Budget 2022: ಬಜೆಟ್​ಗೆ ಪೂರ್ವವಾಗಿ ಜ. 31ಕ್ಕೆ ಸಂಸತ್​ನಲ್ಲಿ ಆರ್ಥಿಕ ಸಮೀಕ್ಷೆ ಮಂಡನೆ; ಏನಿದು ಆರ್ಥಿಕ ಸಮೀಕ್ಷೆ?

| Updated By: Srinivas Mata

Updated on: Jan 31, 2022 | 11:19 AM

ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆಯನ್ನು ಜನವರಿ 31ನೇ ತಾರೀಕಿನಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜ.31ರಂದು ಮಂಡಿಸಲಿದ್ದಾರೆ.

Budget 2022: ಬಜೆಟ್​ಗೆ ಪೂರ್ವವಾಗಿ ಜ. 31ಕ್ಕೆ ಸಂಸತ್​ನಲ್ಲಿ ಆರ್ಥಿಕ ಸಮೀಕ್ಷೆ ಮಂಡನೆ; ಏನಿದು ಆರ್ಥಿಕ ಸಮೀಕ್ಷೆ?
ಸಾಂದರ್ಭಿಕ ಚಿತ್ರ
Follow us on

ಬಜೆಟ್ (Union Budget 2022) ಪೂರ್ವವಾಗಿ ಆರ್ಥಿಕ ಸಮೀಕ್ಷೆಯನ್ನು ಸಂಸತ್​ನಲ್ಲಿ ಜನವರಿ 31ರ ಸೋಮವಾರದಂದು ಮಂಡಿಸಲಾಗುವುದು. ಆರ್ಥಿಕತೆ ಸ್ಥಿತಿ ಹೇಗಿದೆ ಮತ್ತು ನೀತಿ ನಿರೂಪಣೆ, ಜಿಡಿಪಿಯ ಅಂದಾಜು ಮಾಡಿದಂತೆ ಆಗದೆ ಉಳಿದಿದ್ದು, ಕೆಲವು ಸಲ ಮಹತ್ತರ ಮಾರ್ಜಿನ್ ತಿಳಿಸಲಿದೆ. ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಭಾಷಣ ಮುಗಿದ ಮೇಲೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಿದ್ದಾರೆ. ಏಪ್ರಿಲ್ 1, 2022ರಿಂದ ಆರಂಭವಾಗುವ ಮುಂದಿನ ಹಣಕಾಸು ವರ್ಷಕ್ಕೆ ಕೇಂದ್ರ ಬಜೆಟ್​ ಅನ್ನು ಅವರು ಮಂಡಿಸಲಿದ್ದಾರೆ. ಅಂದಹಾಗೆ ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆಯಲ್ಲಿ ಅತಿ ಮುಖ್ಯವಾಗಿ ಎದುರು ನೋಡುತ್ತಿರುವ ಅಂಕಿ- ಅಂಶಗಳೇನು ಅಂದರೆ, ಅದು ಮುಂದಿನ ಹಣಕಾಸು ವರ್ಷಕ್ಕೆ ಅಂದಾಜು ಮಾಡಿರುವ ಜಿಡಿಪಿ ಎಷ್ಟು ಎಂಬ ಬಗ್ಗೆ. ಈ ಆರ್ಥಿಕ ಸಮೀಕ್ಷೆಯನ್ನು ಮುಖ್ಯ ಆರ್ಥಿಕ ಸಲಹೆಗಾರ ಸಿದ್ಧಪಡಿಸಿದ್ದಾರೆ. ಈ ಹಿಂದಿನ ಆರ್ಥಿಕ ಸಮೀಕ್ಷೆಯು ಕೊವಿಡ್-19 ಬಿಕ್ಕಟ್ಟಿನ ಮಧ್ಯೆ ಮಂಡಿಸಲಾಗಿತ್ತು.

ಈ ಬಾರಿ ಆರ್ಥಿಕ ಸಮೀಕ್ಷೆಯಲ್ಲಿ ಕೊರೊನಾ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳುವ ವಿಚಾರಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ. ಆದರೂ ಜಿಎಸ್​ಟಿ ಸಂಗ್ರಹ ಮತ್ತು ಕಾರ್ಪೊರೇಟ್​ ಲಾಭಗಳು ಬಹಳ ಮುಖ್ಯವಾದ ಏರಿಕೆ ಹಾದಿಯತ್ತ ಬೊಟ್ಟು ಮಾಡಿದೆ. ಆರ್ಥಿಕ ಸಮೀಕ್ಷೆ ಮಂಡನೆ ಕೆಲ ದಿನಗಳ ಮುಂಚೆ, ಸರ್ಕಾರವು ಅರ್ಥಶಾಸ್ತ್ರಜ್ಞ ವಿ. ಅನಂತ ನಾಗೇಶ್ವರನ್ ಅವರನ್ನು ಹೊಸ ಮುಖ್ಯ ಆರ್ಥಿಕ ಸಲಹೆಗಾರರಾಗಿ ನೇಮಿಸಲಾಗಿದೆ. ಈ ಹಿಂದೆ ಮುಖ್ಯ ಸಲಹೆಗಾರರಾಗಿ ಇದ್ದವರು ಕೆ.ವಿ. ಸುಬ್ರಮಣಿಯನ್. ಕಳೆದ ವರ್ಷ ಡಿಸೆಂಬರ್​ನಲ್ಲಿ 3 ವರ್ಷದ ಅವರ ಅವಧಿ ಮುಗಿದಿತ್ತು. 2021-22ಕ್ಕೆ ಆರ್ಥಿಕ ಸಮೀಕ್ಷೆಯು ಮುಂದಿನ ಹಣಕಾಸು ವರ್ಷಕ್ಕೆ ಶೇ 9ರಷ್ಟು ಬೆಳವಣಿಗೆ ದರ ಅಂದಾಜು ಮಾಡಲಾಗಿತ್ತು. ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯು ಕೊರೊನಾ ಬಿಕ್ಕಟ್ಟಿನಿಂದ ಆರ್ಥಿಕತೆ ಚೇತರಿಕೆ ತೋರಿಸುತ್ತದೆ ಎನ್ನಲಾಗಿತ್ತು.

ಕಳೆದ ಸಮೀಕ್ಷೆಯನ್ನು ಕೊವಿಡ್​ ಸಮೀಕ್ಷೆಯನ್ನು 2021ರ ಜನವರಿಯಲ್ಲಿ ಮಂಡಿಸಲಾಗಿತ್ತು. 2021-22ನೇ ಹಣಕಾಸು ವರ್ಷಕ್ಕೆ ಶೇ 11ರ ದರದಲ್ಲಿ ಅಂದಾಜಿಸಲಾಗಿತ್ತು. ಆದರೆ ಭಾರತದ ಸಾಂಖ್ಯಿಕ ಸಚಿವಾಲಯವು ಪ್ರಸಕ್ತ ಹಣಕಾಸು ವರ್ಷಕ್ಕೆ ಶೇ 9.2ರ ಬೆಳವಣಿಗೆ ದರ ಅಂದಾಜಿಸಲಾಗಿತ್ತು. 2020-21ರ ಹಣಕಾಸು ವರ್ಷಕ್ಕೆ ಆರ್ಥಿಕತೆಯು ಶೇ 7.3ರಷ್ಟು ಕುಸಿಯಿತು. ಆದರೆ 2020ರಲ್ಲಿ ಕೊವಿಡ್ ಬಿಕ್ಕಟ್ಟಿಗೂ ಮುಂಚೆ ಅಂದಾಜು ಮಾಡಿದ್ದ ಆರ್ಥಿಕ ಸಮೀಕ್ಷೆಯಲ್ಲಿ ಶೇ 6ರಿಂದ ಶೇ 6.5ರಷ್ಟು ಬೆಳವಣಿಗೆ ನಿರೀಕ್ಷೆ ಮಾಡಲಾಗಿತ್ತು.

ಕಳೆದ ಕೆಲವು ವರ್ಷಗಳಿಂದ ಆರ್ಥಿಕ ಸಮೀಕ್ಷೆಯನ್ನು ಎರಡು ಸಂಪುಟದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಮೊದಲನೆಯದರಲ್ಲಿ ಭಾರತದ ಆರ್ಥಿಕತೆ ಎದುರಿಸುತ್ತಿರುವ ಸವಾಲುಗಳಿದ್ದಲ್ಲಿ, ಎರಡನೆಯದರಲ್ಲಿ ಕಳೆದ ವರ್ಷದ ಬಗ್ಗೆ ವಿಸ್ತೃತವಾದ ಪರಿಶೀಲನೆ ಇರುತ್ತದೆ. ಜತೆಗೆ ಸರ್ಕಾರದ ಪ್ರಮುಖ ಯೋಜನೆಗಳು, ಮುಖ್ಯ ನೀತಿಗಳು ಮತ್ತು ಅದರ ಫಲಿತಾಂಶಗಳು ಮಾಹಿತಿಯೂ ಇರುತ್ತದೆ. ಇನ್ನು ಸಮೀಕ್ಷೆಯಲ್ಲಿ ಆರ್ಥಿಕ ಬೆಳವಣಿಗೆಯ ಅಂದಾಜು ಮುಂದಿಟ್ಟು, ಆರ್ಥಿಕತೆ ಬೆಳವಣಿಗೆ ಕಾಣುತ್ತದೋ ಅಥವಾ ಹಿನ್ನಡೆಯೋ ಎಂಬ ಬಗ್ಗೆ ಕಾರಣ ಸಹಿತ ವಿವರಿಸಲಾಗುತ್ತದೆ.

ಇದನ್ನೂ ಓದಿ: Budget 2022: ಫೆ 1ರಂದು ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ: ಇಲ್ಲಿದೆ ಬಜೆಟ್ ಬಗ್ಗೆ ನೀವು ತಿಳಿಯಬೇಕಾದ ಮುಖ್ಯ ಮಾಹಿತಿ