ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿದ ಟ್ರಾಫಿಕ್‌ ಫೈನ್‌ ಆಫರ್, 50% ಡಿಸ್ಕೌಂಟ್…ಹತ್ತೇ ದಿನದಲ್ಲಿ 120 ಕೋಟಿ ರೂ. ಕಲೆಕ್ಷನ್‌..!

ಬೆಂಗಳೂರಿನಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ಸಂಬಂಧ ಗಾಡಿ ಹಿಡಿದ್ರು ದಂಡ ಕಟ್ಟಿರಲಿಲ್ಲ. ನೋಟಿಸ್‌ ಕೊಟ್ರೂ ಉತ್ತರ ಇಲ್ಲ. .ಆದ್ರೆ ಆಫರ್‌..ಆಫರ್‌..ಬಿಗ್‌ ಆಫರ್‌ ಎನ್ನುತ್ತಿದ್ದಂತೆ ಸವಾರರು ದಂಡ ಪಾವತಿಸಲು ಮುಗಿಬಿದ್ದಿದ್ರು. ಹಾಗಾದ್ರೆ, 10 ದಿನದಲ್ಲಿ ಸಂಗ್ರಹವಾದ ಹಣವೆಷ್ಟು? ಎಷ್ಟು ಕೇಸ್ ಕ್ಲಿಯರ್ ಆಗಿದ್ದಾವೆ? ಎನ್ನುವ ಡಿಟೇಲ್ಸ್ ಈ ಕೆಳಗಿನಂತಿದೆ ನೋಡಿ.

ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿದ ಟ್ರಾಫಿಕ್‌ ಫೈನ್‌ ಆಫರ್, 50% ಡಿಸ್ಕೌಂಟ್...ಹತ್ತೇ ದಿನದಲ್ಲಿ 120 ಕೋಟಿ ರೂ. ಕಲೆಕ್ಷನ್‌..!
ವಾಹನ ಸವಾರರು ದಂಡ ಕಟ್ಟುತ್ತಿರುವುದು
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Feb 11, 2023 | 11:41 PM

ಬೆಂಗಳೂರು: ಬೆಂಗಳೂರಿನಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ದಂಡಕ್ಕೆ (Bengaluru Traffic Fines)) 50% ಡಿಸ್ಕೌಂಟ್ ಘೋಷಣೆ ಮಾಡಿದ್ದೇ ತಡ ವಾಹನ ಸವಾರರು ಫೈನ್‌ ಪಾವತಿಸುವುದಕ್ಕೆ ಸವಾರರು ಮುಗಿಬಿದ್ದಿದ್ರು. ಟ್ರಾಫಿಕ್‌ ಪೊಲೀಸರು(Bengaluru Traffic Police) ಕಂಡ್ರೆ, ಭಯಗೊಂಡು ಎಸ್ಕೇಪ್ ಆಗುತ್ತಿದ್ದ ಸವಾರರೆಲ್ಲಾ ಕಳೆದ 10 ದಿನದಿಂದ ಪೊಲೀಸರನ್ನೇ ಹುಡುಕಿಕೊಂಡು ಹೋಗಿ ಸರದಿ ಸಾಲಿನಲ್ಲಿ ನಿಂತು ದಂಡ ಪಾವತಿಸಿದ್ದಾರೆ. ಬಹಳ ದಿನಗಳಿಂದ ಹಲವು ಕೇಸ್​ನೊಂದಿಗೆ ಸಾವಿರಾರು ರೂಪಾಯಿ ಬಾಕಿ ಉಳಿಸಿಕೊಂಡಿದ್ದವರು 50 ಪರ್ಸೆಂಟ್ ಆಫರ್​ ಅನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಇನ್ನು ಪೊಲೀಸ್ ಇಲಾಖೆ ಸಹ ರಿಯಾಯಿತಿ ನೀಡಿ ಸರ್ಕಾರದ ಬೊಕ್ಕಸ ತುಂಬಿಸಿದೆ. ಹಾಗಾದ್ರೆ, ಫಿಫ್ಟಿ ಪರ್ಸೆಂಟ್ ಆಫರ್​ನಿಂದ 10 ದಿನಗಳಲ್ಲಿ ದಂಡದ ಹಣ ಹರಿದುಬಂದಿದ್ದು ಬರೋಬ್ಬರಿ 120 ಕೋಟಿ 76 ಲಕ್ಷ 40 ಸಾವಿರದ 161 ರೂ.

ಇದನ್ನೂ ಓದಿ: ಟ್ರಾಫಿಕ್​ ಪೊಲೀಸರ ಕಣ್ತಪ್ಪಿಸಿ ಹೋಗ್ತಿದ್ದವರು ಈಗ ಸರತಿ ಸಾಲಿನಲ್ಲಿ ನಿಂತು ದಂಡ ಕಟ್ಟಲು ಮುಗಿಬಿದ್ದರು, ಎಲ್ಲಾ 50% ಡಿಸ್ಕೌಂಟ್ ಮಹಿಮೆ

ಹೌದು…ಹೆಲ್ಮೆಟ್‌ ಇಲ್ಲದೆ ಪ್ರಯಾಣ, ಸಿಗ್ನಲ್‌ ಜಂಪ್‌, ನೋ ಪಾರ್ಕಿಂಗ್‌ ಉಲ್ಲಂಘನೆ, ಸೀಟ್‌ಬೆಲ್ಟ್ ಅಂತಾ ಸಾರಿಗೆ ನಿಯಮಗಳನ್ನ ಗಾಳಿಗೆ ತೂರಿರೋ ವಾಹನ ಸವಾರರಿಗೆ ಟ್ರಾಫಿಕ್‌ ಪೊಲೀಸರು ದಂಡ ಹಾಕಿದ್ರು . ಈ ದಂಡದ ಮೊತ್ತವೇ ನೂರಾರು ಕೋಟಿಯಾಗಿತ್ತು. ಆದ್ರೆ ಸವಾರರು ಮಾತ್ರ ದಂಡ ಪಾವತಿಸದೇ ತಪ್ಪಿಸಿಕೊಂಡು ಓಡಾಡ್ತಿದ್ರು. ಆದ್ರೆ ಕೋರ್ಟ್‌ ಮೂಲಕ ಆಫರ್‌ಗೆ ಅನುಮತಿ ಪಡೆದ ಟ್ರಾಫಿಕ್‌ ಪೊಲೀಸರು ಭರ್ಜರಿ ವಸೂಲಿ ಮಾಡಿದ್ದಾರೆ. ಹೌದು.. ದಂಡ ಶುಲ್ಕದಲ್ಲಿ ಶೇಕಡಾ 50 ರ ರಿಯಾಯ್ತಿಯನ್ನ ಟ್ರಾಫಿಕ್‌ ಪೊಲೀಸರು ಘೋಷಣೆ ಮಾಡಿದ್ರು. ಫೆಬ್ರವರಿ 2 ರಂದು ಘೋಷಣೆ ಮಾಡ್ತಿದ್ದಂತೆ ದಂಡ ಪಾವತಿಸುವುದಕ್ಕೆ ಸವಾರರು ಮುಗಿ ಬಿದ್ದಿದ್ರು. ಅದರಲ್ಲೂ ಕಡೇ ದಿನವಾದ ಇವತ್ತು ಕ್ಯೂನಲ್ಲಿ ನಿಂತು ಸಾವಿರಾರು ಜನ ಫೈನ್‌ ಕಟ್ಟಿದ್ದಾರೆ.

ಇನ್ನು ಆಫರ್‌ ಘೋಷಣೆ ಮಾಡಿದ ಮೊದಲ ದಿನವೇ ಕೋಟಿ ಕಲೆಕ್ಷನ್‌ ಆಗಿತ್ತು. ಕೊನೆ ದಿನವಾದ ಇವತ್ತು(ಫೆಬ್ರವರಿ 11) 9,45,887 ಪ್ರಕರಣಗಳ ಮೂಲಕ ಬರೋಬ್ಬರಿ 31 ಕೋಟಿ 26 ಲಕ್ಷದ 76 ಸಾವಿರದ 500 ರೂಪಾಯಿ ದಂಡದ ಹಣ ಖಾಕಿ ಖಜಾನೆ ಸೇರಿದೆ.  ಆ ಮೂಲಕ ಹತ್ತೇ ದಿನದಲ್ಲಿ ಬರೋಬ್ಬರಿ 120 ಕೋಟಿ 76 ಲಕ್ಷ 40 ಸಾವಿರದ 161 ರೂ. ದಂಡದ ರೂಪದಲ್ಲಿ ಹಣ ಹರಿದು ಬಂದಿದೆ. ಇವತ್ತು ರಾತ್ರಿ 12 ಗಂಟೆವರೆಗೂ ಆನ್‌ಲೈನ್‌ನಲ್ಲಿ ಪಾವತಿಸಲು ಅನುಮತಿ ಇದೆ. ಹೀಗಾಗಿ ಒಟ್ಟು ಎಷ್ಟು ಸಂಗ್ರಹ ಆಯ್ತು ಎನ್ನುವುದು ನಾಳೆ(ಫೆಬ್ರವರಿ 12) ಪಕ್ಕಾ ಲೆಕ್ಕ ಸಿಗಲಿದೆ. ಇನ್ನು ಟ್ರಾಫಿಕ್‌ ನಿಯಮ ಉಲ್ಲಂಘನೆಯಲ್ಲಿ ರಾಜ್ಯದಲ್ಲಿ 2 ಕೋಟಿಗೂ ಹೆಚ್ಚು ಕೇಸ್‌ಗಳಿವೆ. ಈ ಆಫರ್‌ನಿಂದಾಗಿ ಒಟ್ಟು 41 ಲಕ್ಷ 20 ಸಾವಿರದ 626 ಪ್ರಕರಣಗಳಲ್ಲಿ ದಂಡ ವಸೂಲಿ ಮಾಡಲಾಗಿದೆ.

ಇದನ್ನೂ ಓದಿ: ತಮ್ಮ ದ್ವಿಚಕ್ರ ವಾಹನ ಮೌಲ್ಯದಷ್ಟೇ ಇದ್ದ ದಂಡವನ್ನು 50% ಆಫರ್​ನೊಂದಿಗೆ 14,500 ರೂ. ಪಾವತಿಸಿ ಕೇಸ್ ಕ್ಲಿಯರ್ ಮಾಡಿಕೊಂಡ ಮಹಾಶಯ

ಯಾವ ಏರಿಯಾ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ನೋಡಿದ್ರೂ ಕ್ಯೂ. ನಮ್ದ್‌ ಎಷ್ಟಿದೆ ನೋಡಿ ಸರ್ ಎಂದು ಕೆಲವರು ಆತಂಕದಿಂದಲೇ ಕೇಳುತ್ತಿದ್ರೆ, ಇನ್ನು ಕೆಲವರು ಕ್ಲೀಯರ್‌ ಆಯ್ತಾ ಸಾರ್‌ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಇದರ ನಡುವೆ ಕೆಲವರು ಮಾರುದ್ದದ ಫೈನ್‌ ಲೀಸ್ಟ್‌ ಹಿಡಿದು ಜೇಬಲ್ಲಿನ ಹಣ ಖಾಲಿ ಮಾಡಿಕೊಂಡಿದ್ದಾರೆ. ಅಂತಿಮವಾಗಿ ಟ್ರಾಫಿಕ್‌ ಫೈನ್‌ ಆಫರ್‌ ಪೊಲೀಸರ ಬಾಕ್ಸ್‌ ಆಫೀಸ್‌ ಧೂಳೆಬ್ಬಿಸಿದಂತೂ ಸತ್ಯ.

ಕಾನೂನು ಇಲಾಖೆ ಅಧಿಕಾರಿಗಳ ಒಪ್ಪಿಗೆ ಪಡೆದು ಆಫರ್ ಘೋಷಣೆ

ಹೈಕೋರ್ಟ್ ನ್ಯಾಯಾಧೀಶರು ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ನ್ಯಾ.ಬಿ. ವೀರಪ್ಪ ಅವರ ಅಧ್ಯಕ್ಷತೆಯಲ್ಲಿ ಜ.27ರಂದು ನಡೆದ ಸಭೆಯಲ್ಲಿ ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಬಾಕಿ ಇರುವ ಟ್ರಾಫಿಕ್ ದಂಡ ಪಾವತಿಗೆ ವಿನಾಯಿತಿ ನೀಡುವಂತೆ ಚರ್ಚೆ ನಡೆಸಿದ್ದರು. ಇದಕ್ಕೆ ರಾಜ್ಯ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಅನುಮತಿ ನೀಡಿದ್ದರು. ಇದರ ಮೇರೆಗೆ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯಾದ್ಯಂತ ಸಂಚಾರ ಪೊಲೀಸರು ದಾಖಲಿಸಿರುವ ಸಂಚಾರ ಉಲ್ಲಂಘನೆ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50 ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಬಗ್ಗೆ ಕಾನೂನು ಇಲಾಖೆ ಅಧಿಕಾರಿಗಳ ಒಪ್ಪಿಗೆ ಪಡೆದ ಸಾರಿಗೆ ಇಲಾಖೆ, ಶೇ.50 ವಿನಾಯಿತಿ ನೀಡಿತ್ತು.

ಒಟ್ಟಿನಲ್ಲಿ ಫೈನ್‌ ಕಟ್ಟಬೇಕಾಗುತ್ತೆ ಎಂದು ತಪ್ಪಿಸಿಕೊಂಡು ಓಡಾಡುತ್ತಿದ್ದ ವಾಹನ ಸವಾರರು, ಕಳೆದ 10 ದಿನಗಳಿಂದ ಮಾತ್ರ ಪೊಲೀಸರನ್ನ ಹುಡುಕಿಕೊಂಡು ಹೋಗಿ ದಂಡ ಪಾವತಿಸಿದ್ದಾರೆ. ಈ ಆಫರ್ ಅವಧಿ ಇವತ್ತಿಗೆ ಅಂತ್ಯವಾಗಿದೆ. ಆದ್ರೆ, ಇದಕ್ಕೆ ಬಂದ ಭರ್ಜರಿ ರೆಸ್ಪಾನ್ಸ್​ನಿಂದ ಇದನ್ನ ವಿಸ್ತಾರಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ.

Published On - 11:38 pm, Sat, 11 February 23

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?