Bengaluru Traffic: ಟ್ರಾಫಿಕ್​ನಲ್ಲೇ ಅತಿಹೆಚ್ಚು ಸಮಯ; ನಿಧಾನಗತಿ ನಗರಗಳ ಸಾಲಿನಲ್ಲಿ ಬೆಂಗಳೂರು

ಜಿಯೋಲೊಕೇಶನ್ ಟೆಕ್ನಾಲಜಿ ಸ್ಪೆಷಲಿಸ್ಟ್ ಟಾಮ್‌ಟಾಮ್ (Geolocation technology specialist TomTom) ನಡೆಸಿದ ಸಮೀಕ್ಷೆಯ ಪ್ರಕಾರ ಕಳೆದ ವರ್ಷ (2022) ದಟ್ಟಣೆಯ ಸಮಯದಲ್ಲಿ ಬೆಂಗಳೂರು ನಗರದಲ್ಲಿ 10 ಕಿಮೀ ಪ್ರಯಾಣಿಸಲು 28 ನಿಮಿಷ 9 ಸೆಕೆಂಡುಗಳನ್ನು ತೆಗೆದುಕೊಂಡಿದೆ.

Bengaluru Traffic: ಟ್ರಾಫಿಕ್​ನಲ್ಲೇ ಅತಿಹೆಚ್ಚು ಸಮಯ; ನಿಧಾನಗತಿ ನಗರಗಳ ಸಾಲಿನಲ್ಲಿ ಬೆಂಗಳೂರು
ಬೆಂಗಳೂರು ಟ್ರಾಫಿಕ್Image Credit source: Go Mechanic
Follow us
ನಯನಾ ಎಸ್​ಪಿ
|

Updated on:Feb 16, 2023 | 11:58 AM

ಬೆಂಗಳೂರು: ಬೆಂಗಳೂರು ದೇಶ-ವಿದೇಶಗಳಲ್ಲಿ ತನ್ನ ಇತಿಹಾಸ, ಐಟಿ ಹಬ್‌ಗಳು ಮತ್ತು ಟ್ರಾಫಿಕ್ ಜಾಮ್‌ಗಳಿಗೆ  (Traffic Jam) ಹೆಸರುವಾಸಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಟ್ರಾಫಿಕ್ ಅವ್ಯವಸ್ಥೆ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್ ಮಾಡಿ ಹಾಸ್ಯ ಮಾಡುತ್ತಿದ್ದಾರೆ. ನಗರದ ಟ್ರಾಫಿಕ್ ಪರಿಸ್ಥಿತಿಯನ್ನು ಕಂಡು ಅನೇಕರು ಬೇಸರಗೊಂಡಿದ್ದಾರೆ. ಇದೀಗ ಇತ್ತೀಚಿನ ಅಧ್ಯಯನದ ಪ್ರಕಾರ ಭಾರತದ ಸಿಲಿಕಾನ್ ವ್ಯಾಲಿ (Silicon Valley) ಎಂದೇ ಕರೆಯಲ್ಪಡುವ ಬೆಂಗಳೂರು ವಾಹನಗಳನ್ನು ಓಡಿಸಲು ನಿಧಾನಗತಿ ನಗರಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ದಟ್ಟಣೆಯ ಸಮಯದಲ್ಲಿ ಬೆಂಗಳೂರಿನಲ್ಲಿ 10 ಕಿಮೀ ಕ್ರಮಿಸಲು ಸರಾಸರಿ ಅರ್ಧ ಗಂಟೆ ತೆಗೆದುಕೊಳ್ಳುತ್ತದೆ. ಕರ್ನಾಟಕದ ರಾಜಧಾನಿ ಈ ವಿಷಯದಲ್ಲಿ ಲಂಡನ್‌ನ ನಂತರ ಎರಡನೇ ಸ್ಥಾನದಲ್ಲಿದೆ.

ಜಿಯೋಲೊಕೇಶನ್ ಟೆಕ್ನಾಲಜಿ ಸ್ಪೆಷಲಿಸ್ಟ್ ಟಾಮ್‌ಟಾಮ್ (Geolocation technology specialist TomTom) ನಡೆಸಿದ ಸಮೀಕ್ಷೆಯ ಪ್ರಕಾರ ಕಳೆದ ವರ್ಷ (2022) ದಟ್ಟಣೆಯ ಸಮಯದಲ್ಲಿ ಬೆಂಗಳೂರು ನಗರದಲ್ಲಿ 10 ಕಿಮೀ ಪ್ರಯಾಣಿಸಲು 28 ನಿಮಿಷ 9 ಸೆಕೆಂಡುಗಳನ್ನು ತೆಗೆದುಕೊಂಡಿದೆ. ಇನ್ನೂ ಈ ವರದಿಯ ಪ್ರಕಾರ ಲಂಡನ್ ಪ್ರಥಮ ಸ್ಥಾನದಲ್ಲಿದೆ. ಲಂಡನ್​ನಲ್ಲಿ 10 ಕಿಮೀ ಪ್ರಯಾಣಿಸಲು ತೆಗೆದುಕೊಂಡ ಸರಾಸರಿ ಸಮಯ 35 ನಿಮಿಷಗಳು. ಡಬ್ಲಿನ್, ಐರ್ಲೆಂಡ್‌ನ ರಾಜಧಾನಿ, ಜಪಾನಿನ ಪಟ್ಟಣವಾದ ಸಪೊರೊ ಮತ್ತು ಇಟಲಿಯ ಮಿಲನ್ ಈ ಪಟ್ಟಿಯಲ್ಲಿ ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ.

2022 ರಲ್ಲಿ ಬೆಂಗಳೂರಿನಲ್ಲಿ ದಟ್ಟಣೆಯ ಸಮಯದಲ್ಲಿ ಟ್ರಾಫಿಕ್‌ನಿಂದ ಜನರ ಸರಾಸರಿ 129 ಗಂಟೆಗಳನ್ನು ಕಳೆದುಕೊಂಡಿದ್ದಾರೆ ಎಂದು ಈ ಅಧ್ಯಯನವು ಹೇಳುತ್ತದೆ. ಜನರು ಟ್ರಾಫಿಕ್ ನಿಂದ ಎಷ್ಟು ಸಮಯ ಕೆಳೆದುಕೊಳ್ಳುತ್ತಾರೆ ಎಂಬ ಪಟ್ಟಿಯಲ್ಲಿ ನಮ್ಮ ನಗರವು ನಾಲ್ಕನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಹಿಂದುಳಿದ ಸಮುದಾಯಗಳ 2,500 ಮಕ್ಕಳಿಂದ ಏರೋ ಇಂಡಿಯಾ ಶೋ ವೀಕ್ಷಣೆ

ಸಂಚಾರ ದಟ್ಟಣೆಯ ಸಮಯದಲ್ಲಿ ಬೆಂಗಳೂರಿನ ಪೆಟ್ರೋಲ್ ಕಾರುಗಳು 974 ಕೆಜಿ ಇಂಗಾಲ ಹೊರಹಾಕುತ್ತದೆ (Carbon Emission). 2022 ರಲ್ಲಿ ಹೆಚ್ಚಿನ ಇಂಗಾಲದ ಹೊರಸೂಸುವಿಕೆಯೊಂದಿಗೆ ಅಗ್ರ ಐದು ನಗರಗಳಲ್ಲಿ ಬೆಂಗಳೂರು ಐದನೇ ಸ್ಥಾನದಲ್ಲಿದೆ. ಅಧ್ಯಯನವು ಡೀಸೆಲ್ ಕಾರುಗಳಿಂದ ಹೊರಸೂಸುವಿಕೆಯ ಡೇಟಾವನ್ನು ಬಹಿರಂಗಪಡಿಸಲಿಲ್ಲ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:38 am, Thu, 16 February 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್