ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಬಜೆಟ್ (Union Budget 2023-24) ಮಂಡನೆ ಮಾಡಿದ ಬಳಿಕ ಬಜೆಟ್ ಭಾಷಣದ ಪೂರ್ಣ ಪ್ರತಿ ಇಂಡಿಯಾ ಬಜೆಟ್ ವೆಬ್ಸೈಟ್ನಲ್ಲಿ (www.indiabudget.gov.in) ಲಭ್ಯವಿರಲಿದೆ. ಈ ವೆಬ್ಸೈಟ್ನಿಂದ ಪಿಡಿಎಫ್ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಮೊದಲು ನೀವು ಬಜೆಟ್ ವೆಬ್ಸೈಟ್ ಲಿಂಕ್ ಓಪನ್ ಮಾಡಬೇಕು. ನಂತರ ‘ಬಜೆಟ್ ಸ್ಪೀಚ್’ ಟ್ಯಾಬ್ ಅನ್ನು ಕ್ಲಿಕ್ ಮಾಡುವ ಮೂಲಕ ಬಜೆಟ್ ಪ್ರತಿಯನ್ನು ನೀವು ವೀಕ್ಷಿಸಬಹುದು. ಅಲ್ಲಿ ವಿವಿಧ ಹಣಕಾಸು ವರ್ಷಗಳ ಬಜೆಟ್ ಪ್ರತಿಗಳಿರುತ್ತವೆ. ಈ ಪೈಕಿ ನಿಮ್ಮ ಆಯ್ಕೆಯ ಹಣಕಾಸು ವರ್ಷವನ್ನು ಕ್ಲಿಕ್ ಮಾಡಿ ನಂತರ ಡೌನ್ಲೋಡ್ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ಬಜೆಟ್ ಪ್ರತಿ ಡೌನ್ಲೋಡ್ ಆಗುತ್ತದೆ.
ಈ ಬಾರಿಯ ಬಜೆಟ್ ಪ್ರತಿಯನ್ನು ಡೌನ್ಲೋಡ್ ಮಾಡುವುದಕ್ಕಾಗಿ ನೀವು ಇಂಡಿಯಾ ಬಜೆಟ್ ವೆಬ್ಸೈಟ್ಗೆ ಭೇಟಿ ನೀಡಿದ ಬಳಿಕ ‘2023-24 ಬಜೆಟ್ ಪಿಡಿಎಫ್’ ಅನ್ನು ಆಯ್ಕೆ ಮಾಡಬೇಕು. ನಂತರ ಡೌನ್ಲೋಡ್ ಕ್ಲಿಕ್ ಮಾಡಬೇಕು. ಬಜೆಟ್ ಮಂಡನೆ ಪ್ರಕ್ರಿಯೆ ಮುಗಿದ ಬಳಿಕವಷ್ಟೇ ಬಜೆಟ್ ಪಿಡಿಎಫ್ ಪ್ರತಿ ಲಭ್ಯವಾಗಲಿದೆ ಎಂಬುದು ನೆನಪಿರಲಿ.
ಬಜೆಟ್ ಲೈವ್ ನೋಡಲು ಇಲ್ಲಿ ಕ್ಲಿಕ್ ಮಾಡಿ
ಅದೇ ರೀತಿ ಬಜೆಟ್ ಮಂಡನೆ ಬಳಿಕ ಕನ್ನಡ ಸೇರಿದಂತೆ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಬಜೆಟ್ ಭಾಷಣ ಲಭ್ಯವಾಗಲಿದೆ. ಅಧಿಕೃತ ವೆಬ್ಸೈಟ್ನ ಲಿಂಕ್ನಲ್ಲಿ ಪ್ರಾದೇಶಿಕ ಭಾಷೆಗಳ ಆಯ್ಕೆ ಇರುತ್ತದೆ. ನಿಮಗೆ ಯಾವ ಭಾಷೆ ಬೇಕೋ ಅದನ್ನು ಆಯ್ಕೆ ಮಾಡಿಕೊಂಡು, ನಿಮ್ಮದೇ ಭಾಷೆಯಲ್ಲಿ ಬಜೆಟ್ ಕಾಪಿಯನ್ನು ಓದಬಹುದು.
ಯೂನಿಯನ್ ಬಜೆಟ್ ಆ್ಯಪ್ ಮೂಲಕವೂ ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಬಜೆಟ್ ಪ್ರತಿಯನ್ನು ನೋಡಲು, ಡೌನ್ಲೋಡ್ ಮಾಡಲು ಅವಕಾಶವಿದೆ. ಆರ್ಥಿಕ ವ್ಯವಹಾರಗಳ ಇಲಾಖೆಯ ಮಾರ್ಗದರ್ಶನದಲ್ಲಿ ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್ (NIC) ಅಭಿವೃದ್ಧಿಪಡಿಸಿರುವ ಯೂನಿಯನ್ ಬಜೆಟ್ ಆ್ಯಪ್ನಲ್ಲಿ ಬಜೆಟ್ ಸಂಬಂಧಿತ 14 ದಾಖಲೆಗಳು ದೊರೆಯಲಿವೆ. ಇವುಗಳಲ್ಲಿ ವಾರ್ಷಿಕ ಹಣಕಾಸು ಸ್ಟೇಟ್ಮೆಂಟ್ (ಬಜೆಟ್), ಡಿಮಾಂಡ್ ಫಾರ್ ಗ್ರಾಂಟ್ಸ್, ಫೈನಾನ್ಸ್ ಬಿಲ್, ಹಣಕಾಸು ಸಚಿವರ ಬಜೆಟ್ ಭಾಷಣದ ಪ್ರತಿ ಕೂಡ ಸೇರಿದೆ.
ಬಜೆಟ್ ಸಂಬಂಧಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:01 am, Wed, 1 February 23