Karnataka Budget 2022: ಕರ್ನಾಟಕ ಸರ್ಕಾರಕ್ಕೆ ಬರುವ ಅಂದಾಜು ಆದಾಯ, ವ್ಯಯದ ಲೆಕ್ಕಾಚಾರ ಇಲ್ಲಿದೆ

| Updated By: Srinivas Mata

Updated on: Mar 04, 2022 | 3:18 PM

ಕರ್ನಾಟಕ ರಾಜ್ಯ ಬಜೆಟ್​ 2022ರ ಆದಾಯ ಹಾಗೂ ವೆಚ್ಚದ ಅಂದಾಜು ಪಟ್ಟಿ ಇಲ್ಲಿದೆ. ಯಾವುದರ ಮೂಲಕ ಆದಾಯ ಬರಬಹುದು ಹಾಗೂ ವೆಚ್ಚ ಆಗಬಹುದು ಎಂಬ ವಿವರಣೆ ಇದು.

Karnataka Budget 2022: ಕರ್ನಾಟಕ ಸರ್ಕಾರಕ್ಕೆ ಬರುವ ಅಂದಾಜು ಆದಾಯ, ವ್ಯಯದ ಲೆಕ್ಕಾಚಾರ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಕರ್ನಾಟಕ ರಾಜ್ಯ ಬಜೆಟ್ 2022 (Karnataka Budget) ಅನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾರ್ಚ್ 4ನೇ ತಾರೀಕಿನ ಶುಕ್ರವಾರದಂದು 2,65,720 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದಾರೆ. ಇದರಲ್ಲಿ ಒಟ್ಟು ಸ್ವೀಕೃತಿ 2,61,972 ಕೋಟಿ ರೂ., ರಾಜಸ್ವ ಸ್ವೀಕೃತಿ 1,89,888 ಕೋಟಿ ರೂಪಾಯಿ, ಸಾರ್ವಜನಿಕ ಸಾಲ 72 ಸಾವಿರ ಕೋಟಿ ರೂಪಾಯಿ ಸೇರಿದಂತೆ ಬಂಡವಾಳ ಸ್ವೀಕೃತಿ 72,009 ಕೋಟಿ ರೂಪಾಯಿ ಅಂದಾಜಿಸಿದ್ದಾರೆ. ಇನ್ನು ವೆಚ್ಚದ ಕಡೆಗೆ ನೋಡಿದರೆ 2,65,720 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ರಾಜಸ್ವ ವೆಚ್ಚ 2,04,587 ಕೋಟಿ, ಬಂಡವಾಳ ವೆಚ್ಚ 46,595 ಕೋಟಿ ರೂಪಾಯಿ ಹಾಗೂ ಸಾಲ ಮರುಪಾವತಿಗೆ 14,179 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ರಾಜ್ಯ ಸರ್ಕಾರಕ್ಕೆ ಯಾವುದರ ಮೂಲಕ ಎಷ್ಟು ಆದಾಯ ಬರುತ್ತದೆ ಹಾಗೂ ವೆಚ್ಚ ಆಗುತ್ತದೆ ಎಂಬುದರ ಅಂದಾಜು ಪಟ್ಟಿ ಇಲ್ಲಿದೆ. ಇದನ್ನು ರೂಪಾಯಿ ಲೆಕ್ಕದಲ್ಲಿ ಇಳಿಸಿ, ಬ್ರೇಕ್ ಅಪ್ ತೋರಿಸಲಾಗಿದೆ.

– ರಾಜ್ಯ ತೆರಿಗೆ ಆದಾಯದಿಂದ (*): 50 ಪೈಸೆ

– ಸಾಲದ ಮೂಲಕ: 27 ಪೈಸೆ

– ಕೇಂದ್ರ ತೆರಿಗೆ ಪಾಲಿನಿಂದ: 11 ಪೈಸೆ

– ಕೇಂದ್ರ ಸರ್ಕಾರದ ಸಹಾಯಾನುದಾನ: 6 ಪೈಸೆ

– ರಾಜ್ಯ ತೆರಿಗೆಯೇತರ ರಾಜಸ್ವದಿಂದ: 4 ಪೈಸೆ

– ಸಾರ್ವಜನಿಕ ಲೆಕ್ಕ (ನಿವ್ವಳ): 2 ಪೈಸೆ

(* ಜಿಎಸ್​ಟಿ ನಷ್ಟ ಪರಿಹಾರವನ್ನು ಒಳಗೊಂಡಿದೆ)

ರಾಜ್ಯ ಸರ್ಕಾರಕ್ಕೆ ಬರುವ ಆದಾಯವನ್ನು ಯಾವ್ಯಾವುದಕ್ಕೆ ಖರ್ಚು ಮಾಡುತ್ತದೆ ಎಂಬುದನ್ನು ಸಹ ಇಲ್ಲಿ ನೀಡಲಾಗಿದೆ:

– ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ: 18 ಪೈಸೆ

– ಸಾಲ ತೀರಿಸಲು: 17 ಪೈಸೆ

– ಇತರ ಆರ್ಥಿಕ ಸೇವೆಗಳು: 14 ಪೈಸೆ

– ಶಿಕ್ಷಣ: 12 ಪೈಸೆ

– ಸಮಾಜ ಕಲ್ಯಾಣ: 8 ಪೈಸೆ

– ಆರೋಗ್ಯ: 6 ಪೈಸೆ

– ಇತರ ಸಾಮಾಜಿಕ ಸೇವೆಗಳು: 5 ಪೈಸೆ

-ನೀರು ಪೂರೈಕೆ ಮತ್ತು ನೈರ್ಮಲ್ಯ: 3 ಪೈಸೆ

– ಇತರ ಸಾಮಾನ್ಯ ಸೇವೆಗಳು: 18 ಪೈಸೆ

ಒಟ್ಟಾರೆಯಾಗಿ ಕರ್ನಾಟಕ ಬಜೆಟ್ 2022 ಯಾವ್ಯಾವುದಕ್ಕೆ ಎಷ್ಟು ಹಂಚಿಕೆ ಆಗಿದೆ ಎಂಬ ವಿವರ ಹೀಗಿದೆ (ಕೋಟಿ ರೂಪಾಯಿಗಳಲ್ಲಿ):
– ಶಿಕ್ಷಣ: ಶೇ 12- 31,980

– ಜಲ ಸಂಪನ್ಮೂಲ: ಶೇ 8- 20,601

– ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ: ಶೇ 6- 17,325

– ನಗರಾಭಿವೃದ್ಧಿ: ಶೇ 6- 16,076

– ಕಂದಾಯ: ಶೇ 5- 14,388

– ಆರೋಗ್ಯ ಮತ್ತು ಕುಟುಂಬ ಕಲ್ಯಾಣ: ಶೇ 5- 13,982

– ಇಂಧನ: ಶೇ 5- 12,635

– ಒಳಾಡಳಿತ ಮತ್ತು ಸಾರಿಗೆ: ಶೇ 4- 11,272

– ಲೋಕೋಪಯೋಗಿ: ಶೇ 4- 10,477

– ಸಮಾಜ ಕಲ್ಯಾಣ: ಶೇ 3- 9,389

– ಕೃಷಿ ಮತ್ತು ತೋಟಗಾರಿಕೆ: ಶೇ 3- 8,457

– ಮಹಿಳಾ ಮತ್ತು ಮಕ್ಕಳ ಕಲ್ಯಾಣ: ಶೇ 2- 4,713

-ವಸತಿ: ಶೇ 1- 3,594

– ಆಹಾರ ಮತ್ತು ನಾಗರಿಕ ಸರಬರಾಜು: ಶೇ 1- 2,988

-ಇತರೆ: ಶೇ 35- 93,676

ಇದನ್ನೂ ಓದಿ: Karnataka Budget 2022; ಬಜೆಟ್​ನಲ್ಲಿ ಮೇಕೆದಾಟು ಯೋಜನೆಗೆ 1,000 ಕೋಟಿ ರೂ. ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ