ಬೆಂಗಳೂರು: ನಾಳೆ ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ (Karnataka Budget 2023) ಮಂಡಿಸುತ್ತಿದ್ದಾರೆ. ಇದು ಈ ಸರ್ಕಾರದ ಕೊನೆಯ ಬಜೆಟ್ ಆಗಿದ್ದು, ಕೆಲ ಮಹತ್ವದ ಯೋಜನೆಗಳ ಘೋಷಣೆ ಮಾಡುವ ಸಾಧ್ಯತೆ ಇದೆ. ಸರ್ಕಾರದ ಮೂಲಗಳು ಟಿವಿ9ಗೆ ತಿಳಿಸಿರುವ ಪ್ರಕಾರ ನಿರೀಕ್ಷೆಯಂತೆ ಬೊಮ್ಮಾಯಿ ಅವರಿಂದ ಕೆಲ ಆಕರ್ಷಕ ಯೋಜನೆಗಳ ಘೋಷಣೆಯಾಗಲಿದೆ (Big Announcements). ಬಹಳ ಮಹತ್ವದ ನಿರ್ಧಾರದಲ್ಲಿ ಸರ್ಕಾರ ಮಹಿಳೆಯರಿಗೆಂದು ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಬಹುದು.
ರೈತರಿಗೆ ಹೆಚ್ಚು ಸಾಲ ಸೌಲಭ್ಯ, ಗೃಹಿಣಿಯರಿಗೆ ಗೌರವಧನ, ರೈತರಿಗೆ ಡೀಸೆಲ್ ಸಹಾಯಧನದ ವಿಸ್ತರಣೆ, ರಾಜ್ಯದ ಎಲ್ಲಾ ಹೋಬಳಿಗಳಲ್ಲಿ ನಮ್ಮ ಕ್ಲಿನಿಕ್ಗಳ ಸ್ಥಾಪನೆ, 10 ಸಾವಿರ ಶಾಲಾ ಕಟ್ಟಡಗಳ ನಿರ್ಮಾಣ ಇತ್ಯಾದಿ ಘೋಷಣೆಗಳನ್ನು ಬೊಮ್ಮಾಯಿ ತಮ್ಮ ಕೊನೆಯ ಬಜೆಟ್ನಲ್ಲಿ ಮಾಡುವ ನಿರೀಕ್ಷೆ ಇದೆ. ಕುಲಕಸುಬುಗಳನ್ನ ಮುಂದುವರಿಸಲು ಉತ್ತೇಜಿಸುವಂತಹ ಕ್ರಮವನ್ನು ಸರ್ಕಾರ ಕೈಗೊಳ್ಳಬಹುದು ಎನ್ನಲಾಗುತ್ತಿದೆ.
ಬೆಂಗಳೂರು ಅಭಿವೃದ್ಧಿಗೆ 10 ಸಾವಿರ ಕೋಟಿ ರೂ ಮೀಸಲು, ಆಶಾ ಕಾರ್ಯಕರ್ತೆಯರ ಸಂಬಳ ಏರಿಕೆ ಮಾಡಲು ಬಜೆಟ್ನಲ್ಲಿ ನಿರ್ಧರಿಸಬಹುದು. ಸರ್ಕಾರಿ ನೌಕರರ 7ನೇ ವೇತನ ಆಯೋಗ ಜಾರಿಯ ಕನಸು ನೆರವೇರಬಹುದು.
ಇದನ್ನೂ ಓದಿ: Bengaluru Traffic: ಟ್ರಾಫಿಕ್ನಲ್ಲೇ ಅತಿಹೆಚ್ಚು ಸಮಯ; ನಿಧಾನಗತಿ ನಗರಗಳ ಪೈಕಿ ಬೆಂಗಳೂರು
ಈ ಬಜೆಟ್ನಲ್ಲಿ ಏನೆಲ್ಲಾ ಘೋಷಣೆ ಆಗಬಹುದು ಎಂಬ ವಿವರ ಈ ಕೆಳಕಂಡಂತಿದೆ:
ಕರ್ನಾಟಕ ಬಜೆಟ್ಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ
Published On - 11:56 am, Thu, 16 February 23