್ದರು. ಐಪಿಸಿ ಸೆಕ್ಷನ್ 406 ಮತ್ತು 420 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Costly Tennis: ಬಡಬಗ್ಗರಿಗಲ್ಲ ಟೆನಿಸ್ ಆಟ; ಭಾರತದ ನಂ. 1 ಆಟಗಾರ ಸುಮಿತ್ ನಗಾಲ್ ಕಥೆ ಕೇಳಿ ಚುರ್ ಎಂದೀತು

ಕ್ರಿಕೆಟ್ ಅಕಾಡೆಮಿಗಳನ್ನು ಸ್ಥಾಪಿಸುವ ಗುತ್ತಿಗೆಯ ವಿಚಾರದಲ್ಲಿ ಇವರು 16 ಕೋಟಿ ರೂ ವಂಚನೆ ಮಾಡಿದ್ದಾರೆ ಎಂಬುದು ಧೋನಿ ಮಾಡಿರುವ ಆರೋಪವಾಗಿದೆ. 2017ರಲ್ಲಿ ಆದ ಗುತ್ತಿಗೆ ಪ್ರಕಾರ ಧೋನಿ ಹೆಸರಿನಲ್ಲಿ ವಿಶ್ವದ ವಿವಿಧೆಡೆ ಕ್ರಿಕೆಟ್ ಅಕಾಡೆಮಿಗಳನ್ನು ಆರಂಭಿಸಬೇಕಿತ್ತು. ಆದರೆ, ಈ ಗುತ್ತಿಗೆಯ ಅಂಶಗಳಿಗೆ ದಿವಾಕರ್ ಬದ್ಧವಾಗಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಒಪ್ಪಂದದ ಪ್ರಕಾರ ಆರ್ಕ ಸ್ಪೋರ್ಟ್ಸ್ ಸಂಸ್ಥೆ ಫ್ರಾಂಚೈಸಿ ಶುಲ್ಕ ಪಾವತಿಸಬೇಕು ಮತ್ತು ನಿಗದಿತ ಪ್ರಮಾಣದಲ್ಲಿ ಲಾಭವನ್ನು ವರ್ಗಾಯಿಸಬೇಕು. ಆದರೆ, ಈ ನಿಯಮಗಳನ್ನು ಸಂಸ್ಥೆ ಪಾಲಿಸಿಲ್ಲ ಎಂದು ಎಂ ಎಸ್ ಧೋನಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: TCS: ಭವಿಷ್ಯದ ಅವಕಾಶಗಳಿಗೆ ಟಾಟಾ ತಯಾರಿ; ಟಿಸಿಎಸ್​ನಲ್ಲಿ ಪ್ರತಿಯೊಬ್ಬ ಉದ್ಯೋಗಿಗೂ ಎಐ ಟ್ರೈನಿಂಗ್

2021ರ ಆಗಸ್ಟ್ 15ರಂದು ಧೋನಿ ಅವರು ಆರ್ಕಾ ಸ್ಪೋರ್ಟ್ಸ್ ಸಂಸ್ಥೆಗೆ ನೀಡಿದ್ದ ಆಥರೈಸೇಶನ್ ಲೆಟರ್ ಅನ್ನು ಹಿಂಪಡೆದಿದ್ದರು. ಮಾತ್ರವಲ್ಲದೇ ಹಲವು ಬಾರಿ ಲೀಗಲ್ ನೋಟೀಸ್​ಗಳನ್ನೂ ನೀಡಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ