Kothnur: ಕೊತ್ತನೂರಿನಲ್ಲಿ ಅಂಗವಿಕಲರಿಂದ ತೋಟಗಾರಿಕೆ ಮೇಳ: 300 ಕ್ಕೂ ಹೆಚ್ಚು ಸಾವಯವ ಸಸ್ಯಗಳ ಪ್ರರ್ದಶನ
ದಿ ಅಸೋಸಿಯೇಷನ್ ಆಫ್ ಪೀಪಲ್ ವಿಥ್ ಡಿಸಬಿಲಿಟಿ (ADP) ಯ ತೋಟಗಾರಿಕೆ ಜೀವನೋಪಾಯ ಕಾರ್ಯಕ್ರಮದ ಅಡಿಯಲ್ಲಿ ತರಬೇತಿ ಪಡೆದ 35 ವಿಕಲಾಂಗ ವ್ಯಕ್ತಿಗಳಿಂದ ಮಾರಾಟ ಮತ್ತು ಗ್ರಾಹಕರ ಸಂವಹನವನ್ನು ನಿರ್ವಹಿಸಲಾಗುತ್ತಿದೆ.
ಕೊತ್ತನೂರು: ದಿ ಅಸೋಸಿಯೇಷನ್ ಆಫ್ ಪೀಪಲ್ ವಿಥ್ ಡಿಸಬಿಲಿಟಿ (ADP) ತಮ್ಮ ಕೊತ್ತನೂರು ಕೇಂದ್ರದಲ್ಲಿ ವಾರ್ಷಿಕ ತೋಟಗಾರಿಕಾ ಮೇಳವನ್ನು (Horticulture Fair) ಆಯೋಜಿಸಿದೆ. 336 ವಿಧದ ಸಾವಯವ ಸಸ್ಯಗಳ ಮಾರಾಟಕ್ಕೆ ಮುಂದಾಗಿದೆ. ದಿ ಅಸೋಸಿಯೇಷನ್ ಆಫ್ ಪೀಪಲ್ ವಿಥ್ ಡಿಸಬಿಲಿಟಿ (ADP) ಯ ತೋಟಗಾರಿಕೆ ಜೀವನೋಪಾಯ ಕಾರ್ಯಕ್ರಮದ ಅಡಿಯಲ್ಲಿ ತರಬೇತಿ ಪಡೆದ 35 ಅಂಗವಿಕಲರಿಂದ ಮಾರಾಟ ಮತ್ತು ಗ್ರಾಹಕರ ಸಂವಹನವನ್ನು ನಿರ್ವಹಿಸಲಾಗುತ್ತಿದೆ. ಪ್ರತಿ ವರ್ಷ ಒಟ್ಟು 185 ಅಂಗವಿಕಲರಿಗೆ ತರಬೇತಿ ನೀಡಲಾಗುತ್ತದೆ.
ಮೇಳದಲ್ಲಿ 10 ಹೊಸ ತಳಿಗಳು ಸೇರಿದಂತೆ 86 ಬಗೆಯ ಔಷಧೀಯ ಮತ್ತು ಸುಗಂಧ ಸಸ್ಯಗಳ ಜೊತೆಗೆ 250 ವಿಧದ ಅಲಂಕಾರಿಕ ಸಸ್ಯಗಳನ್ನು ಪ್ರದರ್ಶಿಸಲಾಗುತ್ತದೆ. ತೋಟಗಾರಿಕಾ ಮೇಳಕ್ಕಾಗಿ ಸುಮಾರು 90000 ಗಿಡಗಳನ್ನು ಸಿದ್ಧಪಡಿಸಲಾಗಿದೆ. ಸಾರ್ವಜನಿಕರಿಗೆ ಮೂರು ಗಂಟೆಗಳ ಕಾಲ ತೋಟಗಾರಿಕಾ ಕಾರ್ಯಾಗಾರವೂ ನಡೆಯಲಿದೆ.
ಈ ತೋಟಗಾರಿಕಾ ಮೇಳವು ಶುಕ್ರವಾರ (ಫೆಬ್ರವರಿ 10) ಪ್ರಾರಂಭವಾಗಿ ಫೆಬ್ರವರಿ 19 ರವರೆಗೆ ನಡೆಯಲಿದೆ. ಇದರ ಆದಾಯವು ಎಪಿಡಿ ಯ ತೋಟಗಾರಿಕೆ ಕಾರ್ಯಕ್ರಮಕ್ಕೆ ಹನೀಡಲಾಗುವುದ. ಇದು ಟ್ರೈನಿಗಳನ್ನ ನೇಮಿಸಲೂ ಸಹಕಾರಿಯಾಗಲಿದೆ ಎಂದು ಎಪಿಡಿಯ ಹಿರಿಯ ವ್ಯವಸ್ಥಾಪಕಿ ಯಶೋಧಾ ಪಾಟೀಲ ಹೇಳಿದರು. “ಇಲ್ಲಿರುವ ಹಲವು ಅಂಗವಿಕಲರು ಶಾಲೆಗೆ ಹೋಗಿಲ್ಲ. ತೋಟಗಾರಿಕೆ ತರಬೇತಿಗೆ ಯಾವುದೇ ಶೈಕ್ಷಣಿಕ ಅರ್ಹತೆಯ ಅಗತ್ಯವಿಲ್ಲದ ಕಾರಣ ಇದು ಅಂಗವಿಕಲರಿಗೆ ಬಹಳ ಸಹಾಯವಾಗುತ್ತದೆ. ಅದಲ್ಲದೆ ಈ ವಿಭಾಗದಲ್ಲಿ ತೋಟಗಾರಿಕೆಗೆ ಬಹಳಷ್ಟು ಬೇಡಿಕೆಯಿದೆ” ಎಂದು ಯಶೋಧ ತಿಳಿಸಿದರು.
ಚಾಮರಾಜನಗರ ಜಿಲ್ಲೆಯಿಂದ ಬಂದಿರುವ 38 ವರ್ಷದ ಅಂಗವಿಕಲ ಮಹದೇವಸ್ವಾಮಿ ಪ್ರೋಗ್ರಾಮ್ ಟ್ರೈನಿ. ಈಗ ಕೆಲಸ ಸಿಕ್ಕಿಲ್ಲವಾದರೂ ನೇಮಕಗೊಳ್ಳುವ ಭರವಸೆ ಇದೆ ಎಂದು ಹೇಳಿದರು. ತರಬೇತಿ ಪಡೆಯುವವರಿಗೆ ಕೌಶಲ್ಯದ ಆಧಾರದ ಮೇಲೆ 20,000 ರೂ. ಕೊಡಲಾಗುವುದು.
ಮೇಳವನ್ನು ಉದ್ಘಾಟಿಸಿದ ಫ್ಲಿಪ್‌ಕಾರ್ಟ್ ಸಿಇಒ ನಿಪುನ್ ಶರ್ಮಾ (Flipkart CEO, Nipun Sharma) ಅವರು ತಮ್ಮ ಕಂಪನಿಯು ಎಪಿಡಿ ಟ್ರೈನಿಗಳನ್ನು ನೇಮಿಸಿಕೊಳ್ಳಲಿದೆ ಎಂದು ತಿಳಿಸಿದರು. ಜುನಿಪರ್ ನೆಟ್‌ವರ್ಕ್‌ನ (Jupiter Network) ಗುರುಮೂರ್ತಿ ಮಾತೃಭೂತಮ್ (Gurumurthy Mathrubhumi), ತಮ್ಮ ಕಂಪನಿಯು ಹೊಸೂರಿನ (Hosur) ಹಸಿರೀಕರಣ ಯೋಜನೆಗಳಿಗೆ ಮೇಳದಿಂದ ಹಣ್ಣಿನ ಮರಗಳನ್ನು ಖರೀದಿಸುತ್ತಿದೆ ಎಂದು ಹೇಳಿದರು.