ಬೆಂಗಳೂರು: ಜೆಡಿಎಸ್ ಜಿಲ್ಲಾಧ್ಯಕ್ಷನ ಹೆಸರಲ್ಲಿ ಯುವತಿಗೆ ವಂಚನೆ ಆರೋಪ; ಮನೆಗೆ ನುಗ್ಗಿ ಧರ್ಮದೇಟು ಕೊಟ್ಟ ಯುವತಿ
ಉತ್ತರ ಕನ್ನಡ ಜೆಡಿಎಸ್ ಮುಖಂಡ ಎಂದು ಹೇಳಿಕೊಂಡು ಕೊಲ್ಕತ್ತಾ ಮೂಲದ ಯುವತಿಯನ್ನ ದೈಹಿಕವಾಗಿ ಬಳಸಿಕೊಂಡು, ಜೊತೆಗೆ ಆಕೆಯಿಂದ 20 ಲಕ್ಷ ಹಣವನ್ನ ತೆಗೆದುಕೊಂಡು ಇದೀಗ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಯುವತಿ ಠಾಣೆ ಮೆಟ್ಟಿಲೇರಿದ್ದಾಳೆ.
ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಜೆಡಿಎಸ್ ಮುಖಂಡ ಎಂದು ಹೇಳಿಕೊಂಡಿದ್ದ ಜಿ.ಕೆ. ಗೌಡ ಎಂಬಾತ, ಲೈವ್ ಬ್ಯಾಂಡ್ನಲ್ಲಿ ಕೆಲಸ ಮಾಡಿಕೊಂಡಿದ್ದ ಕೊಲ್ಕತ್ತಾ ಮೂಲದ ಯುವತಿಯ ಜೊತೆ 8 ವರ್ಷದಿಂದ ಜೊತೆಗಿದ್ದು, ಯುವತಿಯನ್ನು ಮದುವೆ ಆಗುವುದಾಗಿ ನಂಬಿಸಿ, ದೈಹಿಕವಾಗಿ ಬಳಸಿಕೊಂಡಿದ್ದಾನಂತೆ. ಜೊತೆಗೆ ಆಕೆಯಿಂದ 20 ಲಕ್ಷ ಹಣ ತೆಗೆದುಕೊಂಡು ಇದೀಗ ಯುವತಿಗೆ ಮೋಸ ಮಾಡಿದ್ದಾನೆ ಎಂದು ಯುವತಿ ಆರೋಪಿಸಿ ಜಿ.ಕೆ.ಗೌಡ ವಿರುದ್ದ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಇನ್ನು ಮೂರು ಬಾರಿ ಅಬಾರ್ಷನ್ ಮಾಡಿರೋದಾಗಿ ಮಹಿಳೆ ಆರೋಪಿಸಿದ್ದು, ಅಲ್ಲದೆ ಆರೋಪಿ ರೂಮ್ ಮೇಟ್ಗಳಿಗೆ ಯುವತಿ ನಂಬರ್ ನೀಡಿ ಅವಾಚ್ಯ ಪದಗಳಿಂದ ನಿಂದನೆ ಮಾಡಿಸುತ್ತಿದ್ದನಂತೆ. ನಿನ್ನೆ ಸಂತ್ರಸ್ಥ ಯುವತಿ ಸಂಘಟನೆ ಸಹಾಯದೊಂದಿಗೆ ಜಿ.ಕೆ.ಗೌಡ ವಾಸ ಇರುವ ಬಾಡಿಗೆ ಮನೆಗೆ ಯುವತಿ ನ್ಯಾಯ ಕೇಳಲು ಹೋದ ವೇಳೆ ಗಲಾಟೆಯಾಗಿದ್ದು, ಆತನಿಗೆ ಧರ್ಮದೇಟು ಕೊಟ್ಟಿದ್ದಾಳೆ. ಸದ್ಯ ಸಂತ್ರಸ್ಥ ಯುವತಿಯಿಂದ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಾಗಿದ್ದು, ತನಿಖೆ ನಂತರ ಸತ್ಯಾಂಶ ಹೊರಬೀಳಲಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ