Karnataka Budget Highlights: ಕರ್ನಾಟಕ ಬಜೆಟ್ 2022ರ ಗಾತ್ರ 2,65,720 ಕೋಟಿ ರೂ.; ಯಾವ ಕ್ಷೇತ್ರಕ್ಕೆ ಎಷ್ಟು ಹಣ ಇಲ್ಲಿದೆ ಮಾಹಿತಿ
ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು 2022-23ನೇ ಸಾಲಿಗೆ 2,65,720 ಕೋಟಿ ಗಾತ್ರದ ರಾಜ್ಯ ಬಜೆಟ್ ಅನ್ನು ಮಾರ್ಚ್ 4ನೇ ತಾರೀಕಿನಂದು ಮಂಡಿಸಿದ್ದಾರೆ.
ಮೊದಲ ಬಾರಿಗೆ 2022-23ನೇ ಸಾಲಿಗೆ ಇಂದು ಮಾರ್ಚ್ 4ನೇ ತಾರೀಕಿನ ಶುಕ್ರವಾರದಂದು ಬಜೆಟ್ (Karnataka Budget) ಮಂಡಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, 2,65,720 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದಾರೆ. ಇದರಲ್ಲಿ ಒಟ್ಟು ಸ್ವೀಕೃತಿ 2,61,972 ಕೋಟಿ ರೂ., ರಾಜಸ್ವ ಸ್ವೀಕೃತಿ 1,89,888 ಕೋಟಿ ರೂಪಾಯಿ, ಸಾರ್ವಜನಿಕ ಸಾಲ 72 ಸಾವಿರ ಕೋಟಿ ರೂಪಾಯಿ ಸೇರಿದಂತೆ ಬಂಡವಾಳ ಸ್ವೀಕೃತಿ 72,009 ಕೋಟಿ ರೂಪಾಯಿ ಅಂದಾಜಿಸಿದ್ದಾರೆ. ಇನ್ನು ವೆಚ್ಚದ ಕಡೆಗೆ ನೋಡಿದರೆ 2,65,720 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ರಾಜಸ್ವ ವೆಚ್ಚ 2,04,587 ಕೋಟಿ, ಬಂಡವಾಳ ವೆಚ್ಚ 46,595 ಕೋಟಿ ರೂಪಾಯಿ ಹಾಗೂ ಸಾಲ ಮರುಪಾವತಿಗೆ 14,179 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಇನ್ನು ವಿವಿಧ ವಲಯಗಳಿಗೆ ಮೀಸಲಾದ ಹಣದ ವಿವರ ಹೀಗಿದೆ: – ಕೃಷಿ ಮತ್ತು ಪೂರಕ ಚಟುವಟಿಕೆಗಳು: 33,700 ಕೋಟಿ ರೂ. – ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ: 68,479 ಕೋಟಿ ರೂ. – ಆರ್ಥಿಕ ಅಭಿವೃದ್ಧಿಗೆ ಉತ್ತೇಜನ: 55,657 ಕೋಟಿ ರೂ. – ಬೆಂಗಳೂರು ಸಮಗ್ರ ಅಭಿವೃದ್ಧಿಗೆ: 8,409 ಕೋಟಿ ರೂ. – ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ: 3102 ಕೋಟಿ ರೂ. – ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆ: 56,710 ಕೋಟಿ ರೂ. – ಮಹಿಳೆಯರ ಸಬಲೀಕರಣ ಹಾಗೂ ಕ್ಷೇಮಾಭಿವೃದ್ಧಿಗೆ 43,188 ಕೋಟಿ ರೂ. – ಮಕ್ಕಳ ಆಯವ್ಯಯಕ್ಕೆ ಅನುದಾನ 40,944 ಕೋಟಿ ರೂ. – ಎಸ್ಸಿಎಸ್ಪಿ/ಟಿಎಸ್ಪಿಗೆ 28,234 ಕೋಟಿ ರೂ. – ಆರೋಗ್ಯ, ಶಿಕ್ಷಣ, ಕೌಶಲಾಭಿವೃದ್ಧಿ ಮತ್ತು ಇತರ ಜನಕಲ್ಯಾಣ ಕಾರ್ಯಕ್ರಮಗಳಿಗೆ 6,329 ಕೋಟಿ ರೂ. ಹೆಚ್ಚುವರಿ ಅನುದಾನ
ಇದನ್ನೂ ಓದಿ: Karnataka Budget 2022: ಕರ್ನಾಟಕದ ಅಭಿವೃದ್ಧಿಗೆ ಪಂಚಸೂತ್ರಗಳ ಆಧಾರದಲ್ಲಿ ಬಜೆಟ್; ಯಾವ ಇಲಾಖೆಗೆ ಎಷ್ಟು ಅನುದಾನ?
Published On - 1:35 pm, Fri, 4 March 22