Animal Ambulance: ಬೆಂಗಳೂರಿನಲ್ಲಿ ಪ್ರಾಣಿಗಳಿಗೆ ಆಂಬ್ಯುಲೆನ್ಸ್ ಸೇವೆ, ಸಹಾಯವಾಣಿ ಆರಂಭ
ಫೆಬ್ರವರಿ 14 ರಂದು ಪ್ರಾರಂಭವಾಗಲಿರುವ ಆಂಬ್ಯುಲೆನ್ಸ್‌ಗಳು ದಕ್ಷಿಣ ಬೆಂಗಳೂರಿನಲ್ಲಿ (Bengaluru South) ಇರಲಿದ್ದು, ನಗರದಾದ್ಯಂತದ ದೂರುಗಳನ್ನು ಸ್ವೀಕರಿಸಲಾಗುತ್ತದೆ. ಪ್ರಾಣಾ ಅನಿಮಲ್ ಫೌಂಡೇಶನ್ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲು ನಾಲ್ಕು ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಲ್ಲದೇ ದಿನದ 24 ಗಂಟೆ ಪಶುವೈದ್ಯಕೀಯ ಚಿಕಿತ್ಸಾಲಯವನ್ನು ಪ್ರಾರಂಭಿಸುವ ಚಿಂತನೆ ನಡೆದಿದೆ
ಬೆಂಗಳೂರು: ಬೆಂಗಳೂರು ನಗರದಲ್ಲಿ ಪ್ರಾಣಿಗಳ ತುರ್ತು ಚಿಕಿತ್ಸೆಗೆ ಪ್ರಾಣಾ ಅನಿಮಲ್ ಫೌಂಡೇಶನ್ (Prana Animal Foundation), ಒಂದು ವಿಶಿಷ್ಟವಾದ ಸೇವೆಯನ್ನು ಜಾರಿಗೊಳಿಸಲು ಮುಂದಾಗಿದೆ. ಗಾಯಗೊಂಡ ಪ್ರಾಣಿಗಳ ತುರ್ತು ಸೇವೆಗಾಗಿ ಪ್ರಾಣಾ ಅನಿಮಲ್ ಫೌಂಡೇಶನ್ ದಿನದ 24ಗಂಟೆ ಆಂಬ್ಯುಲೆನ್ಸ್(Ambulance) ಸೇವೆ ಮತ್ತು ಸಹಾಯವಾಣಿಯನ್ನು ಆರಂಭಿಸಿತ್ತಿದೆ. ಇದರಿಂದ ಅಪಘಾತಕ್ಕೀಡಾದ ಅಥವಾ ತುರ್ತು ಚಿಕೆತ್ಸೆ ಅಗತ್ಯವಿರುವ ಪ್ರಾಣಿಗಳಿಗೆ ಸಹಾಯಕವಾಗಲಿದೆ. ಅಂಬ್ಯುಲೆನ್ಸ್ ಇಲ್ಲದೇ ಪ್ರಾಣಿಗಳಿಗೆ ಸರಿಯಾದ ಚಿಕಿತ್ಸೆ ವ್ಯವಸ್ಥೆ ಇಲ್ಲದ ಕಾರಣ ಈ ಸೇವೆಯನ್ನು ಪ್ರಾರಂಭಿಸಲಾಗುತ್ತಿದೆ.
ಪಶುಸಂಗೋಪನಾ ಕೇಂದ್ರಗಳು ಉತ್ತರ ಅಥವಾ ಪೂರ್ವ ಬೆಂಗಳೂರಿನಲ್ಲಿ ಹೆಚ್ಚಿವೆ. ಇದರಿಂದ ಪ್ರಾಣಿಗಳ ತುರ್ತು ಚಿಕಿತ್ಸೆ ಅಥವಾ ಆರೈಕೆಗೆ ವಿಳಂಬದಿಂದಾಗಿ ಅನೇಕ ಪ್ರಾಣಿಗಳು ಸಾಯುತ್ತಿವೆ. ಈ ತೊಂದರೆಯನ್ನು ಪರಿಹರಿಸಲು ನಮ್ಮ ಫೌಂಡೇಷನ್ ಈ ಯೋಜನೆಯನ್ನು ಜಾರಿಗೊಳಿಸಿದೆ ಎಂದು ಪ್ರಾಣಾ ಅನಿಮಲ್ ಫೌಂಡೇಶನ್ ಸಂಸ್ಥಾಪಕಿ ಸಂಯುಕ್ತ ಹೊರನಾಡು (Samyukta Hornad)ತಿಳಿಸಿದರು.
ಪ್ರಾಣಿಗಳಿಗೆ ಅಪಘಾತಗಳು ಆದಾಗ ಕರೆ ಮಾಡಿ ತಿಳಿಸಲು ಪಶು ಸಂಗೋಪನಾ ಕೇಂದ್ರಗಳು ಇವೆ. ಇವು ದಿನಕ್ಕೆ50 ಕರೆಗಳನ್ನು ಸ್ವೀಕರಿಸುತ್ತವೆ. ಆದರೆ ಅವುಗಳಲ್ಲಿ ಹೆಚ್ಚಿನವು ಸೌಲಭ್ಯಗಳ ಕೊರತೆ ಇರುತ್ತವೆ. ಹೀಗಾಗಿ ದೊಡ್ಡ-ದೊಡ್ಡ ಪ್ರಾಣಿಗಳನ್ನು ಆರೈಕೆ ಕೇಂದ್ರಗಳಿಗೆ ಸಾಗಿಸುವುದು ಸವಾಲಿನ ಕೆಲಸ. ಆದ್ದರಿಂದ ದೊಡ್ಡ ಆಂಬ್ಯುಲೆನ್ಸ್ ಸೇವೆ ನೀಡಲಾಗುತ್ತಿದೆ ಎಂದು ಸಂಯುಕ್ತ ಮಾಹಿತಿ ನೀಡಿದರು.
ಇದನ್ನೂ ಓದಿ: ಕೊತ್ತನೂರಿನಲ್ಲಿ ಅಂಗವಿಕಲರಿಂದ ತೋಟಗಾರಿಕೆ ಮೇಳ: 300 ಕ್ಕೂ ಹೆಚ್ಚು ಸಾವಯವ ಸಸ್ಯಗಳ ಪ್ರರ್ದಶನ
ಫೆಬ್ರವರಿ 14 ರಂದು ಪ್ರಾರಂಭವಾಗಲಿರುವ ಆಂಬ್ಯುಲೆನ್ಸ್‌ಗಳು ದಕ್ಷಿಣ ಬೆಂಗಳೂರಿನಲ್ಲಿ (Bengaluru South) ಇರಲಿದ್ದು, ನಗರದಾದ್ಯಂತದ ದೂರುಗಳನ್ನು ಸ್ವೀಕರಿಸಲಾಗುತ್ತದೆ. ಪ್ರಾಣಾ ಅನಿಮಲ್ ಫೌಂಡೇಶನ್ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲು ನಾಲ್ಕು ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಲ್ಲದೇ ದಿನದ 24 ಗಂಟೆ ಪಶುವೈದ್ಯಕೀಯ ಚಿಕಿತ್ಸಾಲಯವನ್ನು ಪ್ರಾರಂಭಿಸುವ ಚಿಂತನೆ ನಡೆದಿದೆ ಎಂದರು.