Karnataka Budget 2023: ಈ ಬಾರಿಯ ಬೊಮ್ಮಾಯಿ ಬಜೆಟ್​ನಲ್ಲಿ ಯಾವ ಜಿಲ್ಲೆಗೆ ಎನು ಸಿಕ್ಕಿದೆ? ಇಲ್ಲಿದೆ ಮಾಹಿತಿ

|

Updated on: Feb 17, 2023 | 9:39 PM

ಚುನಾವಣೆ ಹತ್ತಿರ ಇರುವುದರಿಂದ ಈ ಬಾರಿಯ ಬಜೆಟ್​ ಮೇಲೆ ಭಾರಿ ನಿರೀಕ್ಷೆ ಇಡಲಾಗಿತ್ತು. ನಮ್ಮ ಜಿಲ್ಲೆಗೆ ಏನ್ ಸಿಗುತ್ತೆ ಎಂದು ಜನ ಕಾತರದಿಂದ ಕಾಯುತ್ತಿದ್ರು. ಹಾಗಾದ್ರೆ, ಬೊಮ್ಮಾಯಿ ಅವರು ತಮ್ಮ ಈ ಬಾರಿಯ ಬಜೆಟ್​ನಲ್ಲಿ ಯಾವ್ಯಾವ ಜಿಲ್ಲೆಗಳಿಗೆ ಏನೇನ್ ಗಿಫ್ಟ್ ಕೊಟ್ಟಿದ್ದಾರೆ ಎನ್ನುವುದು ಈ ಕೆಳಗಿನಂತಿದೆ.

Karnataka Budget 2023: ಈ ಬಾರಿಯ ಬೊಮ್ಮಾಯಿ ಬಜೆಟ್​ನಲ್ಲಿ ಯಾವ ಜಿಲ್ಲೆಗೆ ಎನು ಸಿಕ್ಕಿದೆ? ಇಲ್ಲಿದೆ ಮಾಹಿತಿ
Follow us on

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಇಂದು(ಫೆ.17) 2023ನೇ ಸಾಲಿನ ರಾಜ್ಯ ಬಜೆಟ್ (karnataka Budget 2023) ಮಂಡಿಸಿದರು.  ಚುನಾವಣಾ ಹೊಸ್ತಿಲಲ್ಲಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಎನ್ನುವ ಮಿಠಾಯಿಯನ್ನು ಎಚ್ಚರಿಕೆ ಹೆಜ್ಜೆಯನ್ನಿಟ್ಟು ಹಂಚಿದ್ದಾರೆ. ಮುಂಬರುವ ವಿಧಾನಸಭೆ ಎಲೆಕ್ಷನ್ (Karnataka Assembly Elections 2023)​ ಹಿನ್ನೆಲೆಯಲ್ಲಿ ಜಿಲ್ಲೆ ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ಗಿಫ್ಟ್ ನೀಡದ್ದಾರೆ. ಅಳೆದು ತೂಗಿ ಅನುದಾನವನ್ನು ಸಿಎಂ  ನೀಡಿದ್ದು, ಸರ್ವರಿಗೂ ಸಮಪಾಲು ಅನ್ನೋ ಮಂತ್ರ ಪಠಿಸಿದ್ದಾರೆ.

ಇದನ್ನೂ ಓದಿ: Karnataka Budget 2023: ಬೊಮ್ಮಾಯಿ ಬಜೆಟ್​ನಲ್ಲಿ ಯಾವ ಇಲಾಖೆಗೆ ಎಷ್ಟು ಅನುದಾನ ಸಿಕ್ತು? ಇಲ್ಲಿ ಸಂಪೂರ್ಣ ಮಾಹಿತಿ

ಜಿಲ್ಲೆ ಜಿಲ್ಲೆಗಳು ಟಾರ್ಗೆಟ್.. ‘ಬೊಮ್ಮಾಯಿ’ ಮಿಠಾಯಿ..!

ಚುನಾವಣೆ ಹತ್ತಿರ ಇರುವುದರಿಂದ ಈ ಬಾರಿಯ ಬಜೆಟ್​ ಮೇಲೆ ಭಾರಿ ನಿರೀಕ್ಷೆ ಇಡಲಾಗಿತ್ತು. ನಮ್ಮ ಜಿಲ್ಲೆಗೆ ಏನ್ ಸಿಗುತ್ತೆ ಎಂದು ಜನ ಕಾತರದಿಂದ ಕಾಯುತ್ತಿದ್ರು, ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಸಿಎಂ ಬೊಮ್ಮಾಯಿ, ಎಚ್ಚರಿಕೆ ಹೆಜ್ಜೆ ಇಟ್ಟಿದ್ದಾರೆ. ಉತ್ತರ, ದಕ್ಷಿಣ, ಕರಾವಳಿ, ಮಲೆನಾಡಿನ ಭಾಗಕ್ಕೆಲ್ಲ ಬಜೆಟ್​​​ನಲ್ಲಿ ಗಿಫ್ಟ್​ ಕೊಟ್ಟಿದ್ದಾರೆ. ಹಾಗಿದ್ರೆ, ಬಜೆಟ್​​ನಲ್ಲಿ ಯಾವ್ಯಾವ ಜಿಲ್ಲೆಗಳಿಗೆ ಪ್ರಮುಖವಾಗಿ ಏನೆನ್​ ಸಿಕ್ಕಿದೆ ಎನ್ನುವುದು ಈ ಕೆಳಗಿನಂತಿದೆ ನೋಡಿ.

ಉತ್ತರ ಕರ್ನಾಟಕ ಬೊಮ್ಮಾಯಿ ನೀಡಿದ್ದೇನು?

  • ರಾಯಚೂರಲ್ಲಿ ಏಮ್ಸ್ ಮಾದರಿ ಆಸ್ಪತ್ರೆಯ ನಿರ್ಮಾಣ
  • ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣ
  • ಬಳ್ಳಾರಿಯಲ್ಲಿ 100 ಕೋಟಿ ವೆಚ್ಚದಲ್ಲಿ ಮೆಗಾ ಡೈರಿ ಸ್ಥಾಪನೆ
  • ಹಾವೇರಿಯಲ್ಲಿ ಹೂವಿನ ಚಿಲ್ಲರೆ ಮಾರುಕಟ್ಟೆ ನಿರ್ಮಾಣ
  • ಹಾವೇರಿಯಲ್ಲಿ ಮೀನುಮರಿ ಉತ್ಪಾದನಾ, ಪಾಲನಾ ಕೇಂದ್ರ
  • ಯಾದಗಿರಿ, ಕಲಬುರಗಿ ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಿಸಲು ಕ್ರಮ
  • ಕೋಲಾರ, ಬಾಗಲಕೋಟೆ, ಯಾದಗಿರಿ, ವಿಜಯನಗರ
  • ಗದಗ ಜಿಲ್ಲೆಗಳಲ್ಲಿ 50 ಹಾಸಿಗೆಯ ಕ್ರಿಟಿಕಲ್ ಕೇರ್ ಬ್ಲಾಕ್​​ಗಳ ಸ್ಥಾಪನೆ
  • ಬಂಕಾಪುರದ ನಗರೇಶ್ವರ ದೇಗುಲ ಪ್ರವಾಸಿತಾಣವಾಗಿ ಅಭಿವೃದ್ಧಿ

ಉತ್ತರ ಕರ್ನಾಟಕದಂತೆ ದಕ್ಷಿಣದ ಜಿಲ್ಲೆಗಳಿಗೂ ಬಂಪ್ ಗಿಫ್ಟ್

  • ರಾಮನಗರದ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ
  • ಚಿಕ್ಕಬಳ್ಳಾಪುರದಲ್ಲಿ ಹೈಟೆಕ್ ಹೂವಿನ ಮಾರುಕಟ್ಟೆ ನಿರ್ಮಾಣ
  • ತೀರ್ಥಹಳ್ಳಿ ಕೃಷಿ ಸಂಶೋಧನಾ ಕೇಂದ್ರಕ್ಕೆ $10 ಕೋಟಿ ರೂ.
  • ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣ
  • ಉಡುಪಿ ಜಿಲ್ಲೆ ಬೈಂದೂರು ಬಳಿ ಸೀಫುಡ್ ಪಾರ್ಕ್ ಸ್ಥಾಪನೆಗೆ ಕ್ರಮ
  • ಚಿಕ್ಕಮಗಳೂರು, ಹಾಸನ, ಮೈಸೂರು, ಕೊಡಗಲ್ಲಿ ಕಾಡಾನೆ ಕಾರ್ಯಪಡೆ
  • ಮೈಸೂರು, ಮಂಡ್ಯಕ್ಕೂ ಕಾಡಾನೆ ಕಾರ್ಯಪಡೆ ವಿಸ್ತರಿಸಲು ನಿರ್ಧಾರ
  • ತಿಪಟೂರಲ್ಲಿ ತೋಟಗಾರಿಕೆ ವಿವಿ, ಚಿಕ್ಕಮಗಳೂರಲ್ಲಿ ವಿವಿ
  • ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ಪಾಲಿಟೆಕ್ನಿಕ್ ಕಾಲೇಜು
  • ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗದಲ್ಲಿ ವಸತಿ ಶಾಲೆ
  • ಚಿಕ್ಕಬಳ್ಳಾಪುರ ಜಿಲ್ಲೆ ನಂದಿಗಿರಿಧಾಮದಲ್ಲಿ ರೋಪ್​-ವೇ ನಿರ್ಮಾಣ.

ಒಟ್ಟಿನಲ್ಲಿ ಚುನಾವಣೆ ಗಮನದಲ್ಲಿಟ್ಟುಕೊಂಡು, ಎಲ್ಲ ಜಿಲ್ಲೆಗಳಿಗೂ ಸರ್ಕಾರ ಗಿಫ್ಟ್ ಕೊಟ್ಟಿದ್ದಾರೆ. ಇದಕ್ಕೆ ಜನರ ಪ್ರತಿಕ್ರಿಯೆ ಹೇಗಿರುತ್ತೆ ಎನ್ನುವುದು ಮುಂದೆ ಗೊತ್ತಾಗಲಿದೆ.

ಕರ್ನಾಟಕ ಬಜೆಟ್ ಹೈಲೈಟ್ಸ್

ಕರ್ನಾಟಕ ಬಜೆಟ್ ಮತ್ತಷ್ಟು ಸುದ್ದಿಗಳು