Budget 2023 Live: ಬಜೆಟ್ ಮಂಡನೆಗೆ ಮೊದಲೇ ಷೇರು ಮಾರುಕಟ್ಟೆಯಲ್ಲಿ ಆಶಾದಾಯಕ ಬೆಳವಣಿಗೆ, ಬಲಗೊಂಡ ರೂಪಾಯಿ
ಡಾಲರ್ ಎದುರು ರೂಪಾಯಿ ಮೌಲ್ಯ ಬಲಗೊಂಡಿರುವುದು ಭಾರತೀಯರಲ್ಲಿ ಉತ್ಸಾಹ ಮೂಡಿಸಿದೆ. ಎನ್ ಎಸ್ ಈ ಷೇರು ಸೂಚ್ಯಂಕದಲ್ಲಿ 59,911 ಪಾಯಿಂಟ್ ಗಳ ಜಿಗಿತ ನಿಜಕ್ಕೂ ಹೊಸ ನಿರೀಕ್ಷೆಗಳಿಗೆ ಇಂಬು ನೀಡಿದೆ.
ಬೆಂಗಳೂರು: ಕೇಂದ್ರ ಯಾವುದೇ ಸರ್ಕಾರ ಅಧಿಕಾರದಲ್ಲಿರಲಿ, ಹಣಕಾಸು ಸಚಿವರು (finance minister) ಆ ಸಾಲಿನ ಬಜೆಟ್ ಮಂಡಿಸುವ ದಿನ ಜನ ಸಾಮಾನ್ಯರು ಅದರಲ್ಲೂ ವಿಶೇಷವಾಗಿ ಮಧ್ಯಮ ಕುಟುಂಬಗಳ ವರ್ಗ (middle class families) ಹತ್ತಾರು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತದೆ. 2023-24 ನೇ ಸಾಲಿನ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಇನ್ನು ಕೆಲವೇ ಕ್ಷಣಗಳಲ್ಲಿ ಮಂಡಿಸಲಿದ್ದಾರೆ. ಬಜೆಟ್ ಮಂಡನೆಗೆ ಮೊದಲೇ ಷೇರುಪೇಟೆಯಲ್ಲಿ ಆಶಾದಾಯಕ ಬೆಳವಣಿಗೆ ಕಂಡುಬಂದಿರುವುದು, ಡಾಲರ್ ಎದುರು ರೂಪಾಯಿ ಮೌಲ್ಯ ಬಲಗೊಂಡಿರುವುದು ಭಾರತೀಯರಲ್ಲಿ ಉತ್ಸಾಹ ಮೂಡಿಸಿದೆ. ಎನ್ ಎಸ್ ಈ ಷೇರು ಸೂಚ್ಯಂಕದಲ್ಲಿ 59,911 ಪಾಯಿಂಟ್ ಗಳ ಜಿಗಿತ ನಿಜಕ್ಕೂ ಹೊಸ ನಿರೀಕ್ಷೆಗಳಿಗೆ ಇಂಬು ನೀಡಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 01, 2023 11:03 AM
Latest Videos