Bangalore Aero India 2023: ಯಲಹಂಕ ವಾಯುನೆಲೆಯಲ್ಲಿ ಅಂತಿಮ ಹಂತದ ರಿಹರ್ಸಲ್

Bangalore Aero India 2023: ಯಲಹಂಕ ವಾಯುನೆಲೆಯಲ್ಲಿ ಅಂತಿಮ ಹಂತದ ರಿಹರ್ಸಲ್

TV9 Web
| Updated By: ಆಯೇಷಾ ಬಾನು

Updated on:Feb 11, 2023 | 1:08 PM

ಯಲಹಂಕ ವಾಯುನೆಲೆಯಲ್ಲಿ ಇಂದು ಅಂತಿಮ ಹಂತದ ಅಭ್ಯಾಸ ನಡೆಯುತ್ತಿದ್ದು ಫೆ.13ರಿಂದ ಫೆ.17ರ ವರೆಗೆ ಏರ್ ಶೋ ನಡೆಯಲಿದೆ.

ಬೆಂಗಳೂರಿನಲ್ಲಿ 14ನೇ ಆವೃತ್ತಿಯ ಏರ್​​ಶೋ-2023ಕ್ಕೆ ಕ್ಷಣಗಣನೆ ಶುರುವಾಗಿದೆ. ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ ಉದ್ಘಾಟನೆ ಮಾಡಲು ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಯಲಹಂಕ ವಾಯುನೆಲೆಯಲ್ಲಿ ಇಂದು ಅಂತಿಮ ಹಂತದ ಅಭ್ಯಾಸ ನಡೆಯುತ್ತಿದ್ದು ಫೆ.13ರಿಂದ ಫೆ.17ರ ವರೆಗೆ ಏರ್ ಶೋ ನಡೆಯಲಿದೆ.

ಭಾರತದ ಅತಿದೊಡ್ಡ ವೈಮಾನಿಕ ಪ್ರದರ್ಶನಕ್ಕೆ ದ್ವಿಪಕ್ಷೀಯ ಬೆಂಬಲ ನೀಡುವ ದಿಸೆಯಲ್ಲಿ ಅಮೆರಿಕದ ವಾಯುಪಡೆಯ ಏಳು ಸದಸ್ಯರ ಬ್ಯಾಂಡ್‌ ʻಫೈನಲ್‌ ಅಪ್ರೋಚ್‌ʼ ಫೆಬ್ರುವರಿ 16ರಂದು ಏರೋ ಇಂಡಿಯಾದಲ್ಲಿ ಸಾರ್ವಜನಿಕರಿಗಾಗಿ ಹಾಗೂ ಇಡೀ ವಾರ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಲಿದೆ.

Published on: Feb 11, 2023 01:05 PM