ಟ್ರಾಫಿಕ್ ಪೊಲೀಸರ ಕಣ್ತಪ್ಪಿಸಿ ಹೋಗ್ತಿದ್ದವರು ಈಗ ಸರತಿ ಸಾಲಿನಲ್ಲಿ ನಿಂತು ದಂಡ ಕಟ್ಟಲು ಮುಗಿಬಿದ್ದರು, ಎಲ್ಲಾ 50% ಡಿಸ್ಕೌಂಟ್ ಮಹಿಮೆ
ಸಂಚಾರಿ ನಿಯಮ ಉಲ್ಲಂಘಿಸಿ ಟ್ರಾಫಿಕ್ ಪೊಲೀಸರಿಂದ ಕಣ್ತಪ್ಪಿಸಿ ಹೋಗ್ತಿದ್ದವರು ಈಗ ರಾಜಾರೋಷವಾಗಿ ಅವರ ಮುಂದೆಯೇ ಸರದಿ ಸಾಲಿನಲ್ಲಿ ನಿಂತು ದಂಡ ಪಾವತಿಸಿಸಲು ಮುಗಿಬಿದ್ದಿದ್ದಾರೆ. ಎಲ್ಲಾ ಎಲ್ಲಾ 50% ಡಿಸ್ಕೌಂಟ್ ಮಹಿಮೆ.
ಬೆಂಗಳೂರು: 50% ಡಿಸ್ಕೌಂಟ್ ಬೋರ್ಡನ್ನ ದೊಡ್ಡ ದೊಡ್ಡ ಮಾಲ್‌ಗಳು, ಬಟ್ಟೆ ಅಂಗಡಿಗಳಲ್ಲಿ ಮಾತ್ರ ನೋಡಿರ್ತೀರಾ. ಆದ್ರೆ ಸರ್ಕಾರದ ಮಟ್ಟದಲ್ಲೂ 50% ಡಿಸ್ಕೌಂಟ್ ಸಿಗ್ತಿದೆ ಅಂದ್ರೆ ನೀವು ನಂಬ್ತೀರಾ? ಖಂಡಿತ ನಂಬಲೇ ಬೇಕು.ಇದೇ 50% ಆಫರ್ ಲಾಭ ಪಡೆಯಲು ಜನ ಮುಗಿಬಿದ್ದಿದ್ದಾರೆ. ಬೆಂಗಳೂರಿನಲ್ಲಿ ಸಂಚಾರ ನಿಯಮಗಳ ರಿಯಾಯಿತಿ ದಂಡ (Bengaluru Traffic Fines) ಪಾವತಿಗೆ ಇಂದು(ಫೆಬ್ರವರಿ 11) ಕೊನೆಯ ದಿನವಾದ ಹಿನ್ನೆಲೆಯಲ್ಲಿ ವಾಹನ ಸವಾರರು ದಂಡ ಕಟ್ಟಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದಿದ್ದಾರೆ. ಸಂಚಾರಿ ನಿಯಮ(Bengaluru Traffic Rules) ಉಲ್ಲಂಘಿಸಿ ಟ್ರಾಫಿಕ್ ಪೊಲೀಸರಿಂದ ಕಣ್ತಪ್ಪಿಸಿ ಹೋಗ್ತಿದ್ದವರು ಈಗ ರಾಜಾರೋಷವಾಗಿ ಅವರ ಮುಂದೆಯೇ ಸರದಿ ಸಾಲಿನಲ್ಲಿ ನಿಂತು ದಂಡ ಪಾವತಿಸಿಸುತ್ತಿದ್ದಾರೆ. ಎಲ್ಲಾ 50 ಪರ್ಸೆಂಟ್ ಆಫರ್ ಮಹಿಮೆ.
ಇದನ್ನೂ ಓದಿ: ಟ್ರಾಫಿಕ್ ರೂಲ್ಸ್ ಉಲ್ಲಂಘನೆ: ದಂಡಕ್ಕೆ 50% ಡಿಸ್ಕೌಂಟ್, 8 ದಿನದಲ್ಲಿ 85.83 ಕೋಟಿ ರೂ. ಹಣ ಸಂಗ್ರಹ
ಹೌದು.. ಟಿಎಂಸಿ ಕೇಂದ್ರದಲ್ಲಿ ವಾಹನ ಸವಾರರು ದಂಡ ಕಟ್ಟಲು ಸರದಿ ಸಾಲಿನಲ್ಲಿ ನಿಂತಿದ್ದಾರೆ. ಇದರಿಂದ ಪೊಲೀಸರು ಟಿಎಂಸಿಯಲ್ಲಿ ದಂಡ ಪಾವತಿಗೆ ಪ್ರತ್ಯೇಕ ಟೇಬಲ್ ಗಳ ವ್ಯವಸ್ಥೆ ಮಾಡಿದ್ದು, ದೂರು ಪರಿಶೀಲನೆ ನಡೆಸಿ ದಂಡ ಕಟ್ಟಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ದಂಡದ ಮೊತ್ತ ನೂರು ಕೋಟಿ ರೂಪಾಯಿ ಗಡಿ ದಾಟಿದೆ. ಇನ್ನು ಸ್ವಲ್ಪ ಹೊತ್ತ ಸಮಯ ಇದ್ದ ಕಾರಣ ದಾಖಲೆಯ ಮಟ್ಟದಲ್ಲಿ ದಂಡ ಪಾವತಿ ಅಗುವ ನಿರೀಕ್ಷೆ ಇದೆ.
8ನೇ ದಿನವಾದ ನಿನ್ನೆ(ಫೆಬ್ರವರಿ 10) 67, 0602 ಪ್ರಕರಣಗಳಲ್ಲಿ 17.61 ಕೋಟಿ ರೂಪಾಯಿ ದಂಡದ ಹಣ ಸಂಗ್ರಹವಾಗಿದೆ. ಇದರೊಂದಿಗೆ ಎಂಟು ದಿನದಲ್ಲಿ 31.11 ಲಕ್ಷ ಪ್ರಕರಣಗಳಲ್ಲಿ ಒಟ್ಟು 85.83 ಕೋಟಿ ರೂಪಾಯಿ ಹಣ ಕಲೆಕ್ಷನ್ ಆಗಿದೆ. 50% ರಿಯಾಯಿತಿಯಲ್ಲಿ ದಂಡ ಪಾವತಿಗೆ ಕೊನೆ ದಿನ ಸಮೀಪಿಸುತ್ತಿದ್ದಂತೆಯೇ ಸಂಚಾರ ನಿಮಯ ಉಲ್ಲಂಘಿಸಿದ ವಾಹನ ಸವಾರರು ಕಳೆದ ಎರಡು ದಿನಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ದಂಡ ಪಾವತಿ ಮಾಡುತ್ತಿದ್ದಾರೆ.
ಹೈಕೋರ್ಟ್ ನ್ಯಾಯಾಧೀಶರು ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ನ್ಯಾ.ಬಿ. ವೀರಪ್ಪ ಅವರ ಅಧ್ಯಕ್ಷತೆಯಲ್ಲಿ ಜ.27ರಂದು ನಡೆದ ಸಭೆಯಲ್ಲಿ ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಬಾಕಿ ಇರುವ ಟ್ರಾಫಿಕ್ ದಂಡ ಪಾವತಿಗೆ ವಿನಾಯಿತಿ ನೀಡುವಂತೆ ಚರ್ಚೆ ನಡೆಸಿದ್ದರು. ಇದಕ್ಕೆ ರಾಜ್ಯ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಅನುಮತಿ ನೀಡಿದ್ದರು. ಇದರ ಮೇರೆಗೆ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯಾದ್ಯಂತ ಸಂಚಾರ ಪೊಲೀಸರು ದಾಖಲಿಸಿರುವ ಸಂಚಾರ ಉಲ್ಲಂಘನೆ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50 ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಬಗ್ಗೆ ಕಾನೂನು ಇಲಾಖೆ ಅಧಿಕಾರಿಗಳ ಒಪ್ಪಿಗೆ ಪಡೆದ ಸಾರಿಗೆ ಇಲಾಖೆ, ಶೇ.50 ವಿನಾಯಿತಿ ನೀಡಿದೆ.