Costly Tennis: ಬಡಬಗ್ಗರಿಗಲ್ಲ ಟೆನಿಸ್ ಆಟ; ಭಾರತದ ನಂ. 1 ಆಟಗಾರ ಸುಮಿತ್ ನಗಾಲ್ ಕಥೆ ಕೇಳಿ ಚುರ್ ಎಂದೀತು

Sumit Nagal Struggle: ಸುಮಿತ್ ನಗಾಲ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪ್ರಧಾನ ಹಂತಕ್ಕೆ ಹೋಗಿ ಮೊದಲ ಸುತ್ತು ಜಯಿಸಿದ್ದಾರೆ. ಸುದ್ದಿಗಳ ಪ್ರಕಾರ 80,000 ರೂ ಇದ್ದ ನಗಾಲ್ ಅವರ ಬ್ಯಾಂಕ್ ಬ್ಯಾಲನ್ಸ್ ಈಗ 98 ಲಕ್ಷ ರೂ ಆಗುವುದು ಖಚಿತವಾಗಿದೆ. ಎರಡನೇ ಸುತ್ತಿನಲ್ಲಿ ನಗಾಲ್ ಗೆದ್ದರೆ ಅವರ ಸಂಭಾವನೆಯ ಮೊತ್ತ 1.40 ಕೋಟಿ ರೂಗೆ ಏರುತ್ತದೆ.

Costly Tennis: ಬಡಬಗ್ಗರಿಗಲ್ಲ ಟೆನಿಸ್ ಆಟ; ಭಾರತದ ನಂ. 1 ಆಟಗಾರ ಸುಮಿತ್ ನಗಾಲ್ ಕಥೆ ಕೇಳಿ ಚುರ್ ಎಂದೀತು
ಸುಮಿತ್ ನಗಾಲ್
Follow us
|

Updated on: Jan 16, 2024 | 5:45 PM

ಭಾರತದಲ್ಲಿ ಟೆನಿಸ್ ಕ್ರೀಡೆ ಅಡಿ ಇಟ್ಟು ಶತಮಾನವೇ ಆದರೂ ಇನ್ನೂ ಕೂಡ ಸ್ಲೀಪಿಂಗ್ ಜೈಂಟ್ ಎಂದೇ ಪರಿಗಣಿತವಾಗಿದೆ. ರಾಮನಾಥನ್ ಕೃಷ್ಣನ್, ರಮೇಶ್ ಕೃಷ್ಣನ್, ವಿಜಯ್ ಅಮೃತರಾಜ್, ಲಿಯಾಂಡರ್ ಪೇಸ್, ಮಹೇಶ್ ಭೂಪತಿ, ಸಾನಿಯಾ ಮಿರ್ಜಾ, ಸೋಮದೇವ್ ದೇವವರ್ಮನ್ ಮೊದಲಾದ ಬೆರಳೆಣಿಕೆಯ ಆಟಗಾರರು ಮಾತ್ರವೇ ಗಮನ ಸೆಳೆದಿದ್ದಾರೆ. ಇದೀಗ ಸುಮಿತ್ ನಗಾಲ್ ಆಸ್ಟ್ರೇಲಿಯ್ ಓಪನ್ ಗ್ರ್ಯಾನ್​ಸ್ಲಾಮ್ ಟೂರ್ನಿಯಲ್ಲಿ (Australian Open Grand Slam tennis) ಎರಡನೇ ಸುತ್ತು ಪ್ರವೇಶಿಸಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ದುಡ್ಡಿಲ್ಲದ ಕಾರಣ ಅವರು ಟೂರ್ನಿಯಲ್ಲಿ ಪಾಲ್ಗೊಳ್ಳುವುದೇ ಕಷ್ಟವಾಗಿತ್ತಂತೆ. ದೇಶದ ಅಗ್ರಮಾನ್ಯ ಟೆನಿಸ್ ಆಟಗಾರನಿಗೆ ಇಂಥ ಪರಿಸ್ಥಿತಿ ಎಂದರೆ ಕ್ರೀಡೆಯ ಪರಿಸ್ಥಿತಿ ಹೇಗಿದ್ದೀತು?

ಸುಮಿತ್ ನಗಾಲ್ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಕ್ವಾಲಿಫೈಯಿಂಗ್ ಸುತ್ತುಗಳನ್ನು ದಾಟಿ ಬಂದು ಪ್ರಧಾನ ಸುತ್ತಿಗೆ ಹೋಗಿ ಅಲ್ಲಿ ಗೆದ್ದು ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಟೂರ್ನಿಗೆ ಅಡಿ ಇಡುವಾಗ ಇವರ ಬಳಿ ಇದ್ದ ಬ್ಯಾಂಕ್ ಬ್ಯಾಲನ್ಸ್ ಕೇವಲ 80,000 ರೂ ಮಾತ್ರವೇ. ಅದೃಷ್ಟವಶಾತ್ ಅವರು ಗ್ರ್ಯಾನ್​ಸ್ಲಾಂನ ಮೊದಲ ಸುತ್ತು ಗೆದ್ದ ಬಳಿಕ 98 ಲಕ್ಷ ರೂ ಹಣವು ಅವರ ಖಾತೆಗೆ ಬಂದು ಬೀಳುವುದು ಖಚಿತವಾಗಲಿದೆ.

ಒಂದು ಪಂದ್ಯ ಗೆದ್ದರೆ ಕೋಟಿ ಹಣ ಸಿಗುತ್ತಲ್ಲಾ ಅಂತ ಅನಿಸುತ್ತಿದೆಯಾ?

ಒಂದು ವೇಳೆ ಸುಮಿತ್ ನಗಾಲ್ ಎರಡನೇ ಸುತ್ತಿನಲ್ಲಿ ಸೋತರೆ ಅವರು 98 ಲಕ್ಷ ರೂನೊಂದಿಗೆ ನಿರ್ಗಮಿಸುತ್ತಾರೆ. ಅಬ್ಬಬ್ಬಾ, ಒಂದು ಟೆನಿಸ್ ಪಂದ್ಯ ಗೆದ್ದರೆ ಕೋಟಿ ಹಣ ಸಿಗುತ್ತಲ್ಲಾ ಎಂದು ನೀವು ಬೆರಗಾಗಬಹುದು. ವಿಪರ್ಯಾಸ ಎಂದರೆ ಈ ಹಣ ಟೆನಿಸ್ ರಂಗದಲ್ಲಿ ತೃಣಕ್ಕೆ ಸಮಾನ. ಕೋಚಿಂಗ್, ಟ್ರೈನಿಂಗ್ ಇತ್ಯಾದಿಗೆಲ್ಲಾ ಬಹಳ ಖರ್ಚಾಗುತ್ತದೆ. ಟೆನಿಸ್ ಕ್ಷೇತ್ರ ಬಹಳ ಕಾಸ್ಟ್ಲೀ ದುನಿಯಾ.

ಇದನ್ನೂ ಓದಿ: ಕೂಚ್ ಬೆಹಾರ್ ಟ್ರೋಫಿ ಫೈನಲ್​ನಲ್ಲಿ ಅಜೇಯ 404 ರನ್ ಸಿಡಿಸಿ ಇತಿಹಾಸ ಸೃಷ್ಟಿಸಿದ ಕನ್ನಡಿಗ ಪ್ರಖರ್ ಚತುರ್ವೇದಿ..!

ಟೆನಿಸ್ ಕ್ರೀಡೆ ಬಹಳ ದೈಹಿಕ ಕ್ಷಮತೆ, ಪರಿಪಕ್ವ ತಂತ್ರಗಾರಿಕೆ ಬೇಡುವ ಆಟ. ವೃತ್ತಿಪರ ಟೆನಿಸ್ ಆಟಗಾರನಾಗಿ ಉಳಿಯಬೇಕಾದರೆ ಪಕ್ಕಾ ವೃತ್ತಿಪರ ಕೋಚಿಂಗ್, ಟ್ರೈನಿಂಗ್, ಫಿಟ್ನೆಸ್ ಸ್ಪೆಷಲಿಸ್ಟ್ ಇವೆಲ್ಲಾ ಸೌಲಭ್ಯಗಳು ಬೇಕಾಗುತ್ತವೆ. ವೈಯಕ್ತಿಕವಾಗಿ ಇವುಗಳಿಗೆ ವೆಚ್ಚ ಮಾಡುವುದೆಂದರೆ ಆಗದು.

ಸತತವಾಗಿ ಗೆಲ್ಲಬೇಕು, ಇಲ್ಲ ಪ್ರಾಯೋಜಕರು ಬೇಕು…

ನೀವು ಎಟಿಪಿ ಟೂರ್​ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರಬೇಕು. ವರ್ಷದಲ್ಲಿ ಒಂದಾದರೂ ಎಟಿಪಿ ಟೂರ್ನಮೆಂಟ್ ಗೆಲ್ಲುತ್ತಿರಬೇಕು. ಗ್ರ್ಯಾನ್​ಸ್ಲಾಮ್​ನಲ್ಲಿ ಕನಿಷ್ಠ ಒಂದೆರಡು ಸುತ್ತುಗಳನ್ನಾದರೂ ದಾಟುವಂತಿರಬೇಕು. ಆಗ ಗೆಲ್ಲುವ ಬಹುಮಾನ ಮೊತ್ತವು ಆಟಗಾರನ ತರಬೇತಿ ವೆಚ್ಚಕ್ಕೆ ಸರಿಹೋಗುತ್ತದೆ. ಇಲ್ಲವಾದರೆ ದೊಡ್ಡ ಪ್ರಾಯೋಜಕರು ಸಿಗಬೇಕು. ಎಲ್ಲಾ ಖರ್ಚುವೆಚ್ಚಗಳನ್ನು ಈ ಸ್ಪಾನ್ಸರ್​ಗಳು ನೋಡಿಕೊಳ್ಳಬೇಕು. ಆಗ ಆಟಗಾರನೊಬ್ಬ ಹೆಚ್ಚು ಕಾಲ ಟೆನಿಸ್ ಕ್ರೀಡೆಯಲ್ಲಿ ಉಳಿಯಲು ಸಾಧ್ಯವಾಗುತ್ತದೆ.

ಸುಮಿತ್ ನಗಾಲ್ ಭಾರತದ ನಂಬರ್ ಒನ್ ಟೆನಿಸ್ ಆಟಗಾರನಾದರೂ ಅವರಿಗೆ ಪ್ರಾಯೋಜಕರು ಇಲ್ಲ ಎನ್ನುವುದು ದುರಂತ. ಇವರು ಟೂರ್ನಿಗಳಿಂದ ಗೆಲ್ಲುವ ಬಹುಮಾನ ಹಣವು ಪರ್ಸನಲ್ ಕೋಚ್​ನ ಸಂಭಾವನೆಗೆಯೇ ವ್ಯಯವಾಗುತ್ತದೆ. ಫಿಟ್ನೆಸ್, ಟ್ರೈನಿಂಗ್ ಇತ್ಯಾದಿಗೆ ಹಣ ಹೊಂದಿಸುವುದು ಇವರಿಗೆ ಬಹಳ ಕಷ್ಟ.

ಇದನ್ನೂ ಓದಿ: Costly Loan: ರಿಸ್ಕ್ ವೇಟ್ ರೂಲ್; ದುಬಾರಿಯಾಗಲಿದೆ ಪರ್ಸನಲ್ ಲೋನ್; ಏನು ಹೇಳುತ್ತದೆ ಆರ್​ಬಿಐನ ಹೊಸ ನಿಯಮ?

ಆಸ್ಟ್ರೇಲಿಯನ್ ಓಪನ್​ನಲ್ಲಿ ಎರಡನೇ ಸುತ್ತಿನಲ್ಲಿ ನಗಾಲ್ ಗೆದ್ದರೆ?

ಸುಮಿತ್ ನಗಾಲ್ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಅರ್ಹತಾ ಸುತ್ತುಗಳಿಂದ ಗೆದ್ದು ಬಂದು ಪ್ರಧಾನ ಹಂತಕ್ಕೆ ಬಂದವರು. ಅರ್ಹತಾ ಹಂತದ ಪಂದ್ಯಗಳಲ್ಲಿ ಪಾಲ್ಗೊಂಡರೆ 31,250 ಆಸ್ಟ್ರೇಲಿಯನ್ ಡಾಲರ್ (ಎಯುಡಿ) ಸಂಭಾವನೆ ಸಿಗುತ್ತದೆ. ಅಂದರೆ ನಗಾಲ್ ಅರ್ಹತಾ ಹಂತದಲ್ಲಿ ಗೆಲ್ಲದೇ ಹೋಗಿದ್ದರೂ 17 ಲಕ್ಷ ರೂ ಹಣ ಪಡೆಯುತ್ತಿದ್ದರು. ಮೂರು ಅರ್ಹತಾ ಸುತ್ತುಗಳನ್ನು ಗೆದ್ದಿದ್ದರಿಂದ 65,000 ಎಯುಡಿ ಸಂಭಾವನೆ ಖಾತ್ರಿ ಇರುತ್ತದೆ. ಪ್ರಧಾನ ಹಂತದ ಮೊದಲ ಸುತ್ತಿನಲ್ಲಿ ಗೆದ್ದರೆ 1,20,000 ಎಯುಡಿ ಸಂಭಾವನೆ ಸಿಗುತ್ತದೆ. ಈಗ ಅವರು ಎರಡನೇ ಸುತ್ತಿನಲ್ಲಿ ಗೆಲ್ಲದೇ ಹೋದರೂ 1.80 ಲಕ್ಷ ಎಯುಡಿ, ಅಥವಾ 98 ಲಕ್ಷ ರೂ ಸಿಗುವುದು ಖಾತ್ರಿಯಾಗುತ್ತದೆ.

ಎರಡನೇ ಸುತ್ತಿನಲ್ಲಿ ಗೆದ್ದರೆ 2,55,000 ಆಸ್ಟ್ರೇಲಿಯನ್ ಡಾಲರ್​ನಷ್ಟು ಸಂಭಾವನೆ ಸಿಗುವುದು ಖಚಿತ. ಚೀನಾದ ಶಾಂಗ್ ಜುನ್​ಚೆಂಗ್ ಅವರು ನಗಾಲ್​ನ ಮುಂದಿನ ಎದುರಾಳಿಯಾಗಿದ್ದಾರೆ. ಇವರು ವಿಶ್ವದ 142ನೇ ಶ್ರೇಯಾಂಕದ ಆಟಗಾರ. ಮೊದಲ ಸುತ್ತಿನಲ್ಲಿ 27ನೇ ಶ್ರೇಯಾಂಕದ ಆಟಗಾರನನ್ನು ಮಣಿಸಿರುವ ವಿಶ್ವದ 137ನೇ ಶ್ರೇಯಾಂಕದ ಸುಮಿತ್ ನಗಾಲ್​ಗೆ ಚೀನಾದ ಎದುರಾಳಿ ದೊಡ್ಡ ಸವಾಲೇನೂ ಆಗದೇ ಹೋಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ