ಸಂಸತ್ತಿನ ಬಜೆಟ್ ಅಧಿವೇಶನ (Budget Session 2022) ನಿನ್ನೆಯಿಂದ ಪ್ರಾರಂಭವಾಗಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಅಂದರೆ ಕೆಲವೇ ಹೊತ್ತಲ್ಲಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ನಾಲ್ಕನೇ ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ಲೋಕಸಭೆಯಲ್ಲಿ 2022-23ನೇ ಸಾಲಿನ ಆಯವ್ಯಯ ಮುಂಗಡ ಪತ್ರವನ್ನು ಮಂಡನೆ ಮಾಡಿದ ಒಂದು ತಾಸಿನಲ್ಲಿ, ನಿರ್ಮಲಾ ಸೀತಾರಾಮನ್ ಅವರು ರಾಜ್ಯಸಭೆಯಲ್ಲೂ ಪ್ರಸ್ತುತ ಪಡಿಸುವರು. ಆದಾಯ ಮತ್ತು ಖರ್ಚುಗಳ ಮಾಹಿತಿ ನೀಡಲಿದ್ದಾರೆ. ಈಗಾಗಲೇ ದೆಹಲಿಯ ನಾರ್ತ್ ಬ್ಲಾಕ್ನಲ್ಲಿರುವ ಹಣಕಾಸು ಸಚಿವಾಲಯದ ಕಚೇರಿ ತಲುಪಿರುವ ನಿರ್ಮಲಾ ಸೀತಾರಾಮನ್, ಅಲ್ಲಿ ಅಧಿಕಾರಿಗಳೊಟ್ಟಿಗೆ ಸಭೆ ನಡೆಸಿದ್ದಾರೆ. ಅದಾದ ಬಳಿಕ ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿ ರಾಮನಾಥ ಕೋವಿಂದ್ರನ್ನು ಭೇಟಿಯಾದರು.
Union Finance Minister Nirmala Sitharaman along with Ministers of State for Finance, Dr Bhagwat Kishanrao Karad, Shri Pankaj Chaudhary, and senior officials of the Ministry of Finance, called on President Ram Nath Kovind before presenting the Union Budget 2022-23. pic.twitter.com/7JNZt3rOPj
— ANI (@ANI) February 1, 2022
ಈ ಬಾರಿಯೂ ಸಹ ನಿರ್ಮಲಾ ಸೀತಾರಾಮನ್ ಸಾಂಪ್ರದಾಯಿಕ ಬಹಿಖಾತಾ ಪದ್ಧತಿಯನ್ನು ಕೈಬಿಟ್ಟಿದ್ದಾರೆ. ಕೆಂಪು ಬಟ್ಟೆಯಲ್ಲಿ ಸ್ವದೇಶಿ ಟ್ಯಾಬ್ ಇಟ್ಟುಕೊಂಡಿದ್ದು, ಅದರ ಮೂಲಕವೇ ಬಜೆಟ್ ಮಂಡಿಸಲಿದ್ದಾರೆ. ಕಳೆದ ವರ್ಷ ಕೂಡ ಅವರು ಟ್ಯಾಬ್ ಸಹಾಯದಿಂದಲೇ ಬಜೆಟ್ ಓದಿದ್ದಾರೆ. ಕೊರೊನಾ ಕಾರಣದಿಂದ ಕಳೆದವರ್ಷದಿಂದಲೂ ಕಾಗದ ರಹಿತ ಬೆಜಟ್ ಮಂಡನೆಗೆ ಆದ್ಯತೆ ನೀಡಲಾಗುತ್ತಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವಾಲಯದಿಂದ ಹೊರಡುವ ಮುನ್ನ ಅಲ್ಲಿನ ಅಧಿಕಾರಿಗಳೊಂದಿಗೆ ಗ್ರೂಪ್ ಫೋಟೋ ತೆಗೆಸಿಕೊಂಡಿದ್ದಾರೆ.
Delhi: Union Finance Minister Nirmala Sitharaman leaves from the Ministry of Finance.
She will present and read out the #Budget2022 at the Parliament through a tab, instead of the traditional ‘bahi khata’. pic.twitter.com/Z3xgSvTXtW
— ANI (@ANI) February 1, 2022
ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಜೆಟ್ ಅಧಿವೇಶನಕ್ಕೂ ಮೊದಲು ಮಾತನಾಡಿ, ಎಲ್ಲ ರಾಜಕೀಯ ಪಕ್ಷಗಳ, ಎಲ್ಲ ಸಂಸದರೂ ಮಕ್ತ ಮನಸಿನಿಂದ ಡಿಬೇಟ್ನಲ್ಲಿ ಪಾಲ್ಗೊಳ್ಳಿ. ಆದರೆ ಮಾಡುವ ಚರ್ಚೆ ಮತ್ತು ಡಿಬೇಟ್ಗಳು ಅರ್ಥಪೂರ್ಣವಾಗಿರಲಿ. ಭಾರತವನ್ನು ಅಭಿವೃದ್ಧಿಯ ಹಾದಿಯಲ್ಲಿ ಇನ್ನಷ್ಟು ಮುನ್ನಡೆಸಲು ಪೂರಕವಾಗಿರಲಿ ಎಂದು ಹೇಳಿದ್ದರು.
ಇದನ್ನೂ ಓದಿ: Budget 2022 LIVE: ಇಂದು 2022-23ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ; ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:34 am, Tue, 1 February 22